ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಂಗು ಬಿಡದೆ ಕಾಡಿದಾಗ‌

ವಿನಯಾ ನಾಯಕ್

ದೊಡ್ಡ ದೊಡ್ಡ ಆಸೆ ಕನಸು
ಹೊತ್ತು ಓಡಾಡುವೆವು
ಏನೇನೋ ಆಗುವ ತವಕ
ಎಲ್ಲೆಲ್ಲೋ ಓಡಾಡುವ ಧಾವಂತ
ಹೊಸ ಬದುಕಿಗೆ ಹುರುಪಿಂದ ಅಣಿಯಾಗುವೆವು
ತನ್ನದೇ ಮನೆ, ನೌಕರಿ
ದುಡ್ಡು ಕಾಸು, ಸಾಧನೆಯ ಹಾದಿಯ ತವಕ
ಮತ್ತೆಲ್ಲ ಹದಗೊಂಡು
ಬದುಕು ಇನ್ನೊಂದು ತಿರುವ ಪಡೆದಾಗ
ಮತ್ತೆ ಮತ್ತೆ ಬಾಲ್ಯವ ನೆನೆವೆವು
ಅಕ್ಕರೆಯ ತಾಯಿ-ತಂದೆ, ಬಳಗ, ಗೆಳೆಯರ
ನೆನೆದು ಮುದಗೊಳ್ಳುವೆವು
ಊರು ಕೇರಿಯ ಗುಂಗು ಬಿಡದೆ ಕಾಡಿದಾಗ

ಕಲಿತ ಶಾಲೆಗೊಂದಿಷ್ಟು ದೇಣಿಗೆ ಕೊಟ್ಟು ಸುಮ್ಮನಾಗುವೆವು
ಮತ್ತದೇ ಹಳೆ ದಿನಗಳ ಕಥೆಯ ಫೇಸ್ ಬುಕಿನಲ್ಲಿ ಬರೆದುಕೊಂಡು
ತುಸು ತಣ್ಣಗಾಗುವೆವು.
ಹೊಸ ಮನೆಯ ಶೋಕೇಸಿನಲ್ಲಿಡಲು ತಂದ
ಹಳೆ ಮನೆಯ ಕಂಚಿನ ತಟ್ಟೆ ಕಂಡಾಗಲೆಲ್ಲ
ಮತ್ತದೇ ನೆನಪುಗಳ ಆಗರ.
ಹಾಗೆಂದು ಇಲ್ಲಿಂದ ಹೊರಟರೆ
ಇದನ್ನೆಲ್ಲಾ ನೆನೆನೆದು ತಬ್ಬಿಬ್ಬುಗೊಳ್ಳುವೆವು.
ಏನೋ ಬೇಕು, ಸಿಕ್ಕರೆ ಮತ್ತೆ ತೊರೆದು ಬಂದ
ಹಳೆ ಹಾದಿಯ ನೆನಪು.

ಸಿಕ್ಕಿದ್ದು ಅರ್ಥವಾಗದು
ತೊರೆದಿದ್ದು ಕಾಡುವದು
ಏನೋ ಬೇಕೆನಿಸುವುದು
ಮತ್ತೇನೋ ಹುಡುಕಿ ಹೊರಟರೆ
ಇನ್ನೆಲ್ಲೋ ಹೋಗಿ ತಲುಪುವೆವು
ಬದುಕಿನ ಗಮ್ಯ ಸುಲಭಕ್ಕೆ
ಎಟುಕುವಂತದ್ದಲ್ಲ

‍ಲೇಖಕರು Avadhi

9 April, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading