ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೋಡೆಯ ಮೇಲಿನ ಹಲ್ಲಿ ಲೊಚಗುಟ್ಟುತಿದೆ…

ಈ ಬಾರಿ

ಜಾನ್ ಸುಂಟಿಕೊಪ್ಪ

ಹಾಗಾಗಲಿಕ್ಕಿಲ್ಲ …
ಲೊಚಗುಟ್ಟುವ ಆ ಹಲ್ಲಿ
ಕೆರಳಿ ಬಾಲವರಳಿಸುತಿದೆ
ಮೂಲೆ ಸೇರಿದ ಜೇಡ
ಹೊಚ್ಚ ಹೊಸ ಬಲೆ ಹೆಣೆದಿದೆ
ಮತ್ತು ಅವಳು ತಣ್ಣಗೆ ಮಲಗಿದ್ದಾಳೆ,
ಬಹುಶಃ ನನ್ನಂತೆಯೇ ….

ಭುಗಿಲೇಳುವ ಜ್ವಾಲಾಮುಖಿಗಳ
ಬೆಚ್ಚಗೆ ಹೊದ್ದು
ತಣ್ಣಗೆ ಮಲಗುವುದೆಂದರೆ
ಗಂಡಸುತನಕ್ಕೆ ಸುಲಭವಲ್ಲ
ಮೊಗೆದು ಗೆಲ್ಲುವ ಕಲಹದಲಿ
ಯಾರು ಗೆದ್ದವರು!?
ಯಾರು ಸೋತವರು!?
 
ಅವಳ ನಗುವಿನಾಳದ ಕುಹಕ
ಅಣಕವಾಡುತ್ತೆ ….ಅಲ್ಲಿ ಆ
ಗೋಡೆಯ ಮೇಲಿನ ಹಲ್ಲಿಯ಼ಂತೆ
 
ಈ ಬಾರಿ
ಹಾಗಾಗಲಿಕ್ಕಿಲ್ಲ
ಅಂತರಂಗ ಬಹಿರಂಗದ
ಅಣುಅಣುವನೂ ಸ್ಪೋಟಿಸಬೇಕಿದೆ
ಹತ್ತಿರವಿದ್ದೂ ದೂರ ನಿಂತು
ಗುಲಾಬಿಯೊಂದನು ಅರಳಿಸಬೇಕಿದೆ
ಆದರೆ –
ಗೋಡೆಯ ಮೇಲಿನ ಹಲ್ಲಿ
ಲೊಚಗುಟ್ಟುತಿದೆ ..,
ಗೋಡೆಯ ತುಂಬಾ
ಲೊಚಗುಟ್ಟುವಿಕೆ ಹರಡಿದೆ
ಮತ್ತು ನಾನು ಬೆತ್ತಲೆ ಬೆಚ್ಚುತ್ತೇನೆ

‍ಲೇಖಕರು G

18 August, 2014

1 Comment

  1. mmshaik

    chennaagide kavana..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading