ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಗೊಂದಲವಿರುವದು ಸಂಶಯದ ಅನುರಣನದಲ್ಲಿ….' – ರಾಘವೇಂದ್ರ ಜೋಶಿ ಕವಿತೆ

ಮಾಹೆಯಾನ

ರಾಘವೇಂದ್ರ ಜೋಶಿ

ಬೆಳಗಿನ ಆರೂವರೆ.
ಗಡಿಯಾರದ
ಅಲಾರಾಂ
ನಿಲ್ಲಿಸುತ್ತಿದ್ದಂತೆ
ಮೇಲಿನ ಮನೆಯಲ್ಲಿ
ಕೊಬ್ಬರಿ ಕುಟ್ಟುವ ಸದ್ದು.
 
ಏಳು ಪಿಳ್ಳೆಗಳೊಂದಿಗೆ
ಠೀವಿಯಿಂದ
ರಸ್ತೆಗಿಳಿದ
ಕೋಳಿಯ ಪುಕ್ಕ
ಇದ್ದಕ್ಕಿದ್ದಂತೆ
ಬೆದರಿ ನಿಮಿರಿವೆ.
 
Hold on,
ಶಿಖರದಲ್ಲಿರುವ
ಕೋಗಿಲೆ
ಅಳಬುರಕ ಪಕ್ಷಿಯಲ್ಲ;
ಗೊಂದಲವಿರುವದು
ಸಂಶಯದ ಅನುರಣನದಲ್ಲಿ.

ಪರಾಗಸ್ಪರ್ಶ,ಪ್ರಸರಣ
ಮತ್ತು ಪ್ರಜನನ
ಎಲ್ಲವೂ ಎಷ್ಟು
ಸ್ಪಷ್ಟ,ಸರಳ,ನೇರ.
ಒಂದು ಮಾತಿಲ್ಲ
ಕತೆಯಿಲ್ಲ
ಮುಖಾಮುಖಿಯಿಲ್ಲ.
ಆದರೂ,
ತುತ್ತತುದಿ ಎಲೆಗೂ
ಪಾತಾಳದ ಬೇರಿಗೂ
ವರ್ಣತಂತುಗಳ ಮುಲಾಜಿದೆ.
 
ಹುಷಾರು,
ಇಲ್ಲಿನ ಬೆಂಕಿಯಿಂದ
ಏಳುವ ಕಿಡಿಗಳಿಗೆ
ಮಡಿಯಿಲ್ಲ,ಮೈಲಿಗೆಯಿಲ್ಲ.
ವ್ಯರ್ಥ ವಾದದಿಂದ
ದೂರವಿರುವದೂ ಒಂದು ಕಲೆ.

ತನ್ನ ಸುತ್ತಲೂ
ಮೋಹದ
ವರ್ತುಲ ಹೆಣೆಯುವ
ಹುಡುಗಿಗೆ ಈಗ
ತಿಂಗಳ ಮಾಹೆಯಾನ.
ಹುಷಾರು ತಪ್ಪಿ
ನೀರಲ್ಲಿ ನೆನೆಸಿಟ್ಟ
ಶರಟಿನೊಳಗೆ ಪೆನ್ನಿದೆ
ಅದರೊಳಗೂ ಕಲೆಯಿದೆ.
 
ಬಹುಶಃ
ಇವತ್ತಲ್ಲ ನಾಳೆ
ಲಿಟ್ಮಸ್ ಟೆಸ್ಟು ಮುಗಿಯಬಹುದು..
 

‍ಲೇಖಕರು G

24 October, 2013

9 Comments

  1. bharathi b v

    Litmus testige kone iruttadaa? Gottagthilla ! Kava a maatra chenda chendaaa

  2. ahalya

    ಕೊನೆಗೂ ಮಿಸ್ಸಿಂಗ್ ರಾ ಜೋ ಅವರ ದರ್ಶನ!

  3. jyothi

    Chennagide sir….

  4. Vidyashankar H

    Joshi, pleasure to read you always 🙂 Litmus Test is a perception… Nothing to prove anyone… Move on and enjoy life… It is your own!

  5. samyuktha

    Facebook nimmannu kareyuttide RJ 🙂

  6. malathi S

    ತುತ್ತತುದಿ ಎಲೆಗೂ
    ಪಾತಾಳದ ಬೇರಿಗೂ
    ವರ್ಣತಂತುಗಳ ಮುಲಾಜಿದೆ……………..
    ನಿಮ್ಮ ಬ್ಲಾಗ್ ನಲ್ಲೂ ಓದಿದ್ದೆ, ಈಗ ಪುನ:
    very nice!!

  7. Anil Talikoti

    ವ್ಯರ್ಥ ವಾದದಿಂದ ದೂರವಿರುವದೂ ಒಂದು ಕಲೆ–ಭಲೆ ಭಲೆ !

  8. nagraj.harapanahalli

    ತನ್ನ ಸುತ್ತಲೂ
    ಮೋಹದ
    ವರ್ತುಲ ಹೆಣೆಯುವ
    ಹುಡುಗಿಗೆ ಈಗ
    ತಿಂಗಳ ಮಾಹೆಯಾನ…….ಇಷ್ಟವಾಯಿತು. ಮೋಹದ ವರ್ತುಲವನ್ನು ಗಂಡು ಹೆಣ್ಣು ಸೇರಿಯೇ ಎಣೆಯುತ್ತವೆ.

  9. Anonymous

    nice poem

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading