
ಜಿ ಎನ್ ನಾಗರಾಜ್
ಗಿರೀಶ್ ಕಾರ್ನಾಡರಿಗೆ ಟಿಪ್ಪು ಬಗ್ಗೆ ಮಾತನಾಡುವುದಕ್ಕೆ ಬೇಕಾದ ಅಧ್ಯಯನವಿದೆಯೇ? ಇದೆ. ಅವರು ಇತಿಹಾಸಕಾರರಲ್ಲ ನಿಜ. ಆದರೆ ಟಿಪ್ಪೂ ಬಗ್ಗೆ ಇರುವ ವಿವಿಧ ಆಕರ, ಅಧ್ಯಯನಗಳನ್ನು ಅವರು ಕೂಲಂಕಶವಾಗಿ ಅಧ್ಯಯನ ಮಾಡಿದ್ದಾರೆ. ಪರಸ್ಪರ ವಿರೋಧವಾದ ದೃಷ್ಟಿಗಳದ್ದನ್ನೂ.
ಏಕೆಂದರೆ ಟಿಪ್ಪೂ ಬಗ್ಗೆ ಒಂದು ನಾಟಕ ಬರೆಯಲು ಈ ಎಲ್ಲ ಸಿದ್ಧತೆ ಅವರು ಮಾಡಿಕೊಂಡಿದ್ದಾರೆ. ಈ ನಾಟಕವೂ ಅಂತರರಾಷ್ಟ್ರೀಯ ವೇದಿಕೆಗಾಗಿ ರಚಿಸಿದ್ದಾದ್ದರಿಂದ ಬಹಳ ವಿಶದವಾಗಿಯೇ ಅಧ್ಯಯನ ಮಾಡಿದ್ದಾರೆ. ಆದ್ದರಿಂದ ಅವರು ಹೇಳಿದ ಮಾತನ್ನು ಹೇಳುವುದಕ್ಕೆ ಅವರಿಗೆ ಎಲ್ಲ ಹಕ್ಕೂ ಇದೆ. ಅದನ್ನು ನಾವು ಒಪ್ಪಬಹುದು ಇಲ್ಲದಿರಬಹುದು. ಅದನ್ನು ಒಪ್ಪವುದಕ್ಕೂ ನಿರಾಕರಿಸುವುದಕ್ಕೂ ನಾವೂ ಸ್ವಲ್ಪವಾದರೂ ಅಧ್ಯಯನ ಮಾಡಿರಬೇಕಲ್ಲ.ಆದರೆ ಇಂದಿನ ವಾತಾವರಣದಲ್ಲಿ ಅಂತಹ ಅಧ್ಯಯನದ ಲವಲೇಶವೂ ಇಲ್ಲದವರು ತಮಗೆ ಬೇಕಾದಂತೆ ಮಾತನಾಡಲು ಅವಕಾಶಗಳು ಲಭ್ಯವಾಗುತ್ತಿದೆ. ಮಾಧ್ಯಮಗಳು ಹೀಗೆ ಮಾತನಾಡುವವರ ಅರ್ಹತೆಯನ್ನೇನೂ ಪ್ರಶ್ನಿಸದೆ ಪ್ರಸಾರ ಮಾಡುತ್ತವೆ. ಸಾಮಾನ್ಯ ಜನರ ಮೇಲೆ ಅದನ್ನು ಹೇರುವುದರಿಂದ ಮತ್ತು ಕೆಲ ರಾಜಕಾರಣಿಗಳು ಗಲಭೆಯೆಬ್ಬಿಸಲು ನೆಪಗಳಿಗಾಗಿ ಹುಡುಕುತ್ತಿರುವುದರಿಂದ, ಅಭಿಪ್ರಾಯವನ್ನು ಅಭಿಪ್ರಾಯವನ್ನಾಗಿ ಪರಿಗಣಿಸಿ ಅದನ್ನು ಆಧಾರ ಸಮೇತ ಚರ್ಚಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಒದಗಿದೆ.
ಇಂತಹ ಪರಿಸ್ಥಿತಿಯನ್ನು ದೂಷಿಸಬೇಕೋ ಅಥವಾ ಅಭಿಪ್ರಾಯಗಳನ್ನು ವ್ಯಕ್ತಪಡಿವುದನ್ನೇ ದೂಷಿಸಬೇಕೋ ಇದು ನಾವೆಲ್ಲರೂ ಕೇಳಿಕೊಳ್ಳಬೇಕಾದ ಪ್ರಶ್ನೆ





0 Comments