ನೊಂದುಕೊಂಡ ಒಂದು ಜೀವ ಈಗ ಸಂತಸದ ಗದ್ದುಗೆಯಲ್ಲಿದೆ. ಉಮಾಶ್ರೀ ನಮಗೆಲ್ಲಾ ಪರಿಚಯವಾಗಿದ್ದೇ, ಅಥವಾ ತುಂಬಾ ಹತ್ತಿರವಾಗಿದ್ದೇ ಅವರು ಬಿಚ್ಚಿಟ್ಟ ನೋವು ನೆನಪುಗಳ ಮೂಲಕ. ಆಕೆ ಬದುಕನ್ನು ಗೆದ್ದುಕೊಂಡ ಬಗೆ ಬಹುಷಃ ಎಲ್ಲಾ ಪ್ರಶಸ್ತಿಗೂ ಮಿಗಿಲಾದದ್ದು. ತನ್ನಿಂದ ಕಳೆದು ಹೋದ ವಿದ್ಯಾಭ್ಯಾಸ, ತನ್ನಿಂದ ದೂರವಾದ ಬದುಕು ಎಲ್ಲವನ್ನೂ ಆಕೆ ಹಲ್ಲು ಕಚ್ಚಿ ಗೆದ್ದುಕೊಂಡಿದ್ದಾರೆ. ಮೊನ್ನೆ ತಾನೇ ರಾಜಕೀಯ ಶಾಸ್ತ್ರ ಎಂ ಎ ಪರೀಕ್ಷೆ ಬರೆದಿದ್ದಾರೆ. ಮಕ್ಕಳನ್ನು ದಡ ಮುಟ್ಟಿಸಿದ್ದಾರೆ.
ಈ ಎಲ್ಲ ಮಾಡಿ ಮುಗಿಸಿರುವಾಗ ಕಷ್ಟಗಳನ್ನು ಸೈಡ್ ವಿಂಗ್ ಗೆ ತಳ್ಳಿದ ಮೇಲೆಯೇ ಸಂತಸದ ಕ್ಷಣಗಳು ಇವರ ಬಾಗಿಲು ತಟ್ಟುತ್ತಿದೆ. ಈಗ ತಾನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಉಮಾಶ್ರೀಗೆ ಈ ಸಾಲಿನ ಅತ್ಯುತ್ತಮ ನಟಿ ಪ್ರಶಸ್ತಿ ಘೋಷಿಸಲಾಗಿದೆ. ನಮ್ಮೆಲ್ಲರೊಳಗೆ ಉಳಿದಿರುವ ಗುಲಾಬಿಗೆ ಒಂದು ನಮಸ್ಕಾರ. ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೇ…
ಚಿತ್ರ ಪ್ರಶಸ್ತಿಗಳ ವಿವರಗಳಿಗೆ ಭೇಟಿ ಕೊಡಿ: ಮ್ಯಾಜಿಕ್ ಕಾರ್ಪೆಟ್





ibbaru kannadiga-rige raashtra-prashasthi bandiruvudu kannada chitra-rangada amrutha-mahothsavda kodige… jai ho…