ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಾಂಧೀ ಸಿಗುವುದಿಲ್ಲ..

ಗಾಂಧೀ ಗೆರೆಗಳು..

-ಸದಾಶಿವ ಸೊರಟೂರು‌

ಗಾಂಧೀ ಚಿತ್ರ ಬರೆಯಲು ಸಾಕು
ಎರಡೊ, ಮೂರೊ ಗೆರೆಗಳು

ಈ ಗಾಂಧೀ ಯಾಕೆ ಅಡಗಿಕೊಂಡರೊ
ಮೂರೇ ಮೂರು ಗೆರೆಗಳಲಿ?

ಏನು ಮಾಡುವುದು
ಉಳಿದ ಗೆರೆಗಳನು?

ಯಾರೊ ಹೇಳಿದರು

ಅಲ್ಲೊಂದು ಚಿತ್ರದಲ್ಲಿ
ಯಾರಿಗೊ ಕಣ್ಣಿಲ್ಲ.. ಬರೆಯಿರಿ ಕಣ್ಣು
ಯಾರಿಗೊ ಹಸಿವಿದೆ
ತುಂಡು ರೊಟ್ಟಿ
ಮೈ ಮೇಲೆ ಬಟ್ಟೆಯಿಲ್ಲ ಚೂರು ಅರಿವೆ
ಸೋರುವ ಮನೆಯಿದೆ
ಸಣ್ಣ ಹೆಂಚೂ ಬರೆಯಬಹುದು..

ಮೂರೇ ಮೂರು ಗೆರೆಗಳಲ್ಲಿ
ಗಾಂಧೀ ಸಿಗುವುದಿಲ್ಲ
ಅನ್ನುತ್ತಾರೆ ಕೆಲವರು..

ಹೌದು.. ಗಾಂಧೀ‌ ಅಲ್ಲಿ ಸಿಗುವುದಿಲ್ಲ
ಅವರಿರುವುದು ಉಳಿದ ಗೆರೆಗಳಲಿ
ಹಾಗೂ
ಉಳಿದ ಗೆರೆಗಳು ಬರೆದ ಚಿತ್ರಗಳಲಿ..

‍ಲೇಖಕರು Admin

2 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading