ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಲ್ಜಾರ್ ಸಾಬ್..

ಗತ ಋತುವೊಂದು ಮರಳಿತು

ಗತ ಋತುವೊಂದು ಮರಳಿತು, ನೆಪ್ಪಲಿ ನೆಂದ, ಮೂಡಗಾಳಿಯೂ ಸಹ
ಹೀಗಾಗೋದು ಬಲು ಅಪರೂಪ, ಅಗೋ ಆ ಏಕಾಂತವೂ ಸಹ

ನೆಪ್ಪಿನ ಬುತ್ತಿ ಬಿಚ್ಚಲು, ಕಣ್ಣುಗಳು ಮಂಜು ಮಂಜು
ಬಲು ಕೆಡುಕೆನಿಸಿತು ಹನಿಗೂಡಲು, ಗತ ಅಪಮಾನವೂ ಸಹ

ಕಾಣುತ್ತಿವೆ ಬಿಂಬಗಳು ಒಡೆದೆರಡು, ಆವೇಶವೆತ್ತ ಈ ಕನ್ನಡಿಯಲ್ಲೂ
ಬಂದಿಹುದು ನನ್ನೊಡನೆ ಕೈಹಿಡಿದು, ಆ ನಿನ್ನ ಹಳೆಯ ತೆವಲೂ ಸಹ

ಅದೆಷ್ಟು ಕೊಳೆಮಾಡಿಕೊಳ್ಳುವುದು ದಿನವಿದು, ಧಿರಿಸನ್ನು
ಬೆಳಗಿನಲ್ಲಿ ರಾತ್ರಿಯ ಕಳಚಿತ್ತು, ಸಂಜೆಗೆ ಇರುಳನ್ನು ಧರಿಸಿಯೂ ಸಹ

ನೆನ್ನೆ ದಂಡೆಯಲ್ಲೊರಗಿ ಅದೆಷ್ಟು ಹೊತ್ತು ಮಾತಾಡಿದೆವು
ನಿನ್ನ ‘ಹೂಂ’ಕಾರವೇ ಇರಲಿಲ್ಲ, ಆ ಚಂದ್ರ ಮಾತಾಡಿದರೂ ಸಹ

ನಿಶ್ಯಬ್ದದಾವರಣದಲಿ ಬಲು ನೀಳ ನೀರವವೊಂದಿದೆ,
ನನ್ನೊಡನೆ ಮಾತಾಡಿತದು…..ಮಾತಾಡಿದೆ ನಾನೂ ಸಹ!

gulzar2

ಏಕ್ ಪುರಾನಾ ಮೌಸಮ್ ಲೌಟಾ

ಏಕ್ ಪುರಾನಾ ಮೌಸಮ್ ಲೌಟಾ, ಯಾದ್ ಭರಿ ಪುರುವಾಯೀ ಭೀ
ಐಸಾ ತೊ ಕಮ್ ಹೀ ಹೋತಾ ಹೈ, ವೊ ಭಿ ಹೊ ತನ್ಹಾಯೀ ಭೀ

ಯಾದೋಂಕಿ ಬೌಚಾರೋಂ ಸೆ ಜಬ್ ಪಲ್ಕೇಂ ಭೀಗನೇ ಲಗತೀ ಹೈ
ಕಿತನೀ ಸೌಂಧೀ ಲಗ್ತಿ ಹೈ ತಬ್ ಮಾಜಿ ಕಿ ರುಸವಾಯೀ ಭೀ

ದೋ ದೋ ಶಕ್ಲೇಂ ದಿಖ್ತೀ ಹೈಂ ಇಸ್ ಬೆಹಕೆ ಸೆ ಆಯಿನೇ ಮೇಂ
ಮೆರೆ ಸಾಥ ಚಲಾ ಆಯಾ ಹೈ, ಆಪಕಾ ಇಕ್ ಸೌದಾಯೀ ಭೀ

ಕಿತನೀ ಜಲ್ದೀ ಮೈಲಿ ಕರತಾ ಹೈ ಪೋಶಾಕೇಂ ರೋಜ್ ಫಲಕ್
ಸುಬಹ ಕೊ ರಾತ್ ಉತಾರೀ ಥೀ ಔರ ಶಾಮ್ ಕೊ ಶಬ್ ಪಹನಾಯೀ ಭೀ

ಕಲ್ ಸಾಹಿಲ್ ಪರ್ ಲೇಟೆ ಲೇಟೆ, ಕಿತನೀ ಸಾರೇ ಬಾತೇಂ ಕೀ
ಆಪ್ ಕಾ ಹೂಂಕಾರಾ ನಹೀ ಆಯಾ, ಚಾಂದ್ ನೆ ಬಾತ್ ಕರಾಯೀ ಭೀ

ಖಾಮೋಶಿ ಕಾ ಹಾಸಿಲ್ ಭೀ ಇಕ್ ಲಂಬೀ ಸಿ ಖಾಮೋಶಿ ಹೈ
ಉನಕೀ ಬಾತ್ ಸುನೀ ಭೀ ಹಮ್ನೆ, ಅಪನೀ ಬಾತ್ ಸುನಾಯೀ ಭೀ

 

‍ಲೇಖಕರು Admin

13 November, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading