ಗಿರೀಶ್ ಕಾಸರವಳ್ಳಿ
“ಸಿನಿಮಾ ಭಾಷೆ ದೃಷ್ಟಿಯಿಂದ ‘ಅನಲ’ ನೋಡಿದಾಗ (ಈ ನಿರ್ದೇಶಕಿಗೆ) ಬಹಳ ಹಿಡಿತ ಇದೆ ಈ ಮೀಡಿಯಂ ಮೇಲೆ ಅಂತ ಅನಿಸ್ತು. ಯಾಕೆಂದ್ರೆ ಸಾಮಾನ್ಯವಾಗಿ ಹೊಸಬರ ಸಿನಿಮಾಗಳಲ್ಲಿ ಒಂದು, ಕಾಂಪೋಸಿಷನ್ಸ್ ಚೆನ್ನಾಗಿರಲ್ಲ. ಎರಡನೇದು, restraint ಇರಲ್ಲ; restraint ಅಂತಂದ್ರೆ ಬರೀ ಎಕ್ಸ್ ಪ್ರೆಷನ್ ಒಂದರಲ್ಲೇ ಅಲ್ಲ, ಸಿನಿಮ್ಯಾಟಿಕ್ ಟೆಕ್ನಿಕ್ ಗಳ ಬಳಕೆಯಲ್ಲಿ ರಿಸ್ಟ್ರೈಂಟ್ ಇರಲ್ಲ. ಇದ್ದಕ್ಕಿದ್ದ ಹಾಗೇ ಲೋ ಆಂಗಲ್ ಆಗುತ್ತೆ, ಇದ್ದಕ್ಕಿದ್ದ ಹಾಗೇ ಟಾಪ್ ಆಂಗಲ್ ಆಗುತ್ತೆ, ಎರಾಟಿಕ್ ಕಟಿಂಗ್ ಇರುತ್ತೆ. ಒಂದು ರಿದಮ್ ಇರಲ್ಲ, ತಾನು ಹೇಳ್ಬೇಕಾಗಿರೋದನ್ನ ರಿಸ್ಟ್ರೈಂಟಲ್ಲಿ ಹೇಳೋದಕ್ಕೆ ಪ್ರಯತ್ನ ಪಡೋದಿಲ್ಲ. ವಾಚಾಳಿತನ ಇರುತ್ತೆ. ಅದ್ಯಾವುದೂ ‘ಅನಲ’ದಲ್ಲಿ ಇಲ್ಲ. ಅದರಿಂದ ನನಗೆ ಖುಷಿಯಾಯ್ತು.
ನೀವು ಈ ಸಿನಿಮಾದ ಕಂಪೋಸಿಷನ್ಸ್ ನೋಡಿ, the way the shots are composed, selection of details, locations ಅದೆಲ್ಲ ಬಹಳ ಚೆನ್ನಾಗಿದೆ. Plasticity of the image ಅಂತೀವಲ್ಲ, ಅಂದ್ರೆ ಆ ಇಮೇಜಿನ expressiveness, ಅಭಿವ್ಯಕ್ತಿ.. ಇದನ್ನ ಹೇಗೆ ಕಂಪೋಸ್ ಮಾಡಿದ್ರೆ, ಯಾವ ಲೆನ್ಸ್ ಹಾಕಿದ್ರೆ, ಯಾವ ಆಂಗಲ್ ಹಾಕಿದ್ರೆ ಇದು ಹೆಚ್ಚು expressive ಆಗಿ ಕಾಣುತ್ತೆ ಅನ್ನೋದು, ನಾನು ಹೇಳ್ಬೇಕಾಗಿದ್ದು ‘ಸುಂದರವಾಗಿ ಕಾಣುತ್ತೆ’ ಅಂತಲ್ಲ, ಹೆಚ್ಚು ‘ಸೂಕ್ತವಾಗಿ ಕಾಣುತ್ತೆ’ ಅನ್ನೋ ಒಂದು ಅರಿವು ಈ ಸಿನಿಮಾದಲ್ಲಿ ಕಾಣುತ್ತೆ. ಅದಕ್ಕೆ ನಾನು ಹೇಳಿದ್ದು, ಇದು ಡೈರೆಕ್ಟರ್ ನ ಮೊದಲ ಸಿನಿಮಾ ಅಂತ ನನಗೆ ಅನ್ನಿಸಲೇ ಇಲ್ಲ. ಅಲ್ಲಿ ಒಂದು ಮೆಚ್ಯೂರ್ ಆದಂತಹ ಡೈರೆಕ್ಟರ್ ನ ಲಕ್ಷಣ ಕಾಣುತ್ತೆ.
ಈ ಸಿನಿಮಾದ ವಸ್ತು ಬಹಳ ಸರಳವಾದದ್ದು. ಆದರೆ ಆ ಸರಳತೆಯ ಒಳಗಡೆಯೇ ಒಂದು ರೀತಿಯ ನೋವು ಮತ್ತು ಪ್ರತಿಭಟನೆ ಎರಡೂ ಕಾಣಿಸುತ್ತೆ.
ಇಲ್ಲಿ ನಾನು ಕಥಾವಸ್ತುವಿಗಿಂತ ಕಥಾವಸ್ತುವಿನ ನಿರ್ವಹಣೆ ಬಗ್ಗೆ ಹೇಳ್ತೀನಿ. ನಮ್ಮಲ್ಲೇನಾಗುತ್ತೆ, ನಾವು ಕಥಾವಸ್ತುವಿನಲ್ಲಿ ಹೊಸತನವನ್ನ ಹುಡುಕಿಕೊಂಡು ಹೋಗ್ತೀವಿ. ಆದ್ರೆ ನಾವು ನೋಡ್ಬೇಕಾದ್ದು, ಕಥಾವಸ್ತುವಿನಲ್ಲಿ ಹೊಸತನವಲ್ಲ, ಅದರ ನಿರ್ವಹಣೆಯಲ್ಲಿ ಭಿನ್ನತೆ ಕಾಣಿಸ್ಬೇಕು. ಇಲ್ಲಿ ಹೊಸ ದೃಷ್ಟಿಕೋನದಿಂದ, ಹೊಸ ರೀತಿಯಿಂದ ಕಥೆಯನ್ನು ನೋಡ್ತಿದ್ದಾರೆ, ಅದು ಮುಖ್ಯ. ಇಲ್ಲದೇ ಇದ್ರೆ ಒಂದೇ ನಾಟಕವನ್ನ ಐವತ್ತು ಸಲ ಬೇರೆ ಬೇರೆ ನಿರ್ದೇಶಕರು ಮಾಡಿದ್ದನ್ನ ಯಾಕೆ
ನೋಡ್ಬೇಕು? ನಾವು ಸಿನಿಮಾಕ್ಕೆ ಬಂದ ತಕ್ಷಣ ಅದನ್ನ ಬಿಟ್ಟು ಕಥೆಯೇನು ಅಂತ ನೋಡ್ತೀವಿ. ಹಾಗಲ್ಲ, ಕಥೆಯ ನಿರ್ವಹಣೆಯನ್ನು ನಾವು ನೋಡಬೇಕಾಗಿರೋದು. ನಾನು ಯಾವಾಗ್ಲೂ ಒಂದು ಶಬ್ಧ ಬಳಸ್ತಾ ಇರ್ತೀನಿ ‘ಪಾಲಿಟಿಕ್ಸ್’ ಅಂತ. ಒಂದು ಕಂಪೋಸಿಷನ್ಸ್ ನಲ್ಲಾಗಲಿ, ಆಂಗಲ್ ನಲ್ಲಾಗಲಿ, ಒಂದು ಮೂವ್ ಮೆಂಟ್ ನಲ್ಲಾಗಲಿ, ಒಬ್ಬ ಫಿಲ್ಮ್ ಮೇಕರ್ ನ ಜೀವನ ದೃಷ್ಟಿ ಮತ್ತು ಅವಳ ನಿಲುವು – ರಾಜಕೀಯ ನಿಲುವು, ಐಡಿಯಾಲಜಿ, ತಾತ್ವಿಕ ಗ್ರಹಿಕೆ ಇವೆಲ್ಲ ಕಾಣಿಸಿಕೊಳ್ಳುತ್ತೆ. ಅದು ‘ಅನಲ’ದಲ್ಲಿದೆ ಅಂತ ನನಗನ್ನಿಸಿತು.
ಮೊನ್ನೆ ನಿಮ್ಮ ಸಿನಿಮಾಕ್ಕೆ ಬಂದ ಕೆಲವರ ರಿಯಾಕ್ಷನ್ ನನ್ನಲ್ಲಿ ಹೆದರಿಕೆ ಹುಟ್ಟಿಸ್ತು. ಇನ್ನೂ ಇದೇ ಥರ ಮಾತಾಡ್ತಾರಲ್ಲ….!? ಇಷ್ಟು….!! I was quite offended ಗೊತ್ತಾ..? ಶಾಕಿಂಗ್ ಅದು.. ಅಂದ್ರೆ ‘ಸ್ವಲ್ಪ ಜಾಸ್ತಿ ಹೇಳಿದೀರಿ..’ ಅಂತಾನೋ , ‘ಸ್ವಲ್ಪ ಢಾಳಾಗಿ ಹೇಳಿದೀರಿ..’ ಹೀಗೆಲ್ಲ ಹೇಳಿದ್ದಿದ್ರೆ ಅದು ಬೇರೆ ವಿಷಯ. ಆದ್ರೆ ‘ನೀವು ಹೇಳ್ತಿರೋದೇ ತಪ್ಪು’ ಅನ್ನೋಷ್ಟರ ಮಟ್ಟಿಗೆ ಹೋಗ್ತಾರಲ್ಲ ಅದು ಒಂಥರ ಹೆದರಿಕೆ ಹುಟ್ಟಿಸ್ತು. ಆಗ ನನಗೆ ಅನ್ನಿಸ್ತು, ‘ನಾವು ತುಂಬ ಸೂಕ್ಷ್ಮವಾಗಿ ಇರ್ಬೇಕು, ಹಾಗೆ ಹೇಳ್ಬೇಕು..’ ಅಂತ ಅಂದ್ಕೊಂಡಾಗ ಅದೆಲ್ಲೋ ಇವರಿಗೆ ದಕ್ಕುತ್ತಾ ಇಲ್ವೇನೋ ಅಂತ. ಸ್ವಲ್ಪ ಒರಟಾಗೇ ಹೇಳ್ಬೇಕೇನೋ ಅಂತ ಅನ್ನಿಸ್ತು. ಆ ಕಾರಣಕ್ಕಾಗಿ ಈ ಸಿನಿಮಾವನ್ನು ಮೊದಲು ಒಂದು ಸ್ವಲ್ಪ ಸಂದೇಹದಿಂದ ನೋಡಿದ್ರೂ ಆಮೇಲೆ ಒಪ್ಕೊಳೋಕೆ ಶುರು ಮಾಡಿದೆ. ಯಾಕಂದ್ರೆ ಬಹುಷಃ ಈ ತರಹ ಸ್ವಲ್ಪ ಗಟ್ಟಿಯಾಗಿ ಹೇಳೋದೂ ಚೂರಾದ್ರು ಸೆನ್ಸಿಟೈಸ್ ಮಾಡೊದಕ್ಕೆ ಅಗತ್ಯವೇನೋ ಅಂತ ಅನ್ನಿಸುತ್ತೆ. ಸರಳವಾಗಿ ಹೇಳ್ಬಿಟ್ರೆ ಅದು ಹಾಗೇ ಹೊರಟುಹೋಗ್ಬಿಡುತ್ತೆ, ಮುಟ್ಟೋದೇ ಇಲ್ವೇನೋ ಅಂತ. ”
(ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋನಲ್ಲಿ ಏಪ್ರಿಲ್ 25ರಿಂದ 29ರವರೆಗೆ ನಡೆದ ‘ರಾಷ್ಟ್ರ-ರಾಜ್ಯ ಪ್ರಶಸ್ತಿ ವಿಜೇತ ಹಾಗೂ ಪನೋರಮ ಚಿತ್ರಗಳ ಉತ್ಸವ’ದಲ್ಲಿ ‘ಅನಲ’ ವೀಕ್ಷಿಸಿದ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಹೀಗೆ..)
ಗಿರೀಶ್ ಕಾಸರವಳ್ಳಿಯವರ ಅಭಿಪ್ರಾಯದ ಪೂರ್ಣ ವೀಡಿಯೋ ಲಿಂಕ್ ಇಲ್ಲಿದೆ..





ಅನಲವನ್ನು ನಾನು ಒಮ್ಮೆ ನೋಡ ಬೇಕು