ಅನಿತಾ ನರೇಶ್ ಮಂಚಿ
ಹೌದಂತೇ..
ಅಲ್ಲೆಲ್ಲೋ ಅತ್ಯಾಚಾರವಾಯಿತಂತೇ ..
ಹೌದೇ.. ಕೇಳಿದವು ಕೊರಳುಗಳು
ಸೇರಿದ ಸ್ವರಗಳಲ್ಲೂ ಏರಿಳಿತ
ಸುತ್ತ ಗಾಭರಿಯ ಕಣ್ಣೋಟ
ಬಿತ್ತರಿಸಿದವು ಹಸಿ ಬಿಸಿ ವಾರ್ತೆಗಳಂತೆ
ನೋಡು ಟಿವಿಯಲ್ಲೂ ಅದೇ ಸುದ್ಧಿ
ಹೇಳಲಿಲ್ಲವೇ ನಾನಾಗಲೇ ..
ಕೈ ಸೆರಗಿಗೆ ಒರೆಸುತ್ತಾ ಕೂತ
ತಾಯ ಎದೆಯೊಳಗೆ ಭೂಕಂಪ
ನಡುಗು ಕಾಲಿನ ಮಂದಿ ಕಿವಿ ತೆರೆದರು
ಮಗಳ ಹೆಜ್ಜೆ ಸಪ್ಪಳಕ್ಕೆ
ಒಮ್ಮೆ ಒಳ ಬಂದರೆ ಸಾಕೆಂಬ ಹರಕೆ
ಮನೆಯ ಸುತ್ತೆಲ್ಲ ಬೇಲಿ
ಒಳಗೆ ದೃಷ್ಟಿ ಹಾಯಿಸದಂತೆ
ನೆಟ್ಟ ಪಾಪಸುಕಳ್ಳಿಯ ಮುಳ್ಳಿನ
ನಡುವೆ ಸಿಲುಕಿದ ಹರಿದ ಸೆರಗು
ಯಾರದೋ ಮನೆಯಲ್ಲಿ ನಂದಿದ ದೀಪ
ಜಾಮೀನಿನ ಮೊತ್ತಕ್ಕೂ ಮಾನ ಪ್ರಾಣದ ತಾಳೆ
ವಸ್ತ್ರಾಪಹಾರಕ್ಕಿಷ್ಟು, ಸತ್ತರಿಷ್ಟು, ಸವರಿದರಿಷ್ಟು..
ಜಾತಿ, ಪಾರ್ಟಿಯ ಗೋಸುಂಬೆ ನಗೆ
ಎಳೆದಾಡಿದ ರಾಕ್ಷಸನಿಗೆ ಬುಲೆಟ್ ಪ್ರೂಫ್ ಕವಚ
ನಾಲ್ಕು ದಿನದ ಗುಸು ಗುಸು ಸದ್ದಡಗಿದಾಗ
ಗಾಢ ನಿದ್ದೆ,ಮತ್ತೊಂದು ಚೀತ್ಕಾರ ಕೇಳುವವರೆಗೆ..








”ನೆಟ್ಟ ಪಾಪಾಸುಕಳ್ಳಿಯ ಮುಳ್ಳಿನ
ನಡುವೆ ಸಿಲುಕಿದ ಹರಿದ ಸೆರಗು…”
-ಘಟನೆಯನ್ನು ಕಣ್ಣೆದುರು ತಂದು ನಿಲ್ಲಿಸುವಂಥ ಮಾತು…
Reflection of the Reality!!
ಗಾಢ ನಿದ್ದೆ,ಮತ್ತೊಂದು ಚೀತ್ಕಾರ ಕೇಳುವವರೆಗೆ..
ಅನಿತಾ ತುಂಬಾ ಚೆನ್ನಾಗಿದೆ ಕವನ…ಇನ್ನೊಂದು ಚೀತ್ಕಾರ ಕೇಳದಿರಲಿ ಎಂದು ಸದಾ ಪ್ರಾರ್ಥಿಸುತ್ತೇನೆ.
A protest in your own way,may it awaken all to avoid the screaming
atmosphere.
chennagide……yesterday suicide of nurse jesintha, today rape, tomorrow india pak match n sachin retirement…..life goes on and on…..cycle repeats
koneya saalugalu…satyasya satya..
ಜನರ ಮೃಗೀಯ ಮನಸು ಸರಿಯಾಗುವ ತನಕ
ಕೇಳುತ್ತಲೇ ಇರುತ್ತದೆ ಚೀತ್ಕಾರ.
ಚೀತ್ಕಾರ ಕೇಳಿದಾಗಲೊಮ್ಮೆ ಗಾಬರಿ
ಮತ್ತೆ ಮರೆವು.
ಇನ್ನೊಂದು ಚೀತ್ಕಾರ ಕೇಳುವವರೆಗೆ…
ಅದೇ ಪುನರಾವರ್ತನೆ,ಮರೆವು, ಇನ್ನೊಂದು ಚೀತ್ಕಾರ
’ನಾಲ್ಕು ದಿನದ ಗುಸು ಗುಸು ಸದ್ದಡಗಿದಾಗ
ಗಾಢ ನಿದ್ದೆ,ಮತ್ತೊಂದು ಚೀತ್ಕಾರ ಕೇಳುವವರೆಗೆ.”ಸರಿಯಾಗಿ ಹೇಳಿದ್ದೀರಿ ಅನಿತ
ಮರೆತುಬಿಡುತ್ತೇವೆ ‘ಮಾನ’ವೀಯತೆಯನ್ನು…!
“ನೆಟ್ಟ ಪಾಪಸುಕಳ್ಳಿಯ ಮುಳ್ಳಿನ
ನಡುವೆ ಸಿಲುಕಿದ ಹರಿದ ಸೆರಗು
ಯಾರದೋ ಮನೆಯಲ್ಲಿ ನಂದಿದ ದೀಪ
ಜಾಮೀನಿನ ಮೊತ್ತಕ್ಕೂ ಮಾನ ಪ್ರಾಣದ ತಾಳೆ
ವಸ್ತ್ರಾಪಹಾರಕ್ಕಿಷ್ಟು, ಸತ್ತರಿಷ್ಟು, ಸವರಿದರಿಷ್ಟು..”
ಅದೆಷ್ಟು ನಾಜೂಕಾಗಿ ಮುಟ್ಟುವಂತೆ ಪ್ರತಿಮೆಗಳನ್ನು ಬಳಸಿಕೊಳ್ತೀರಿ ನೀವು… ಸೊಗಸಾದ ಕವನ
Ani kone erdu saalu idee ghatane bagge helatte …
ಸರಿಯಾಗಿ ಹೇಳಿದ್ದೀರ ..ಹೌದಂತೇ..ಅನ್ನೋ ಮಾತು ಅಲ್ಲಿ ,ಇಲ್ಲಿ ಕೇಳಿ ಬರುತ್ತಲೇ ಇರುತ್ತದೆ …ಚರ್ಚೆಗಳು ನಡೆಯುತ್ತಲೇ ಇರುತ್ತವೆ ..ನ್ಯಾಯಾಂಗ ವ್ಯವಸ್ಥೆ ಅಪರಾಧಿಗಳಿಗೆ ಶಿಕ್ಷೆ ಕೊಟ್ಟಾಗ ಸ್ವಲ್ಪವಾದರೂ awareness ಬರಬಹುದು .
True……
Mattondu cheetkar keladirali… Innodu jeeva tulitadalli nalugadirali..
Bhagavanta.. kaapadu nannee sunder dhareyannu…
Anita, you have written well.