ಗುರುಮೂರ್ತಿಚಾರಿ ಬಿ
ಅವರವರ ದಾರಿ
ಅವರವರಿಗೆ
ಕೊನೆಗೋಗಿ ಎಲ್ಲರೂ ಸೇರುವುದೊಂದೇ ಊರಿಗೆ
ಕಷ್ಟ ಸುಖಗಳಿಗಾಗು
ನಿನ್ನ ಹತ್ತಿರದವರಿಗೆ
ಬೇರೆಲ್ಲಾ ನುಡಿ ಕೊಂಕು
ಎತ್ತಿ ಬಿಸಾಡು ಮೋರಿಗೆ

ಜೊತೆ ಸಾಗುವಾಗ ಜನ
ಬಂದರೆ ನಿನ್ನ ಬಳಿಗೆ
ಮುಗುಳ್ನಗೆ ಇರಲಿ
ಮೊಗದಲಿ ಅರೆಗಳಿಗೆ
ಮನದಲ್ಲಿ ನುಂಗದಿರು
ದ್ವೇಷದ ಕಹಿ ಗುಳಿಗೆ
ಯಾರಿಗೆ ಗೊತ್ತು ನಮ್ಮ
ಜೀವ ನಿಲ್ಲುವ ಗಳಿಗೆ






0 Comments