
ಜ್ಯೋತಿ ಎ

ಗೋಡೆಗಳನ್ನೆಬ್ಬಿಸಿದ್ದೇವೆ
ಮನೆಗಳ ರಕ್ಷಿಸಲೆಂದು
ಬೇಲಿಗಳ ನೆಟ್ಟಿದ್ದೇವೆ
ಮೃಗಗಳಿಂದ ಕಾಪಾಡಲೆಂದು
ಢಂಗೂರ ಸಾರಲಾಯಿತು
ಜಾಗತಿಕ ಹಳ್ಳಿಯ ಸೃಷ್ಟಿಸುತ್ತೇವೆಂದು
ಗ್ರಾಮಗಳಾಗಿದ್ದವು ಸದಾ
ಹಸಿರಿನ ಬಸಿರು
ನಗರಗಳು ಜನಿಸಿದವು ಅರಸುತ್ತ
ಜಗತ್ತಿನ ಸುಖಸಂಪತ್ತು
ಗ್ರಾಮಗಳೂ ಮುಖ ಮಾಡಿವೆ
ಮುಖವೇ ಇಲ್ಲದ ಮುಖವಾಡಗಳ ನಗರದತ್ತ
ಮನುಷ್ಯ ಕಳೆದುಹೋಗಿದ್ದಾನೆ
ತಾನೇ ನಿರ್ಮಿಸಿಕೊಂಡ
ದಟ್ಟ ಬೇಲಿಗಳ ಎತ್ತರದ ಗೋಡೆಗಳ ನಡುವೆ
ಹೂತುಹೋಗಿದ್ದಾನೆ ಆಳದಲ್ಲಿ
ದನಧನಗಳು ಸೃಷ್ಟಿಸಿರುವ
ಮನುಷ್ಯತ್ವದ ಸಮಾಧಿಯೊಳಗೆ





0 Comments