ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಸೊಳ್ಳೆ ಫ್ರೆಂಡು ಒದರಿದ್ದು ನೆನಪಿಗೆ ಬಂತು…

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು.

ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು, ಡಯಟಿಂಗ ಪುರಾಣ ಹಾಸ್ಯ ಲೇಖನ ಸಂಕಲನ… ಮಕ್ಕಳಿಗಾಗಿ ಅಜ್ಜನ ಹಲ್ಲುಸೆಟ್ಟು (ಮಕ್ಕಳ‌ ಕವಿತೆಗಳ ಸಂಕಲನ) ಮಾಸಂಗಿ (ಮಕ್ಕಳು ಬರೆದ ಕತೆಗಳ ಸಂಪಾದನೆ) ಮಕ್ಕಳೇನು ಸಣ್ಣವರಲ್ಲ (ಮಕ್ಕಳ ಕತಾ ಸಂಕಲನ) ಕೃತಿಗಳು…

ಬಹತೇಕ ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಲಲಿತ ಪ್ರಬಂಧ, ಹಾಸ್ಯ ಲೇಖನ, ಮಕ್ಕಳ‌ ಕತೆ, ಕವಿತೆ, ನಾಟಕಗಳು ಪ್ರಕಟವಾಗಿವೆ. ಅಕ್ಷರ ಸಾಹಿತ್ಯ ವೇದಿಕೆ ಸಂಚಾಲಕರಾಗಿ ಹಲವಾರು ಮಕ್ಕಳ‌ ಕಮ್ಮಟ, ರಂಗಶಿಬಿರ, ಸಾಹಿತ್ಯಿಕ‌ ಚಟುವಟಿಕೆಗಳನ್ನು ಸಂಘಟಿಸಿದ್ದಾರೆ…

17

ವಿಶೇಷ ವಿಮಾನದಲ್ಲಿ ಆ ಗ್ರಹ ನೋಡಲು ಕರೆದೊಯ್ದರು.. ಎಲ್ಲಿ ನೋಡಿದರಲ್ಲೂ ಬರುಡು. ಬಿಸಿಲು. ಉಕ್ಕುತ್ತಿರುವ ಅಗ್ನಿ ಪರ್ವತಗಳು, ನೀರಿನಂತೆ ಹರಿಯುತ್ತಿರುವ ಲಾವಾ… ಧೂಳು… ಹೊಗೆ.. ಕ್ಷಣ ಕ್ಷಣಕ್ಕೂ ನಡೆಯುತ್ತಿದ್ದ ಭೂಕಂಪಗಳು. ಒಂದು ಗಂಟೆ ಸುತ್ತಿದರೂ ಕಂಡಿದ್ದು ಇದೆ ಮಸಣ ಸದೃಶ ಪರಿಸರ.. ಅದೆಲ್ಲ ನೋಡಿ ಸಾಕಾಗಿ ಭಯದಿಂದ “ಅಯ್ಯೊ.. ಸ್ಟಾಪ್ ಮಾಡಿ ನನಗೆ ನೋಡಲು ಆಗುತ್ತಿಲ್ಲ… ಏನಿದು…? ಯಾವ ಪ್ರದೇಶ ಇದು?”
“ಇದು ನಮ್ಮ ಗ್ರಹ”
“ಅಲ್ಲಿ ಭೂಕಂಪ್ ನಡೆತಿದೆ.. ಜ್ಚಾಲಾಮುಖಿ ಎದ್ದಿದೆ… ಬೇಗ ಪಾರಾಗಿ ಸತ್ತು ಹೋಗಿಬಿಡತೀವಿ ಫಾಸ್ಟ ಹೋಗಿ”
“ನಿತ್ಯ ಇಲ್ಲಿ ಹೀಗೆ ನಡೆಯೋದು. ನಮಗೆಲ್ಲಾ ಇದು ಅಭ್ಯಾಸವಾಗಿ ಬಿಟ್ಟಿದೆ. ಮುಂದೆ ನೋಡಿ”
“ನೀವು ಎಲ್ಲಿ ಕರೆದುಕೊಂಡು ಹೋಗುತ್ತಿದ್ದೀರಿ..”
“ಅದೆ ನೊಡಿ ಇದು ನಮ್ಮ ಗ್ರಹ”
ಎಲ್ಲಿನೋಡಿದರಲ್ಲಿ… ಮರುಭೂಮಿ, ಪಾಳುಬಿದ್ದ ಅವಶೇಷಗಳು ಹಾಳು ಬೆಟ್ಟಗುಡ್ಡಗಳು ಎದುರಾದವು… “ಇದು…”
“ಇದು ನಮ್ಮದೆ ಗ್ರಹ”
“ನೀವೆಲ್ಲಾ ಹೇಗಿರತಿರಾ?”
“ಇಂತಹ ಲ್ಯಾಬಗಳಲ್ಲಿ”
“ಅಂದ್ರೆ …”
“ಅಂದ್ರೆ ಇಲ್ಲ.. ಏನೂ ಇಲ್ಲ.. ನಮ್ಮದು ಇಷ್ಟ ಬದುಕು”
“ಅಯ್ಯು ಹೇಗಾಯಿತು ಇದೆಲ್ಲ…?”
“ನಮ್ಮ ಬಾಸ್ ಹೇಳತಾರೆ ಬನ್ನಿ” ಎಂದು ಮತ್ತೆ ಕ್ಷಣಾರ್ಧದಲ್ಲಿ ಅದೆ ಲ್ಯಾಬ್‌ಗೆ ಬಂದರು.
“ಹೇಗಿತ್ತು ನಮ್ಮ ಗ್ರಹ.. ಹೇಗನಿಸ್ತು… ಖುಷಿ ಕೊಟ್ಟಿತಲ್ಲ” ಎಂದು ನಕ್ಕಿತು ನಾಯಕ
“ಖುಷಿನಾ! ಇಲ್ಲಿ ನಿಲ್ಲೋಕಾಗುತ್ತಿಲ್ಲ. ನೋಡೋಕೆ ಆಗತ್ತಿಲ್ಲ.. ಹೇಗೆಲ್ಲ.. ಬದಕುತಿರಿ.. ಒಂದಿಷ್ಟು ಹಸಿರಿಲ್ಲ.. ತಂಪಿಲ್ಲ… ಎಲ್ಲವೂ ರಣ ರಣ ಅಂತಿದೆ” ಎಂದು ಕೇಳಿದೆ
“ಇಲ್ಲೆ… ಎ.ಸಿ ಲ್ಯಾಬ್‌ಗಳಲ್ಲಿ, ಅನಿವಾರ್ಯ… ನೀವು ಹಾಗೆ ಕೇಳಿದ್ದು ನಿಜ. ಒಂದು ಕಾಲಕ್ಕೆ ಭೂಮಿಯಂತೆ ಸಮೃದ್ಧವಾಗಿತ್ತು. ಸುಮಾರು ಲಕ್ಷ ವರುಷಗಳ ಹಿಂದೆ. ನಿಮ್ಮ ನಾಗರಿಕತೆಗಿಂತ ಹತ್ತು ಪಟ್ಟು ಹಿರಿಯ ನಾಗರಿಕತೆ ನಮ್ಮದು. ಆದರೆ ಹೊಸದನ್ನು ಕಂಡು ಹಿಡಿಯುವ ಭರದಲ್ಲಿ ಎಲ್ಲವನ್ನು ಕಳಕೊಂಡ್ವಿ” ಎಂದಿತು ಏಲಿಯನ್ ಮುಖ್ಯಸ್ಥ.
“ಅಂದ್ರೆ…….” ಗಾಭರಿಯಿಂದ ಕೇಳಿದೆ
“ನಿಮ್ಮ ಭೂಮಿಗಿಂತಲೂ ಅಂದವಾಗಿತ್ತು ನಮ್ಮ ಗ್ರಹ. ನಿಮ್ಮಲ್ಲಿಯ ಪ್ರಗತಿಯ ದಾಹ ಎದ್ದಿದೆಯಲ್ಲ ಹಾಗೆ ನಮ್ಮಲ್ಲೂ ಮುಂದುವರೆಯಬೇಕು ಎನ್ನುವ ಪೈಪೋಟಿ ನಡೆಯಿತು. ನನ್ನ ಹೆಸರು ಇತಿಹಾಸದಲ್ಲಿ ಉಳಿಯಲಿ ಎನ್ನುವ ಮೊಂಡು ಪೈಪೋಟಿ ನಡೆಯಿತು. ಸಂಶೋಧನೆಯ ಪೈಪೋಟಿಯ ಭರದಲ್ಲಿ ಹೊಸ ಆವಿಷ್ಕಾರಗಳಾದವು.. ನಿಮ್ಮಲ್ಲಿ ೪ಜಿ ಹೋಗಿ ೫ಜಿ ಯಲ್ಲಿದ್ದೀರಿ, ನಾವಾಗಲೆ ೧೦೦ಜಿಗೆ ಹೋಗಿದ್ದೀವಿ.ಇವೆಲ್ಲ ಕಾರಣಕ್ಕಾಗಿ ಹಸಿರೆಲ್ಲ ಬರಡಾಯಿತು. ಪ್ರಾಣಿ ಪಕ್ಷಿಗಳೆಲ್ಲ ಮರೆಯಾದವು. ಪ್ರತಿಕೂಲ ಹವಾಮಾನ ಉಂಟಾಗಿ ನೀರು ಆಹಾರಕ್ಕಾಗಿ ಯುದ್ಧ ಮೊದಲಾದವುಗಳಿಂದ ಇಡಿ ಗ್ರಹ ಬರಡಾಯಿತು. ನಿಮ್ಮ ಡಾರ್ವಿನ್ ಸಿದ್ಧಾಂತ ನಿಜ ಇದೆ. ಪ್ರಕೃತಿ ಬದಲಾದಂತೆ ನಮ್ಮ ದೇಹ ರಚನೆ ಬದಲಾಯಿತು. ಆಹಾರದ ಅಭಾವವಾಗಿ ಊಟ ಟ್ಯಾಬಲೆಟ್ ರೂಪ ಪಡೆದಾಗ ಅಂಗಾಗಗಳೆ ಮಾಯವಾದವು. ವಿಚಿತ್ರವಾದ ಈ ರೂಪ ಬಂದಿತು”

“ಓ ಮೈ ಗಾಡ್! ಹಾಗಾದ್ರೆ ಸಂಶೋಧನೆ ಮಾಡೋದು ತಪ್ಪಾ? ನಮ್ಮ ಶಾಲೆಯಲ್ಲಿ ಅದು ಕಂಡು ಹಿಡಿ ಇದು ಕಂಡು ಹಿಡಿ ಅಂತ ಒತ್ತಾಯಿಸ್ತಾರೆ.. ಪ್ರೊಜೆಕ್ಟ ಮಾಡಂತಾರೆ.. ಅದಕ್ಕಾಗಿ ಇನ್ಪಾಯರ್ ಅವಾರ್ಡ ಅಂತನೂ ಇಟ್ಟಿದ್ದಾರೆ”

“ನಮ್ಮ ಹಾಗೆ ಪೈಪೋಟಿಗೆ ಬಿದ್ರೆ ಇದೆ ಆಗೋದು. ಮಾಲಿಕೂಲ್ ಫ್ಯೂಜನ್ ಆಗಿ ನಮ್ಮ ಅವಸ್ಥೆ ಹೀಗಾಗಿದೆ. ನಾವು ನಿಮ್ಮಲ್ಲಿ ಬರುತ್ತಿದ್ದು ಅಲ್ಲಿಯ ಪರಿಸರವನ್ನು ನೋಡಿ ಕ್ಷಣಕಾಲ ಆಸ್ವಾದಿಸಲು. ಒಂದು ರೀತಿ ಯಾತ್ರೆ ತರಹ. ಮತ್ತೆ ಇಲ್ಲಿ ಆ ಪರಿಸರವನ್ನು ಸೃಷ್ಟಿಸೋದು ಸಾಧ್ಯವಾ ? ಅಂತ ಯೋಚಿಸೋಕೆ. ಆದರೆ ಇಲ್ಲಿ ಎಲ್ಲವೂ ಮೀರಿದೆ. ಟೆಂಪರೇಚರ್ ಮಿನಿಮಮ್ ಲೇವಲ್ ಕ್ರಾಸ್ ಆಗಿದೆ. ಏನು ಮಾಡೋಕಾಗಲ್ಲ ಆಗಾಧ ಬುದ್ಧಿಮತ್ತೆ ಇದೆ. ಅದನ್ನು ಬಳಸಿಕೊಂಡು ಬದುಕುತ್ತಿದ್ದೇವೆ. ಸೋಲಾರ್ ಪ್ಲಾಸ್ಮಾ ಬಳಸಿಕೊಂಡು ಪರ್ಯಾಯ ಆಹಾರ ಸೃಷ್ಟಿಸಿಕೊಂಡಿದ್ದೇವೆ. ಯಾವ ಇಚ್ಛಾ ಶಕ್ತಿಯು ನಮಗಿಲ್ಲ. ಮಕ್ಕಳೆ ನಿಮಗೆ ಹೇಳತಿನಿ ದಯವಿಟ್ಟು ಸಂಶೋಧನೆ ಅನ್ನೋದು ಮನುಷ್ಯನಿಗೆ ಒಳಿತನ್ನು ಮಾಡತಿರಲಿ. ನೀವು ಹೊರಟಿರುವುದು ನಮ್ಮ ಹಾದಿಯಲ್ಲಿ. ನೋಡಿ…..” ನಮ್ಮ ಹಿರಿಯರು ಮಾಡಿಟ್ಟು ಹೋಗಿರುವ ವಿಡಿಯೋ ಕ್ಲಿಪ್ ತೋರಿಸಿದರು.
ಎಲ್ಲವೂ ಭೂಮಿಯಲ್ಲಿ ಈಗ ನಡೆಯುತ್ತಿರುವ ಪ್ರಯೋಗಗಳೆ ಆಗಿದ್ದವು. ಐಷಾರಾಮಿ ಬದುಕಿಗಾಗಿ ನಡೆಸುತ್ತಿದ್ದ ಆವಿಷ್ಕಾರಗಳು. ಕಂಡುಹಿಡಿಯುವ ಭರದಲ್ಲಿ ಆಗುವ ಅನಾಹುತಗಳನ್ನೆಲ್ಲ ಮರೆತು ತಾಪಮಾನ ಏರಿಕೆಯಿಂದ ಅಲ್ಲಿ ಹಸಿರು ಬತ್ತಿದ್ದನ್ನು ತೋರಿಸಿದರು.
“ಅಮ್ಮ! ಓ ಮೈ ಗಾಡ್ ನಾವು ನಿಮ್ಮ ಹಾಗೆ ಆಗ್ತಿವಾ?” ಎಂದೆ.

“ಏಸ್….ಆಫ್ ಕೋರ್ಸ. ನೀವು ಹೀಗೆ ಮುಂದುವರೆದರೆ ನಮ್ಮ ಹಾಗೆ ಆಗತಿರಿ. ಬುದ್ಧಿ ಕಟ್ಟಿಕೊಂಡು ಏನ್ಮಾಡತಿರಿ. ಸುಖ ಇಲ್ಲದಿದ್ದರೆ. ಸಂಶೋಧನೆ ಮನುಷ್ಯನ ಕಲ್ಯಾಣಕ್ಕಾಗಿ, ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಆಗಬೇಕು. ಈಗ ನೀವು ೪ನೇ ಸ್ಟೇಜ್ ನಲ್ಲಿದ್ದೀರಿ. ಹಾಗಾಗಿ ಅಲ್ಲಿಯ ಉಷ್ಣತೆ ಅಬೌ ೪೦ ಆಗ್ತಿದೆ. ಹತ್ತನೆ ಸ್ಟೇಜಿಗೆ ಬಂದ್ರೆ ಬಹಳ ತ್ರಾಸ. ನಮ್ಮಹಾಗೆ ನೀವು”

“ನಿಜ ಏಲಿಯನ್, ಸುಖ ಹಾಗೂ ಸಂಪತ್ತಿನ ವ್ಯಾಮೋಹಕ್ಕೆ ಬಲಿಬಿದ್ದು ನಾವು ಏನೆಲ್ಲ ಮಾಡತಿದ್ವಿ ನಾವು ನಿಲ್ಲಿಸಬೇಕು. ಪರಿಸರ ಸಾಕಷ್ಟು ಇದರಿಂದ ನಾಶವಾಗಿದೆ.ಎಲ್ಲಾ ಮಾಲಿನ್ಯಗಳು ಹೆಚ್ಚುತ್ತಿವೆ, ದ್ರುವ ಪ್ರದೇಶಗಳು ಕರಗುತ್ತಿವೆ. ಓಜೋನ್ ಪದರಿನ ರಂಧ್ರ ಹೆಚ್ಚುತ್ತಿದೆ. ಏನಾದ್ರೂ ಮಾಡಬೇಕು! ಹೌದು? ಮಾಡಿ ನಮ್ಮ ಬುದ್ಧಿ ಅತ್ತ ಪ್ರಯೋಗಿಸಿ ಭೂಮಿ ಉಳಿಸಿಕೊಳ್ಳಬೇಕು. ನಿಮ್ಮ ಗ್ರಹದಂಗೆ ನಮ್ಮ ಗ್ರಹವನ್ನು ಆಗಲಿಕ್ಕೆ ಬಿಡಲ್ಲ… ಬಿಡಲ್ಲ… ಬಿಡಲ್ಲ…”

“ಬಿಡಲ್ಲ ಅಲ್ಲ ಆಗೆ ಆಗುತ್ತದೆ.. ಈಗಿ ನೀನು ನಮ್ಮ ಗ್ರಹದಲ್ಲಿ ಮಾಡಿದ ಕಿತಾಪತಿಯಿಂದ ಹೈಜೋನ್ ಮಾಡಿದ್ರೆ ನಮಗೆ ಉಳಿಗಾಲವಿಲ್ಲ ಅಂತ ತಿಳಿದುಕೊಂಡಿದ್ದೀರಿ.. ಆದರೆ.. ಖಗೋಳ ಮಂಡಲದಲ್ಲಿ ಒಂದೊಕ್ಕೊ೦ದು ಕೋಂಡಿಯ೦ತೆ ಸಂಬ೦ಧಗಳಿವೆ… ನಮ್ಮ ಸ್ಥಿತಿ ನಿಮಗೂ ಬರುವುದರಲ್ಲಿ ಅನುಮಾನವಿಲ್ಲ”

“ಈಗ ನಾನು… ಏನು ಮಾಡಲಿ.. ಸಣ್ಣವ.. ನೀವು ಹೇಳುವುದ ನನಗೆ ಒಂದು ಅರ್ಥವಾಗದು”
“ನಾವು ನಿಮ್ಮ ವಿಜ್ಞಾನಿಗಳ ಐಡಿಯಾವನ್ನು ಬದಲಿಸ್ತೀವಿ.. ಈಗ ಏನೊ ಅವರಲ್ಲಿ ಬೇರೆ ಐಡಿಯಾ ಮಾಡಿ ಚೇಂಜ್ ಮಾಡಿತಿವಿ.. ನೀನು ಅಂತಹ ವಿಜ್ಞಾನದ ತಲಿಯೆ…. ಮುಂದ ಇಂತಹ ಸಾಹಸಕ್ಕೆ ಕೈ ಹಾಕಬೇಡ ಗೊತ್ತಾಯತಾ?”
“ಅಂದ್ರೆ ಹೆದರಿಸುತ್ತಿದ್ದಿರಾ?” ಎಂದು ನಕ್ಕೆ
“ಕಿವಿಮಾತು ಬದುಕಿನ ಮಾತು ಇಲ್ಲಂದ್ರೆ ನಮ್ಮ ಹಾಗೆ ಅಂತರ್ ಪಿಶಾಚಿಗಳಾಗಿ”
“ಹೌದು ಹೌದು.. ನೀವು ಹೇಳುವುದೆಲ್ಲ ಸತ್ಯ ಇದೆ… ಒಳ್ಳೆಯ ಮಾಹಿತಿ ಸಿಕ್ತು.. ಇಲ್ಲಿಗೆ ಬಂದು.. ನನಗೆ ಕಳಿಸಿಕೊಡಿ” ಎಂದು ವಿನಂತಿಸಿದೆ.
“ಯಾಕೆ ಬೇಜಾರು ಬಂತ ನೀರಸ ಜಗತ್ತನ್ನು ನೋಡಿ… ನಾವು ಹೇಗೆ ಬದುಕತ್ತಿದ್ದೇವೆ ನೋಡಿ”
“ಇಲ್ಲ.. ಏನೊ ಮಾತಾಡಿದೆ..”
“ನಿನ್ನ ತಪ್ಪಿಲ್ಲ.. ನಿಮಗೆ ಗೊತ್ತಾಗದಂತೆ ಸಹ್ಸರಾರು ಸಾರಿ ಬಂದು ಹೋಗಿದ್ದೇವೆ… ನಿಮ್ಮ ಭೂಮಿಗೆ.. ಉಲ್ಲಾಸಕ್ಕಾಗಿ..”
“ಹೌದೆ?”
“ಹೌದು… ಯಾರಿಗೂ ಏನೂ ಹಾನಿ ಮಾಡಿಲ್ಲ… ಮತ್ತೊಮ್ಮೆ ಭುಮಿಯಲ್ಲಿರುವಂತಹ ಪರಿಸರವನ್ನು ನಮ್ಮಲ್ಲಿ ಮರುಸೃಷ್ಟಿಸಲಿಕ್ಕೆ ಸಾಧ್ಯವಾ..?ಎನ್ನುವ ಕಾರಣಕ್ಕಾಗಿ.. ಆದರೆ.. ಎಲ್ಲಾ ಕೆಟ್ಟು ಹೋಯಿತು”
“ಕ್ಷಮಿಸಿ ಬಿಡಿ ನನ್ನಿಂದಾದ ಅಪರಾಧಕ್ಕೆ… ಪ್ಲೀಜ್ ಕಳಿಸಿಕೊಡಿ.. ಅಪ್ಪ ಅಮ್ಮ ಎಲ್ಲಾರೂ ಗಾಭರಿಯಾಗಿರತಾರೆ”
ನಾನು ಸಡನ್ ಆಗಿ ನೆನಪು ಮಾಡಿಕೊಂಡು ಅಳೋದನ್ನ ನೋಡಿ “ಆಯ್ತು ಆಯ್ತು ನಿಮ್ಮ ಭುಲೋಕದ ಜನರಷ್ಟು…” ಎಂದು “ಕಣ್ಣು ಕಟ್ಟಿ” ಎಂದು ಹೇಳಿ..
“ಕಟ್ಟಬೇಡಿ ಪ್ಲೀಜ್”
“ಬೆಂಕಿಯೊಳಗಿ೦ದ ಹೋಗಬೇಕು.. ನೋಡ್ತಿಯಾ?”
“ಹೇ.. ಬೇಡ ಬೇಡ… ಕಟ್ಟಿಬಿಡಿ”
ಕಣ್ಣು ಕಟ್ಟಿ ವಾಹನದಲ್ಲಿ ಕೂಡಿಸಿ ಬಿಟ್ಟರು.. ಮಂಪು ಬಂದ ಹಾಗಾಗಿ ಏನಾಯ್ತೊ ಗೊತ್ತಾಗಲಿಲ್ಲ… ಕಣ್ತೆರೆದಾಗ ಮನೆಯ ಮಹಡಿಯ ಮೇಲಿದ್ದೆ… ಮೈಯಲ್ಲ ನೋಡಿಕೊಂಡೆ.. ಹಿ೦ದಿನದ ನೆನಪಿಸಿಕೊಂಡೆ ಅಸ್ಪಷ್ಟ…ನನ್ನ ರೂಪ ಮತ್ತೆ ಸೊಳ್ಳೆಯದ್ದೆ ಆಗಿತ್ತು. ಮುಖ ನನ್ನದು ದೇಹ ಸೊಳ್ಳೆದು ಹಾಗಾಗಿರಲಿಲ್ಲ. ಏನು ಗೊತ್ತಾಗಲಿಲ್ಲ.. ಏನೊ ಮಾಡಲು ಹೋಗಿ ಏನೊ ಆಗುತ್ತಿದೆ ಎಂದು ಹಾರಿದೆ ಹಾರಿ ಮನೆ ಹತ್ತಿರ ಬಂದಾಗ ಎಲ್ಲರೂ ಸುತ್ತುವರೆದು ಬಿಟ್ಟಿದ್ದರು… ಮನುಷ್ಯನಾಗಲು ಸೊಳ್ಳೆ ಹೇಳಿದ್ದ ಆ ಮಂತ್ರ ನೆನಪು ಮಾಡಿಕೊಂಡೆ.. ಆಗುತ್ತಿಲ್ಲ.. ಎಲ್ಲೊ ಒಂದು ತಪ್ಪುತ್ತಿತ್ತು.. ಮೂರು ನಾಲ್ಕು ಸರಿ ರಿಪಿಟ್ ಆದ್ರೂ ಉಪಯೋಗವಾಗಲಿಲ್ಲ..

ಕೆಳಗೆ ಬಗ್ಗಿ ನೋಡಿದೆ…. ನೆರದವರೆಲ್ಲರ ಮುಖದಲ್ಲಿ ಆತಂಕ.. ಅಜ್ಜಿ ಜೋರಾಗಿ ಅಳುತ್ತಿದ್ದಳು..ಅಮ್ಮ.ಅಕ್ಕನು, ಇಬ್ಬರು. ಅಪ್ಪ ಸಮಾಧಾನ ಪಡಿಸುತ್ತಿದ್ದ. ಅವರ ಮುಖದಲ್ಲಿ ಎಲ್ಲರಲ್ಲಿ ಆತಂಕ ಇತ್ತು… ಒಳಗೆ ಬಂದೆ ಅಪ್ಪ ಅಮ್ಮ ಅಳುತ್ತಾ ಕುಳಿತಿದ್ದರು… ಅಷ್ಟರೊಳಗೆ ಎಲ್ಲರು ಬಂದು ಸೇರಿದ್ದರು.. ಅಪ್ಪ ನ ಹತ್ತಿರ ಹೋದೆ… ನಾನು ಅಪ್ಪ.. ನಾನು ಕಳೆದಿಲ್ಲ..ಅರಾಮ ಇದ್ದೀನಿ.. ಎಂದು ಕೂಗಿದೆ.. ಅವರಿಗೆ ನನ್ನ ಮಾತು ಕೇಳಲಿಲ್ಲ…ಅಮ್ಮನ ಹತ್ತಿರ ಹೋಗಿ ಕೂಗಿದೆ.. ಅಮ್ಮ ಅಮ್ಮ ಅಳಬೇಡಮ್ಮ ನಾನು ಬಂದಿನೀ ನೋಡಮ್ಮ ಎಂದೆ… ಅವಳಿಗೇನೂ ಕೇಳಿಸಲಿಲ್ಲ… ಅಪ್ಪನ ಮುಂದೆ ಹೋಗಿ ಅಪ್ಪಾ ನಾನು ಇಲ್ಲೇ ಇದ್ದೇನೆ ನೋಡು ಎಂದು ಮುಖದ ಮುಂದೆ ಓಡಾಡಿದೆ… ಪಟ್ಟ ಎಂದು ಜಾಡಿಸಿದರು.. ಅದು ದೂರ ಹೋಗಿ ಬಿದ್ದೆ. ಅತ್ತಿ ಹತ್ತಿರ ಹೋದೆ.. ಅಲ್ಲಿಯೂ ಏನೂ ಆಗಲಿಲ್ಲ.. ರಾಜು ಮಾಮಾನ ಹತ್ತಿರ ಹೋದೆ… ಒಂದು ಕ್ಷಣ ನನ್ನ ಕಡೆ ನೋಡಿದ… ಅಷ್ಟೆ.. ಅಳುತ್ತ ಕುಳಿತು ಬಿಟ್ಟ.. ಲಕ್ಷನ ವಹಿಸಲಿಲ್ಲ…

“ಏ ಅಶು ನಾನೇ ನೀನು ಕಂಡು ಹಿಡಿಬೇಕೆಂದಿದಲ್ಲ ಸೊಳ್ಳಯಿಂದ ನಾನೇ ಸೊಳ್ಳೆ ಆಗಿನಿ ನೋಡು” ಎಂದು ಕೂಗಿದೆ.. ಆಕೆಯೂ ನನ್ನ ನೆನಪಿನ ದುಃಖದಲ್ಲಿ ಇದ್ದಳು…
“ಏನು ಮಾಡಲಿ?” ಎಂದು ಸೀದಾ ಕನ್ನಡಿಯ ಹತ್ತಿರ ಹೋದೆ…
ಜುಂಯ್.. ಜು೦ಯ್.. ಸೊ೦ಯಿ.. ಸೊ೦ಯಿ.. ಡು೦ಯಿ ಡುಯಿಂ… ಬುಂಯಿ ಬುಂಯಿ ಬುಂಯಿ… ಪು೦ಯಿ ಪುಂಯಿ ಎಂದೆ
ಏನು ಬದಲಾಗಲಿಲ್ಲ.. ನನಗೆ ಆತಂಕ ಹೆಚ್ಚಾಯಿತು ಹೊರಗಡೆ ನೋಡಿದ್ರೆ ಎಲ್ಲರೂ ಅಳುತ್ತಿದ್ದಾರೆ…. ಒಳಗಡೆ ನೋಡಿದರೆ ಜನ ಸೇರುತ್ತಿದ್ದಾರೆ ಪೋಲಿಸ್ ವ್ಯಾನ ಸದ್ದು ಆಯ್ತು.. ಅಯ್ಯೊ ಒಂದು ಹೋಗಿ ಒಂದು ಆಯ್ತಲ್ಲ ಎಂದು ಆತಕ ಹೆಚ್ಚಾಗ ತೊಡಗಿತು… ಸೊಳ್ಳೆ ಹೇಳಿದ್ದು ನೆನಪಾಯಿತು.. ಇಲ್ಲ.. ಆಮೇಲೆ ಹೇಳುವೆ ಎಂದಿತ್ತು.. ಮತ್ತೆ ಮನುಷ್ಯ ರೂಪ ಪಡಯುವ ಮಂತ್ರ ಕೇಳಿದ್ದರೆ. ಇಲ್ಲ ಅವಾಗ ಎರುಡು ಬಾರಿ ಉಚ್ಚರಿಸಿದ್ದೆ. ಈಗ ಮೂರು ಬಾರಿ ಮಾಡೋಣ ಎಂದು ಮೂರು ಮೂರು ಬಾರಿ ಉಚ್ಚರಿಸಿದೆ.. ಆಗಲಿಲ್ಲ.. ಮತ್ತೆ ಮರಳಿ ಮರಳಿ ಮಾಡಿದೆ.. ಸಾಧ್ಯ ಆವಗಲಿಲ್ಲ.. ಒಳ್ಳೆ ಸಿಕ್ಕುಹಾಕಿಕೊಂಡೆನಲ್ಲ ಎಂದು ಅಳುಬಂದಿತು. ಈಜಬೇಕು ಇದ್ದು ಜಯಿಸಬೇಕು ಎನ್ನುವ ದಾಸರ ಮಾತು ನೆನಪಿಗೆ ಬಂದು, ಬಲೆ ಕಿತ್ತಿ ಹಾಖಿದರು ಮತ್ತೆ ಕಟ್ಟುವ ಜೇಡ ಕಣ್ಮುಂದೆ ಬಂದು.. ಹತ್ತಾರು ಸಾರಿ ಮಾಡಿದೆ.. ಉಪಯೋಗ ಆಗಲಿಲ್ಲ.. ಸೊಳ್ಳೆಯ ಸಾಮ್ರಾಜ್ಯದಲ್ಲಿ ಡಬಲ್ ಡಬಲ್ ಅಂತ ಸೊಳ್ಳೆ ಫ್ರೆಂಡು ಒದರಿದ್ದು ನೆನಪಿಗೆ ಬಂತು… ಸೊಳ್ಳೆ ಮಾಡುವ ಅಟ್ಯಾಕನಿಂದ ಸೂಚನೆ ಕೊಟ್ಟಿತ್ತೇನೊ ಎಂದು ಗೊತ್ತಾಯಿತು. ಪಕ್ಕಾ ಅನಿಸ್ತು…. ಹೌದು ಇಲ್ಲೆ ನನ್ನ ರೂಪ ಬಂದ್ರೆ ನೂರೆಂಟು ಪ್ರಶ್ನೆ ಸೀದಾ ಅಟ್ಟದ ಮೇಲೆ ಹಾರಿದೆ.. ಅಲ್ಲಿ ಹಾರುತ್ತಾ ಹೋಗಿ “ಜುಂಯ್.. ಜು೦ಯ್… ಸೊ೦ಯಿ..ಸೊ೦ಯಿ…ಡು೦ಯಿ ಡುಯಿಂ… ಬುಂಯಿ ಬುಂಯಿ… ಪುಂಯಿ ಪುಂಯಿ” ಎಂದೆ ಕ್ಷಣಾರ್ಧ ನನ್ನ ರೂಪ ಬಂತು… ಸಡನ್ ಆಗಿ ಬಂದ್ರ ಕಷ್ಟ.. ಸೀದಾ… ಅಲ್ಲಿ ಮರೆದು ಏನೊ ಬಡದು ಎಚ್ಚರ ತಪ್ಪಿ ಮಲಗಿದವನಿಗೆ ಎಚ್ಚರವಾದಾಗ ಕೂಗುವಂತೆ ಕೂಗಿದೆ
ಎಲ್ಲರೂ “ಇದು ನಮ್ಮ ಸಮ್ಮು ನ ಧ್ವನಿ ನಮ್ಮ ಸಮ್ಮುನ ಧ್ವನಿ ಅಂತ ಹುಡುಕಾಡ ಹತ್ತಿದರು” ಅದರಲ್ಲಿ ಅಶು.. ಕೂಡಲೆ ಓಡಿ ಬಂದು,.. ಧ್ವನಿ ಬಂದದ್ದು ಅಟ್ಟದ ಮೇಲೆ ಎಂದು ಖಾತ್ರಿಪಡಿಸಿಕೊಂಡು ನನ್ನನ್ನು ಅಟ್ಟದ ಮೇಲಿರುವುದನ್ನು ನೋಡಿ.. “ಸಮ್ಮೆ ಎಲ್ಲಿ ಹೋಗಿಲ್ಲ ಇಲ್ಲೆ ಇದ್ದಾನ ರ‍್ರಿ ಎಂದು ಕೂಗಿದಳು..”
ಎಲ್ಲರೂ ಓಡೋಡಿ ಬಂದ್ರು…
ಕೆಳಗಿಳಿಸಿದರು..
ಅಪ್ಪ ಬಂದವನೆ ಚಟಾರ್ ಎಂದು ಏಟುಕೊಟ್ಟ “ಎಷ್ಟು ಟೆನಶನ್ ಮಾಡಿಬಿಟ್ಟಿದ್ದೆಲ್ಲೊ… ಅಲ್ಲೆ ಏನೊ ಸೊಳ್ಳೆದ್ದು ರಾದ್ದಾಂತ ಇಲ್ಲೆ ನೋಡಿದ್ರ ನಿನ್ನದು ಅಂತ”
“ಏ ಹುಡುಗ ಮೊದಲೆ ಅಂಕಜಿಕೊ೦ಡಾದ. ಹಾಗ್ಯಾಕ ಹೊಡಿತಿರಿ… ಏನಾಗಿತ್ತು ಹೇಳೊ” ಎಂದು ಅಶು ಎಂದಾಗ ನಾನು “ಅಟ್ಟದ ಮೇಲೆ ಚಂಡು ಹೋಗಿತ್ತು ತರಲು ಹೋದಾಗ, ಮೇಲೆ ಗೋಡೆ ಬಡಿತು ಅಷ್ಟ ನನಗೇನಾಯ್ತೊ…ಗೊತ್ತಿಲ್ಲ” ಎಂದು ಅತ್ತೆ… ಎಲ್ಲರೂ ವಿಷಯ ತಿಳಿದು ಚದುರಿದರು… ಮನೆಯವರಿಗೆಲ್ಲ ಖುಷಿಯಾಯಿತು. ಎಲ್ಲರಿಗೂ ನನ್ನ ಚಿಂತೆಯಾದರೆ ನನಗೆ ಸೊಳ್ಳೆದೆ ಚಿಂತೆ.. ಎಲ್ಲಿ ಹೋಯಿತು… ಕಾಣುತ್ತಿಲ್ಲವಲ್ಲ ಎಂದು ಹುಡುಕಾಡತೊಡಗಿದೆ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

May 29, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: