ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಾಂಧಿ ಎಂದರೆ…

ಗೋವಿಂದ ಹೆಗಡೆ

ಕನ್ನಡಕ ಕೋಲು ತಡವರಿಸದ ನಡಿಗೆಯೇ ಗಾಂಧಿ ಎಂದರೆ

ಚರಕ ನೂಲು ಅಂತರಂಗದ ಪರಿಷ್ಕರಣವೇ ಗಾಂಧಿ ಎಂದರೆ

 

ಸ್ವಾತಂತ್ರ್ಯ ಎಂದರೇನು ಒಳಗನ್ನು ಬೆಳಗದೇ

ಪ್ರಾರ್ಥನೆ ಉಪವಾಸ ಶುದ್ಧಿ ಶೋಧನೆಯೇ ಗಾಂಧಿ ಎಂದರೆ

 

ಗುರಿಯಷ್ಟೇ ದಾರಿಯೂ ಮುಖ್ಯ ಎಂದು ನಡೆದವನು

ತನ್ನ ದಾರಿಯ ತಾನೇ ಕಡೆಯುತ್ತ ಸಾಗುವುದೇ ಗಾಂಧಿ ಎಂದರೆ

 

ಉಪ್ಪು ಮೌನ ಉಪವಾಸ ಏನೆಲ್ಲಾ ಆಯುಧಗಳು 

ಶಾಂತಿ ಅಹಿಂಸೆ ಬಿತ್ತಿ ಪವಾಡ ಬೆಳೆಯುವುದೇ ಗಾಂಧಿ ಎಂದರೆ

 

ಎಷ್ಟೆಲ್ಲ ವೈರುಧ್ಯಗಳನ್ನು ಬದುಕಿದವನು ಇವನು

ತನ್ನನ್ನು ತಾನು ಮೀರುತ್ತ ಹೋಗುವುದೇ ಗಾಂಧಿ ಎಂದರೆ

 

ಅಳತೆ ಅರ್ಥಗಳ ಹಚ್ಚಿ ನೋಡದೆ ಬದುಕಲಾರೆವು ನಾವು

ಕುರುಡರು ಆನೆಯನು ನೋಡಿದಂತೆಯೇ ಗಾಂಧಿ ಎಂದರೆ

‍ಲೇಖಕರು avadhi

3 October, 2019

2 Comments

  1. T S SHRAVANA KUMARI

    ತನ್ನನ್ನು ತಾನು ಮೀರುತ್ತಾ ಹೋಗುವುದೇ…. ನಮ್ಮನ್ನು ಸುತ್ತಿಕೊಳ್ಳುವ ಸಾಲುಗಳು. ಚೆನ್ನಾಗಿದೆ.

  2. T S SHRAVANA KUMARI

    ತನ್ನನ್ನು ತಾನು ಮೀರುತ್ತಾ ಹೋಗುವುದೇ ಗಾಂಧಿ… ಒಳ್ಳೆಯ ಸಾಲುಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading