ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಂಧವತಿ ಸಾಬೂನಿನ ಸಂಸಾರ

ಡಾ. ಎನ್. ಜಗದೀಶ್ ಕೊಪ್ಪ

1916 ನೇ ಇಸವಿ, ಮೊದಲನೆಯ ಮಹಾಯುದ್ಧ ನಿಲುಗಡೆಗೆ ಬಂದಿದ್ದ ದಿನಗಳವು. ಜಗತ್ತಿನ ತುಂಬಾಕವಿದಿದ್ದ ಯುದ್ಧದ ಕಾಮರ್ೋಡಗಳು ಕ್ರಮೇಣ ಚದುರತೊಡಗಿದ್ದವು. ಎಷ್ಟೋ ಸಾವು ನೋವುಗಳ ನಂತರ ಬೀಸಿದ ತಂಗಾಳಿಗೆ ಯುದ್ಧದ ಗಾಯಗಳು ಮೈಯೊಡ್ಡಿದ್ದವು. ಅಲ್ಲೋಲ ಕಲ್ಲೋಲಗೊಂಡಿದ್ದ ರಾಜಕೀಯ, ಸಾಮಾಜಿಕ, ಆರ್ಥಕ ಪರಿಸ್ಥಿತಿಗಳು ತಹಬಂದಿಗೆ ಬರತೊಡಗಿದ್ದವು.
ಆಗ ನಗರದ ಮಲ್ಲೇಶ್ವರಂನಲ್ಲಿದ್ದ ಈಗಿನ ಅರಣ್ಯ ಭವನದ ಆಸು ಪಾಸಿನಲ್ಲಿ ಒಂದು ಅದ್ಭುತ ಘಟನೆ ನಡೆಯಿತು. ಈ ಘಟನೆಗೆ ಕಾರಣ ಪುರುಷರು ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಕೃಷ್ಣರಾಜೇಂದ್ರ ಒಡೆಯರ್.ಬ್ರಿಟೀಷರ ಸಖ್ಯದಿಂದಾಗಿ ಅವರ ಉದಾರವಾದಿ ಆಧುನಿಕ ಮನೋಭಾವಕ್ಕೆ ಹತ್ತಿರವಿದ್ದ ಮಹಾರಾಜರು ಮೈಸೂರುಸಂಸ್ಥಾನವನ್ನು ಆಧುನಿಕ ಪ್ರಗತಿಯತ್ತ ಕೊಂಡೊಯ್ಯುವ ಕನಸುಗಾರರಾಗಿದ್ದರು. ವಿದ್ಯಾಭ್ಯಾಸ, ತಂತ್ರಜ್ಞಾನ, ಕಾಖರ್ಾನೆಗಳ ಸ್ಥಾಪನೆ ಅವರ ಮುಖ್ಯ ಕಾಳಜಿಗಳಾಗಿದ್ದವು. ಕೈಗಾರೀಕರಣ ಅವರನ್ನು ಬಹುವಾಗಿ ಆಕಷರ್ಿಸಿದ್ದ ವಿಷಯವಾಗಿತ್ತು.

ರಾಜ್ಯದ ಇಂದಿನ ಬೃಹತ್ ಕೈಗಾರಿಕಾ ಪ್ರಗತಿಗೆ ಬುನಾದಿ ಹಾಕಿದವರೇ ಅಂದಿನ ಮಹಾರಾಜರು. ಇಂದಿನ ಬೃಹತ್ ಸಂಸ್ಥೆಯಾದ ಹಿಂದೂಸ್ತಾನ್ ವಿಮಾನ ಕಾಖರ್ಾನೆಯು ಮಹಾರಾಜರ ಪ್ರೇರಣೆಯ ಕೂಸು. ಹೀರಾಚಂದ್ -ಲಾಲ್ಚಂದ್ ಎಂಬುವವರಿಗೆ ಉಚಿತ ಸ್ಥಳ ನೀಡಿ ಪೂರ್ಣ ಮಾದರಿ ವಿಮಾನ ತಯಾರಿಕೆಗೆ ಪ್ರೋತ್ಸಾಹಿಸಿದವರು ಮಹಾರಾಜರು.
1916 ರಲ್ಲಿ ನಗರದಲ್ಲಿ ನಡೆದ ಆ ಘಟನೆಯ ಕಾಯರ್ಾಸ್ಥಾನ ಸ್ಯಾಂಕಿ ರಸ್ತೆಯ ಕೊನೆಯಲ್ಲಿದ್ದ ಒಂದುದೊಡ್ಡ ಹೆಂಚಿನ ಮನೆ. ಇದನ್ನು ಅರಣ್ಯ ಇಲಾಖೆ ಮರ ಮಟ್ಟು ತುಂಬುವ ಕೋಟಿಯಾಗಿ ಬಳಸುತ್ತಿತ್ತು. ಒಮ್ಮೆಮಹಾರಾಜರು ಅಲ್ಲಿಗೆ ಭೇಟಿಯಿತ್ತಾಗ, ಅಲ್ಲಿ ಹೇರಳವಾಗಿ ತುಂಬಿದ್ದ ಶ್ರೀಗಂಧದ ಮರಗಳನ್ನು ಕಂಡರು.

ಅಮೂಲ್ಯವಾದ ಈ ಶ್ರೀಗಂಧದ ಮರಗಳ ರಾಶಿ ಕಂಡದ್ದೇ ಮಹಾರಾಜರಿಗೆ ಮಿಂಚಿನಂತೆ ಒಂದು ಆಲೋಚನೆಹೊಳೆಯಿತು. ಈ ಶ್ರೀಗಂಧದ ಮರದಿಂದ ಯಾಕೆ ಎಣ್ಣೆ ತೆಗೆಯಬಾರು ಎಂದು ಯೋಚಿಸಿದರು. ಯಾವುದೇ ಕೆಲಸವನ್ನಾದರೂ ಬಿಡದೆ ಬೆನ್ನತ್ತಿ ಸಾಧಿಸುವ ಮನೋಭಾವದ ಮಹಾರಾಜರು ತಕ್ಷಣವೇ ಕಾಯರ್ೋನ್ಮುಖವಾದರು.
ತಮ್ಮ ಈ ಆಲೋಚನೆಯನ್ನು ಸರ್ ಎಂ.ವಿಶ್ವೇಶರಯ್ಯ ಹಾಗು ಸರ್ ಅಲ್ಲೈಡ್ ಚಾಟರ್ರ ಜೊತೆ ಚಚರ್ಿಸಿದರು. ಅವರು ಸಮ್ಮತಿಸಿದ್ದರಿಂದ ಕಾರ್ಯಯೋಜನೆಯೊಂದು ರೂಪುಗೊಂಡಿತು. ಶ್ರೀಗಂಧದ ಮರದಿಂದ ಎನ್ನೆ ತೆಗೆಯುವಮೊಟ್ಟ ಮೊದಲ ಪ್ರಯತ್ನ ಪ್ರಾರಂಭವಾಯಿತು. `ಭಾರತೀಯ ವಿಜ್ಞಾನ ಮಂದಿರ’ ಸಂಸ್ಥೆಯ ವಿಜ್ಞಾನಿಗಳು ಈ ಪ್ರಯೋಗವನ್ನು ಒರೆಗೆ ಹಚ್ಚಿ ಶ್ರೀಗಂಧದ ಕೊರಡುಗಳಿಂದ ಎಣ್ಣೆ ಹಿಂಡುವ ಶೋಧನೆಯಲ್ಲಿ ತೊಡಗಿದರು.
ಫ್ರೊ: ಸದ್ಬರೋ ಹಾಗು ಫ್ರೊ: ವ್ಯಾಟ್ಸನ್ ಎಂಬ ಮುಖ್ಯ ಸಲಹೆಗಾರರ ನೇತೃತ್ವದಲ್ಲಿ ಗಂಧವತಿ ಪ್ರಯೋಗ ಮುಂದುವರಿಯಿತು. ಅಷ್ಟೇನೂ ತೊಡಕಿಲ್ಲದೇ ಕಲವೇ ಸಮಯದಲ್ಲಿ ಈ ಪ್ರಯೋಗ ಯಶಸ್ವಿಯಾಯಿತು. ಗಂಧದ ಕೊರಡುಗಳಿಂದ ಘಮ-ಘಮ ಸುವಾಸನೆಯ ಸಿರಿ ಬೀರುವ ಗಂಧವತಿ ದ್ರವರೂಪ ತಾಳಿ ಅವತರಿಸಿದಳು. ಪ್ರಯೋಗದ ಸಾಫಲ್ಯದ ನಂತರ 1916 ರಲ್ಲಿ ಪುಟ್ಟ ಎಣ್ಣೆ ತೆಗೆಯುವ ಕಾಖರ್ಾನೆಯು ಸ್ಥಾಪನೆಯಾಯಿತು. ಶ್ರೀಗಂಧದ ಎಣ್ಣೆ, ಅದಾಗಲೇ ಮೈಸೂರು ಸಂಸ್ಥಾನ ಹೆಮ್ಮೆ ಪಡಬಹುದಾದ ಹಿರಿಮೆಗಳಿಸಿದ ರೇಷ್ಮೆ, ಬಂಗಾರಗಳ ಜೊತೆ ಸೇರಿತು. ಅಲ್ಲಿಂದೀಚೆಗೆ ಈ ಗಂಧವತಿ ದ್ರವರೂಪಿಣಿ ಪ್ರಪಂಚದ ಮೂಲೆ ಮೂಲೆಗಳಲ್ಲಿ ತನ್ನ ಸುವಾಸನೆಯ ಸಿರಿಯಿಂದಾಗಿ, ಬಳಕೆದಾರರ ಮನದನ್ನೆಯಾದಳು. ಅದರಿಂದಾಗಿಯೇ ಘಮ ಘಮಿಸುವ ಶ್ರೀಗಂಧದ ಸುವಾಸನೆ ಅಘ್ರಾಣಿಸಿದವರಿಗೆ ತಕ್ಷಣವೇ ಮೈಸೂರಿನ ನೆನಪಾಗುತ್ತದೆ.

ಇಂತಹ ಅಗಾಧ ಸಾಧನೆಗೆ ಹಿಡಿದ ಕಾಲ ಹೆಚ್ಚೇನಲ್ಲ. ಕೇವಲ ಒಂದೆರಡು ವರ್ಷಗಳು ಮಾತ್ರ. ಒಂದುವರ್ಷದ ನಂತರ ಬೆಂಗಳೂರಿನಲ್ಲಿ ಸ್ಥಾಪಿತವಾಗಿದ್ದ ಗಂಧದ ಎಣ್ಣೆ ಕಾಖರ್ಾನೆ ಮೈಸೂರಿಗೆ ವಗರ್ಾವಣೆಗೊಂಡಿತು. ಆಗಮೈಸೂರು ರಾಜಧಾನಿಯಾಗಿತ್ತಲ್ಲದೆ, ಮಹಾರಾಜರೂ ಇಲ್ಲೇ ವಾಸವಾಗಿದ್ದರು. ಇದಲ್ಲದೆ ಈಉದ್ಯಮ ಭಾರಿ ಲಾಭದಾಯಕವೆಂದು ಮನವರಿಕೆಯಾದದ್ದೇ ಈ ವಗರ್ಾವಣೆಗೆ ಮುಖ್ಯ ಕಾರಣವಾಯಿತು. ಆ ನಂತರ 1946 ರಲ್ಲಿ ಶಿವಮೊಗ್ಗದತುಂಗಾ ನದಿ ತೀರದಲ್ಲಿ ಇನ್ನೊಂದು ಕಾಖರ್ಾನೆ ತಲೆಯೆತ್ತಿತು. ಶಿವಮೊಗ್ಗ, ಚಿಕ್ಕಮಗಳೂರು ಮುಂತಾದ ಮಲೆನಾಡಿನ ಜಿಲ್ಲೆಗಳಲ್ಲಿ ಶ್ರೀಗಂಧದ ಮರ ಹೇರಳವಾಗಿದ್ದು, ಅವನ್ನು ಮೈಸೂರಿನ ಕಾಖರ್ಾನೆಗೆ ಸಾಗಿಸಬೇಕಾಗಿತ್ತು. ಸಾಗಾಣಿಕೆಯವೆಚ್ಚ ಬಹಳವಾಗುತ್ತಿತ್ತು. ಅಲ್ಲದೆ ತುಂಗಾ ನದಿಯ ತೀರದಲ್ಲಿ ಕಾಖರ್ಾನೆ ಸ್ಥಾಪಿಸುವುದರಿಂದ `ಮಾಲಿನ್ಯ ನಿವಾರಣೆ’ ಗೂ ತುಂಬಾ ಅನುಕೂಲವಾಗುತ್ತಿತ್ತು. ಈ ಎಲ್ಲಾ ಕಾರಣಗಳಿಂದ ಶಿವಮೊಗ್ಗದಲ್ಲಿ ಕಾಖರ್ಾನೆ ಸ್ಥಾಪನೆಯಾಯಿತು.
ಇದಿಷ್ಟೂ ಗಂಧವತಿ ದ್ರವರೂಪಿಣಿಯ ಕತೆ. ಇನ್ನು ಗಂಧವತಿ ಸಾಬೂನಿನ ಸಂಸಾರ. ದ್ರವರೂಪದಲ್ಲಿದ್ದ ಈಗಂಧವತಿ ಸಾಬೂನಿನ ರೂಪ ತಾಳಿದ್ದಂತೂ ಇನ್ನೂ ಸ್ವಾರಸ್ಯಕರ. ಕೃಷ್ಣರಾಜೇಂದ್ರ ವೃತ್ತದ ಬಳಿಯ ಬಹು ಅಂತಸ್ತಿನಕಟ್ಟಡದ ಹಿಂಭಾಗದಲ್ಲಿ ಸಾಬೂನು ಕಾಖರ್ಾನೆಯ ಪುಟ್ಟ ಘಟಕವೊಂದು ಕಾರ್ಯಪ್ರವೃತ್ತವಾಗಿತ್ತು. ಅಲ್ಲಿ ಬಟ್ಟೆಸಾಬೂನು ಮಾತ್ರ ತಯಾರಾಗುತ್ತಿತ್ತು.
1918 ನೇ ಇಸವಿಯಲ್ಲಿ ಫ್ರಾನ್ಸ್ನಿಂದ ಬಂದ ವಿದೇಶಿ ಅತಿಥಿಯೊಬ್ಬರು ಮಹಾರಾಜರನ್ನು ಕಂಡು ಒಂದು ಅಪರೂಪದ ಕಾಣಿಕೆ ನೀಡಿದರು. ಮೃದುವಾದ ವೆಲ್ವೆಟ್ ತಳಹದಿಯ ಸುಂದರ ಪಾಕೆಟ್ಟಿನಲ್ಲಿದ್ದ ಕೆನೆಬಣ್ಣದ ಮೂರು ಸೋಪಿನ ಬಿಲ್ಲೆಗಳೇ ಆ ಕಾಣಿಕೆ. ನಮ್ಮ ಕಾಖರ್ಾನೆಯಲ್ಲಿ ಉತ್ಪಾದಿಸಿದ ಶ್ರೀಗಂಧದ ಎಣ್ಣೆಗೆ ವಿದೇಶಗಳಲ್ಲಿ ಭಾರಿ ಬೇಡಿಕೆಯಿತ್ತು. ಇಲ್ಲಿಂದ ರಫ್ತಾಗಿದ್ದ ಗಂಧದ ಎಣ್ಣೆಯನ್ನು ಬಳಸಿ ತಯಾರಿಸಿದ್ದ ಸಾಬೂನನ್ನೇ ಆ ವಿದೇಶಿ ಅತಿಥಿ ಕಾಣಿಕೆಯಾಗಿ ನೀಡಿದ್ದ.
ಆ ನಂತರ ಮಹಾರಾಜರಿಗೆ ಶ್ರೀಗಂಧದ ಎಣ್ಣೆಯಿಂದ ಸಾಬೂನು ತಯಾರಿಸುವ ಹುಚ್ಚು ಹಿಡಿಯಿತು. ಅದಕ್ಕಾಗಿ ಮತ್ತೆ ರಾಸಾಯನಿಕ ತಜ್ಞರನ್ನು ಹುಡುಕತೊಡಗಿದರು. ಆಗ ರಸಾಯನಶಾಸ್ತ್ರದಲ್ಲಿ ಹೆಚ್ಚು ಅಧ್ಯಯನಮಾಡಿರುವ ಎಸ್.ಜಿ.ಶಾಸ್ತ್ರಿ ಎಂಬುವವರಿರುವುದಾಗಿ ತಿಳಿಯಿತು. ಅವರನ್ನು ನೇಮಕಮಾಡಿ, ಲಂಡನ್ನಲ್ಲಿ ಸಾಬೂನು ಮಾಡುವುದರ ಬಗ್ಗೆ ತರಭೇತಿ ಪಡೆದು ಬರಲು ಕಳಿಸಿಕೊಟ್ಟರು. ಅವರು ವಾಪಸ್ಸಾದ ಮೇಲೆ ಗಂಧವತಿ ಸಾಬೂನು `ಮೈಸೂರ್ ಸ್ಯಾಂಡಲ್’ ಜನ್ಮ ತಾಳಿತು.
ಮೈಸೂರ್ ಸ್ಯಾಂಡಲ್ ಸಾಬೂನಿನ ಜನಕರು ಎಸ್.ಜಿ.ಶಾಸ್ತ್ರಿಗಳು ಎಂದೇ ಹೇಳಬಹುದು. ಅವರ ಪೂರ್ಣ ಹೆಸರು ಸೋಸಲೆ ಗರುಳಪುರಿ ಶಾಸ್ತ್ರಿಗಳು ಎಂದು. ಅವರು ಲಂಡನ್ನಿನಲ್ಲಿ ತರಪೇತಾಗಿ ಬಂದ ನಂತರ ಫ್ರಾನ್ಸ್ನಿಂದ ಸುಗಂಧ ದ್ರವ್ಯ, ಜಪಾನಿನಿಂದ ಎಣ್ಣೆ, ಇಂಗ್ಲೆಂಡಿನಿಂದ ಕಾಸ್ಟ್ರಿಕ್ ಸೋಡಾ, ಆಷ್ಟ್ರೇಲಿಯಾದಿಂದ ಕಾಲರ್ ವೈಟ್, ಖಾದ್ಯಕೊಬ್ಬುಗಳನ್ನು ಆಮದು ಮಾಡಿಕೊಂಡರು.
ದೇಶದಲ್ಲಿ ಪ್ಯಾಕ್ ಮಾಡುವ ಹೊದಿಕೆಗಳ ಮುದ್ರಣಕ್ಕೆ ಬೇಕಾದ ಆಧುನಿಕ ಮುದ್ರಣ ಯಂತ್ರಗಳೂ ಕೂಡಆಗ ಇರಲಿಲ್ಲ. ಅವನ್ನು ಜರ್ಮನಿಯಲ್ಲಿ ಮುದ್ರಿಸಿ ತರಿಸಿಕೊಂಡರು. ಹೀಗೆ ಈ ಗಂಧವತಿ ಚಂದನ ಸಾಬೂನು ಬಿಲ್ಲೆಯಾಗಿ, ಕಾಗದದ ಉಡುಪು ಧರಿಸಿ, ದೇಶ ವಿದೇಶಗಳಲ್ಲಿ ಓಡಾಡುತ್ತಾ ತನ್ನ ಪರಿಮಳ ಚೆಲ್ಲತೊಡಗಿತು.
ಶಾಸ್ತ್ರಿಗಳು ಈ ಗಂಧವತಿಯನ್ನು ದೇಶ ವಿದೇಶಗಳಲ್ಲಿ ಓಡಾಡಿಸಲು ಬಹಳಷ್ಟು ಶ್ರಮಿಸುತ್ತಾ, ನಾನಾ ವಿಧಾನಗಳನ್ನು ಅಳವಡಿಸುತ್ತಿದ್ದರು. ಅವುಗಳಲ್ಲಿ ತುಂಬಾ ಮುಖ್ಯವಾದದ್ದು ಅವರು ವಿದೇಶಗಳಲ್ಲಿ ಏರ್ಪಡಿಸುತ್ತಿದ್ದ ಪ್ರದರ್ಶನಗಳು. ಇದರಿಂದ ಅಲ್ಲೆಲ್ಲಾ ಸ್ಯಾಂಡಲ್ ಸಾಬೂನಿನ ಜನಪ್ರಿಯತೆ ಹೆಚ್ಚಿತು.
ಪ್ರತಿಬಾರಿ ಪ್ರದರ್ಶನ ಏರ್ಪಡಿಸಿದಾಗ ಅಥವಾ ಇಂಗ್ಲೆಂಡಿಗೆ ಹೋದಾಗ ಶಸ್ತ್ರಿಗಳು ತಪ್ಪದೇ ಮಾಡುತ್ತಿದ್ದ ಇನ್ನೊಂದು ಕೆಲಸವೆಂದರೆ ಈ ಗಂಧವತಿ ಸಾಬೂನು ಬಿಲ್ಲೆಗಳನ್ನು, ಸುಂದದರವಾದ ಷೋಕೇಸಿನಲ್ಲಿಟ್ಟು ಅದನ್ನುವಿಕ್ಟೋರಿಯಾ ರಾಣಿಗೆ ಕಾಣಿಕೆಯಾಗಿ ಕೊಡುತ್ತಿದ್ದರು.
ಹೀಗಾಗಿ ಕನರ್ಾಟಕದ ಕಾಡು-ಮೇಡುಗಳಲ್ಲಿ ಹುಟ್ಟಿ,ಒಡಲಲ್ಲಿ ಸಿರಿಗಂಧ ತುಂಬಿಕೊಂಡ ಈ ಶ್ರೀಗಂಧದ ಮರ ತಾನು ತನ್ನನ್ನೇ ಹಿಂಡಿಕೊಂಡು ನೀಡಿದ ಪರಿಮಳದ ಎಣ್ಣೆ, ಆ ಎಣ್ಣೆಯಿಂದ ಹುಟ್ಟಿದ ಗಂಧವತಿ ಸಾಬೂನುಅದೇನು ಮೋಡಿ ಮಾಡಿತೋ, ಅರ್ಧ ಜಗತ್ತನ್ನು ತನ್ನ ಅಡಿಯಾಳಾಗಿರಿಸಿಕೊಂಡಿದ್ದ ಇಂಗ್ಲೆಂಡಿನ ವಿಕ್ಟೋರಿಯಾ ರಾಣಿಯನ್ನೇ ತನ್ನ ಕೈಸೆರೆ ಮಾಡಿಕೊಂಡಿತು. ರಾಣಿಯು ಶಾಸ್ತ್ರಿಗಳು ಕಳಿಸುವ ಮೈಸೂರಿನ ಶ್ರೀಗಂಧದ ಎಣ್ಣೆಗಾಗಿ, ಗಂಧವತಿ ಸಾಬೂನು ಬಿಲ್ಲೆಗಾಗಿ ಕಾತರದಿಂದ ಕಾಯುವಂತಾಗಿತ್ತು.
ಭಾರತದ ಏಕೈಕ ಗಂಧದ ಸಾಬೂನು ತಯಾರಿಸುವ ಕಾಖರ್ಾನೆ `ಮೈಸೂರು ಸ್ಯಾಂಡಲ್’ ಎಂದೇ ಹೆಸರಾಗಿಮನೆ ಮನೆ ಮಾತಾಗಿ ಬೆಳೆಯಿತು, ವಹಿವಾಟು ಹೆಚ್ಚಿತು.
1955 ರಲ್ಲಿ ಕೆಂಗಲ್ ಹನುಮಂತಯ್ಯನವರು ಮುಖ್ಯ ಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಾಗ, ಈಗಿನಬಹು ಅಂತಸ್ತಿನ ಕಟ್ಟಡದ ಆವರಣದಲ್ಲಿ ಸಂಸಾರ ಹೂಡಿದ್ದ ಅನೇಕ ಕೈಗಾರಿಕಾ ಘಟಕಗಳನ್ನು ಜನ ವಸತಿ ಪ್ರದೇಶದಿಂದ ಜನವಿರಳ ಪ್ರದೇಶಗಳಿಗೆ ವಲಸೆ ಹೋಗುವಂತೆ ಹೇಳಿದರು. ಅವರ ಆಣತಿಯಂತೆ 1957 ರಲ್ಲಿ ಈ ಸಾಬೂನುಘಟಕ ಯಶವಂತಪುರದ ಈಗಿನ ವಿಸ್ತಾರವಾದ ವಠಾರಕ್ಕೆ ಬಂದು ತಳವೂರಿತು.
ಆ ವೇಳೆಗಾಗಲೇ ಸಾಬೂನು ಉದ್ಯಮದಲ್ಲಿ ವಿಸ್ತರಣಾ ಮನೋಭಾವದ ಬಂಡವಾಳಿಗರು ಮಾರುಕಟ್ಟೆಯಲ್ಲಿ ಸ್ವಾಮ್ಯ ಹೂಡಿದ್ದರು. ಅವರ ರಂಗು ರಂಗಿನ ಜಾಹೀರಾತು ಜಾಲ, ಮಾರುಕಟ್ಟೆ ನೈಪುಣ್ಯದಿಂದಾಗಿ, ಇನ್ನೇನು ಸಾಬೂನು ಸಾಮ್ರಾಜ್ಯ ಖಾಸಗಿ ಬಂಡವಾಳಿಗರ ಸ್ವತ್ತಾಗಿ ಹೋಯಿತು ಎನ್ನುವ ಆತಂಕ ಮೂಡಿತ್ತು.
ಆದರೆ ವಿಸ್ತರಣಾವಾದಿ ಗುತ್ತಿಗೆದಾರರ ಪೈಪೋಟಿಗೆ ಎದುರಾಗಿ, ಕೇವಲ ಚಂದನದ ಎಣ್ಣೆ ಮತ್ತು ಚಂದನದ ಸಾಬೂನನ್ನೇ ನಂಬಿ ಕೂರದೆ ಕಾಖರ್ಾನೆಯನ್ನು ವಿಸ್ತರಿಸಿ, ಅದನ್ನು ಮೈಸೂರು ಸೋಪ್ಸ್ ಅಂಡ್ ಡಿಟರ್ಜಂಟ್ಸ್ಸಂಸ್ಥೆಯನ್ನಾಗಿ ಕಟ್ಟಿ ಕ್ರಮೇಣ ಹೊಸ ಹೊಸ ಸ್ನಾನದ ಸಾಬೂನು, ಬಟ್ಟೆ ಸಾಬೂನು ಮಾರ್ಜಕಗಳನ್ನು ತಯಾರಿಸಿಮಾರುಕಟ್ಟೆಗೆ ಬಿಡುಗಡೆ ಮಾಡಿ, ತನ್ನ ಸ್ವಂತಿಕೆಯನ್ನು ಉಳಿಸಿಕೊಂಡಿತು.
ಭಾರತದಲ್ಲೇ ಸರಕಾರಿ ವಲಯದ ಸಾಬೂನು ತಯಾರಿಕಾ ಕಾರ್ಖಾನೆ ಇದೊಂದೇ ಆಗಿರುವುದು ಗಮನಾರ್ಹ ಸಂಗತಿ. ಅಷ್ಟೇ ಅಲ್ಲದೆ ಅತ್ಯಾಧುನಿಕ ಯಂತ್ರೋಪಕರಣಗಳುಳ್ಳ ಸುಸಜ್ಜಿತ ಸಾಬೂನು ಕಾರ್ಖಾನೆಯೂ ಹೌದು. ಗಂಧದಸಾಬೂನು, ಗಂಧದ ಎಣ್ಣೆಗಳ ತಯಾರಿಕೆಯಲ್ಲಂತೂ ಈ ಸಂಸ್ಥೆ ಅನನ್ಯವಾದದ್ದು. ಭಾರತದಲ್ಲಿ ಇದೀಗ ಹಲವಾರು ಸಂಸ್ಥೆಗಳು ಗಂಧದ ಸಾಬೂನು ತಯಾರಿಸುತ್ತಿದ್ದರೂ, ಈ ಮೈಸೂರ್ ಸ್ಯಾಂಡಲ್ ಸಾಬೂನನ್ನು ಯಾರೂ ಸರಿಗಟ್ಟಲಾಗಿಲ್ಲ. [ಈ ಸಂಸ್ಥೆಯ ಪ್ರಾರಂಭಕ್ಕೆ ಹಾಗು ಗಂಧದ ಸಾಬೂನಿನ ತಯಾರಿಕೆಯ ಹಿಂದೆ ಒಬ್ಬ ಮೇರು ವ್ಯಕ್ತಿಯ ಪರಿಶ್ರಮವಿದೆ. ಅವರೇ ಗಂಧವತಿಯ ತಂದೆ ಶಾಸ್ತ್ರಿ.]
ಕೃಷ್ಣರಾಜೇಂದ್ರ ಒಡೆಯರ್ರವರು ಗಂಧದ ಸಾಬೂನು ತಯಾರಿಸಲು ನಿಶ್ಚಯಿಸಿ, ತಯಾರಿಕೆಯ ಹೊರೆಹೊರಬಲ್ಲ ಒಬ್ಬ ಪ್ರತಿಭಾವಂತನನ್ನು ಹುಡುಕತೊಡಗಿದಾಗ ಅವರಿಗೆ ಸಿಕ್ಕ ವ್ಯಕ್ತಿ ಮೈಸೂರು ಜಿಲ್ಲೆಯ ಸೋಸಲೆಯಗರಳಪುರಿ ಶಾಸ್ತ್ರಿ. ಮಹಾರಾಜರು ಶಾಸ್ತ್ರಿಯವರಿಗೆ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಸಾಬೂನು ತಯಾರಿಕೆಯನ್ನು ಕಲಿಯಲು ಇಂಗ್ಲೆಂಡಿಗೆ ಕಳಿಸಿದಾಗ ಶಾಸ್ತ್ರಿಯವರಿಗೆ ಅಚ್ಚರಿ. ಕೇವಲ ನಾಲ್ಕು ತಿಂಗಳಲ್ಲಿ ಕಲಿಯಬಲ್ಲೆನೆ ಎಂಬ ಆತಂಕಹಾಗು ಕಳವಳ. ಮಹಾರಾಜರ ವಿಶ್ವಾಸ ಮತ್ತು ನಂಬಿಕೆಗೆ ಎದುರಾಡದೇ ಹಡಗಿನಲ್ಲಿ ಲಂಡನ್ನಿಗೆ ಪಯಣಿಸಿದ ಶಾಸ್ತ್ರಿಯವರಿಗೆ ಅಲ್ಲಿ ಆದ ಅನುಭವವೇ ಬೇರೆ.
ಸಾಬೂನು ತಯಾರಿಕೆ ಕಲಿಯಲು ಬಂದ ಈ ವಿದೇಶಿ ವ್ಯಕ್ತಿಗೆ ಲಂಡನ್ನಿನ ಯಾವ ಕಂಪನಿಗಳೂ ತೆರೆದಬಾಗಿಲಿನಿಂದ ಸ್ವಾಗತಿಸಲಿಲ್ಲ. ಈ ಯೋಚನೆಯಲ್ಲೇ ಎರಡು ತಿಂಗಳು ಕಳೆದ ಶಾಸ್ತ್ರಿಯವರಿಗೆ, ಸಾಬೂನು ತಯಾರಿಕೆಯನ್ನು ಕಲಿಯಲಾಗಲಿಲ್ಲ ಎಂದು ಮಹಾರಾಜರಿಗೆ ತಿಳಿಸುವುದು ಹೇಗೆ? ಎಂಬ ಚಿಂತೆ.
ಈ ಯೋಚನೆಯಲ್ಲೇ ಮುಳುಗಿದ್ದ ಶಾಸ್ತ್ರಿಯವರಿಗೆ, ರೈಲಿನಲ್ಲಿ ಪರಿಚಯವಾದ ಪಾದ್ರಿಯೊಬ್ಬರ ಸಹಾಯದಿಂದ ಕಡೆಗೆ ಒಂದು ಕಂಪನಿಯಲ್ಲಿ ಸಾಬೂನು ತಯಾರಿಕೆ ಬಗ್ಗೆ ಕಲಿಯುವ ಅವಕಾಶ ದೊರೆಯಿತು. ಕೇವಲ ಎರಡುತಿಂಗಳ ಅವಧಿಯಲ್ಲಿ ಎಲ್ಲವನ್ನೂ ಕಲಿತು ಸ್ವದೇಶಕ್ಕೆ ಹಿಂದಿರುಗಿ, ಶ್ರೀಗಂಧದ ಸಾಬೂನು ತಯಾರಿಸಿ ಮಾರುಕಟ್ಟೆಗೆಬಿಡುಗಡೆ ಮಾಡಿಯೇ ಬಿಟ್ಟರು. ಯಾವುದೇ ಜಾಹೀರಾತು ಹಾಗು ಮಾರುಕಟ್ಟೆಯ ವ್ಯವಸ್ಥೆ ಇಲ್ಲದ 1920-30 ರಆ ಕಾಲದಲ್ಲಿಯೇ ಪ್ರಪ್ರಥಮವಾಗಿ `ಹಿಂದೂ’ ದಿನ ಪತ್ರಿಕೆಯಲ್ಲಿ ಜಾಹೀರಾತು ನೀಡಿ, ರಾಜಸ್ಥಾನದಲ್ಲಿ ದುಗರ್ಾಪೂಜೆಯಸಮಯದಲ್ಲಿ ಒಂಟೆಗಳ ಮೇಲೆ ನಗಾರಿ ಬಾರಿಸುತ್ತಾ, ಅಲ್ಲಿನ ಮನೆ ಮನೆಗೂ ಈ ಸಾಬೂನನ್ನು ಪರಿಚಯಿಸಿದರಲ್ಲದೇ, ಲಂಡನ್ನಿನ ವಸ್ತುಪ್ರದರ್ಶನದಲ್ಲಿ ಶ್ರೀಗಂಧದ ಸಾಬೂನನ್ನು ಪರಿಚಯಿಸಿ ಇಡೀ ವಿಶ್ವದಲ್ಲೇ ಮೈಸೂರ್ ಸ್ಯಾಂಡಲ್ ಸೋಪ್ನ ಹೆಸರು ಮನೆಮಾತಾಗುವಂತೆ ಮಾಡಿದರು.
ಗಾಂಧಿ ಮತ್ತು ಗಂಧವತಿ ನಂಟು
ಒಂದು ಕಡೆ ಸೂರ್ಯ ಮುಳುಗದ ಸಾಮ್ರಾಜ್ಯದ ಒಡತಿ, ಇನ್ನೊಂದು ಕಡೆ ದಾಸ್ಯದ ಪಂಜರದಲ್ಲಿ ಬಂಧಿಯಾಗಿದ್ದ ದೇಶವೊಂದರ ನಾಯಕ ಫಕೀರ. ಅತ್ತ ಐಶ್ವರ್ಯ, ಆಡಂಬರ, ಅಹಂಕಾರಗಳ ಶಿಬರ, ಇತ್ತ ಕಡೆ ಸರಳ,ಸಜ್ಜನಿಕೆ, ಪ್ರಾಮಾಣಿಕತೆಗಳ ತುಂಬೆ ಗಿಡ. ಅದು ಮನುಷ್ಯನ ಘನತೆ, ಸ್ವಾಭಿಮಾನವನ್ನು ಒತ್ತೆ ಇಟ್ಟುಕೊಳ್ಳುವ ಮನಸ್ಸು. ಇದು ಎಲ್ಲ ಮನುಷ್ಯರ ಹೃದಯದಲ್ಲಿ ಸ್ವಾತಂತ್ರ್ಯ, ಸ್ವಾಭಿಮಾನ ತುಂಬಿ ಮನುಷ್ಯನ ಘನತೆ ಎತ್ತಿ ಹಿಡಿಯುವ ಅಂತ:ಕರಣ. ಅದರದು ಹಿಂಸೆ, ಕ್ರೌರ್ಯದ ಪರಮಾಣು ಹಾದಿ. ಇದರದು ಪ್ರೀತಿ, ಪ್ರೇಮ, ಸರಳತೆಯ ಮಾರ್ಗ.
ಪರಸ್ಪರ ವಿರುದ್ಧ ದೃವಗಳನ್ನು ಪ್ರತಿಬಿಂಬಿಸುವ ಈ ಇಬ್ಬರು ಯಾರೆಂದು ಗೊತ್ತಾಯಿತಲ್ಲವೆ? ವಿಕ್ಟೋರಿಯಾ ರಾಣಿ ಮತ್ತು ಮಹಾತ್ಮಗಾಂಧಿ.
ಎರಡು ದೃವಗಳನ್ನು ಪರಸ್ಪರ ಸಂಘರ್ಷದ ಸಂಕ್ರಮಣ ಕಾಲದಲ್ಲಿ ಸುಗಂಧದಿಂದ ಸೆಳೆದುಕೊಂಡಕೀತರ್ಿ ಮೈಸೂರ್ ಸ್ಯಾಂಡಲ್ ಸಾಬೂನಿನದು. ವಿಕ್ಟೋರಿಯಾ ರಾಣಿಯಷ್ಟು ಮಹಾತ್ಮಗಾಂಧಿ ಈ ಚಂದನದ ಬಿಲ್ಲೆಗೆಬಾವುಕ ಪಡದಿದ್ದರೂ, ಒಮ್ಮೆ ಬಳಸಿ ಮೆಚ್ಚಿಕೊಂಡದ್ದು ಈ ಸಾಬೂನಿನ ಸೌಭಾಗ್ಯ.
1934 ರ ಫೆಬ್ರವರಿ ತಿಂಗಳಲ್ಲಿ ಗಾಂಧೀಜಿ ಕರ್ನಾಟಕಕ್ಕೆ ಭೇಟಿ ಕೊಟ್ಟಿದ್ದರು. ಕೊಡಗಿಗೂ ಹೋಗಿದ್ದರು.ಕೊಡಗಿನ ಪ್ರಕೃತಿ ಸೌಂದರ್ಯ ಅವರ ಮನ ಸೆಳೆಯಿತು. ಅವರ ಭೇಟಿಯ ವೇಳೆ ಗುಂಡುಕಟ್ಟಿ ಎಂಬ ಹಳ್ಳಿಯಲ್ಲಿತಂಗಿದ್ದರು.

ಆಗ ಕನ್ನಡದ ಖ್ಯಾತ ಕತೆಗಾರ್ತಿ ಜನರ ಬಾಯಲ್ಲಿ `ಕೊಡಗಿನ ಗೌರಮ್ಮ’ ಆಗಿದ್ದ ಬಿ.ಟಿ.ಗೌರಮ್ಮನವರಿಗೆ ಈಸುದ್ದಿ ತಿಳಿಯಿತು. ಗಾಂಧೀಜಿಯವರನ್ನು ತಮ್ಮ ಮನೆಗೆ ಅತಿಥಿಯಾಗಿ ಆಹ್ವಾನಿಸುವ ಆಸೆಯಾಯಿತು. ಗಾಂಧೀಜಿ ಗುಂಡುಕಟ್ಟಿಯಲ್ಲಿ ಬಂದು ತಂಗಿದ ಮರುದಿನವೇ ಅಲ್ಲಿಗೆ ಹೋದರು. ಕಂಬನಿದುಂಬಿಕೊಂಡು ಗಾಂಧೀಜಿಯವರನ್ನು ತಮ್ಮ ಮನೆಗೆ ಆಹ್ವಾನಿಸಿದರು. ಆದರೆ ಸ್ವಾಗತ ಸಮಿತಿ ಸಮ್ಮತಿಸಲಿಲ್ಲ. ಗೌರಮ್ಮನವರಿಗೆ ನಿರಾಸೆಯಾಯಿತು.
ಆದರೆ ಗಾಂಧೀಜಿ ಸ್ವಾಗತ ಸಮಿತಿಯ ಸಲಹೆಯನ್ನು ಧಿಕ್ಕರಿಸಿ ಗೌರಮ್ಮನವರ ಮನೆಗೆ ಅತಿಥಿಯಾಗಿ ಬಂದರು. ಮಡಿಕೇರಿಯಿಂದ 12 ಕಿ.ಮೀ. ದೂರವಿದ್ದ ಹರಡೂರು ಎಸ್ಟೇಟಿನಲ್ಲಿ ಗೌರಮ್ಮನವರ ಮನೆ ಇತ್ತು. ಇದುಸುಂಟಿಕೊಪ್ಪಕ್ಕೆ ತುಂಬಾ ಹತ್ತಿರ.
ಗಾಂಧೀಜಿ ಗೌರಮ್ಮನವರ ಮನೆಯಲ್ಲಿ ಉಳಿದರು. ಆಗ ಅವರು ಸ್ನಾನಕ್ಕೆ ಬಳಸಿದ್ದು ಖ್ಯಾತ ಮೈಸೂರ್ಸ್ಯಾಂಡಲ್ ಸೋಪನ್ನು. ಗಾಂಧಿಜಿ ಪ್ರವಾಸ ಮುಗಿಸಿ ವಾಪಸ್ಸಾದರು. ಅವರು ಬಳಸಿದ ಸಾಬೂನನ್ನು ಗೌರಮ್ಮನವರುಸಾಬೂನು ಪೆಟ್ಟಿಗೆಯಲ್ಲಿಟ್ಟು ಮುತ್ತನ್ನು ಚಿಪ್ಪಲ್ಲಿಟ್ಟು ರಕ್ಷಿಸುವಂತೆ ಜೋಪಾನ ಮಾಡಿದರು.
ಅನಂತರ ಇದು ಸ್ಮರಣೆಯ ಕಾಣಿಕೆಯಾಗಿ ಮೈಸೂರು ಮಾನಸಗಂಗೋತ್ರಿಯ `ಜಾನಪದ ವಸ್ತು ಸಂಗ್ರಹಾಲಯ’ಕ್ಕೆ ಸೇರಿತು. ಹಿಂದೆ ಕ್ಯುರೇಟರ್ ಆಗಿದ್ದ ಪಿ.ಆರ್.ತಿಪ್ಪೇಸ್ವಾಮಿಯವರು ಈ ಚಂದನದ ಬಿಲ್ಲೆಯನ್ನು ಸಂಗ್ರಹಿಸಿಜೋಪಾನವಾಗಿ ತಂದು ಜಾನಪದ ಸಂಗ್ರಹಾಲಯಕ್ಕೆ ಸೇರಿಸಿದರು.
ಗಾಂಧೀಜಿ ಬಳಸಿದ ಈ ಸಾಬೂನನ್ನು ಈಗಲೂ ಮಾನಸಗಂಗೋತ್ರಿಯ ಜಾನಪದ ಸಂಗ್ರಹಾಲಯದಲ್ಲಿ ನೋಡಬಹುದು.
ಏನೇ ಆಗಲಿ ಮನುಕುಲದ ಒಂದು ಕಾಲಘಟ್ಟದಲ್ಲಿ ಘಮಘಮಿಸುವ ಗಂಧದ ಪರಿಮಳವನ್ನು ಪ್ರಪಂಚಕ್ಕೆಬೀರಿ `ಗಂಧವತಿ’ ಎಂಬ ಬಿರುದು ಪಡೆದ ಸೌಭಾಗ್ಯ ಕರ್ನಾಟಕದ ಮೈಸೂರ್ ಸ್ಯಾಂಡಲ್ ಸಾಬೂನಿನದು. ಕಾಲ ಈಸುಗಂಧವನ್ನು ಎಂದೂ ಮರೆಯಲಾರದು.
(27 ವರ್ಷಗಳ ಹಿಂದೆ ಅಂದರೆ, 14-9-1986 ರಲ್ಲಿ ಸುದ್ಧಿ ಸಂಗಾತಿ ವಾರಪತ್ರಿಕೆಗಾಗಿ ಬರೆದಿದ್ದ ಲೇಖನ. ಇದರಲ್ಲಿ ಗಾಂಧಿ ಮತ್ತು ಗಂಧವತಿ ನಂಟು ಎಂಬ ಲೇಖನ ಬರೆದವರು ಕೋಟಗಾನಹಳ್ಳಿ ರಾಮಯ್ಯ. ಈ ಲೇಖನಕ್ಕಾಗಿ ನಾವಿಬ್ಬರೂ ಒಂದು ವಾರ ಅಧ್ಯಯನ ನಡೆಸಿ ಮಾಹಿತಿ ಕಲೆ ಹಾಕಿದ್ದೆವು.)

‍ಲೇಖಕರು G

18 October, 2013

3 Comments

  1. Prabhakar Nimbargi

    Such articles should be reprinted time and again lest the future generations lose significance of their heritage. Thanks a lot for the piece of essential knowledge!

  2. Kiran

    Mr SG Shastri is not adequately honored for his fabulous contribution. Those who are interested can read small article on him in Dr DVG’s Jnapaka Chitrashale.

  3. Kavya Nagarakatte

    ಲೇಖನ ತುಂಬ ಉಪಯುಕ್ತವಾಗಿದೆ ಸರ್, ಇಪ್ಪತ್ತೇಳು ವರುಷಗಳ ಹಿಂದೆ ಬರೆದದ್ದು ಅಂತ ನೀವು ತಿಳಿಸದಿದ್ದರೆ ಗೊತ್ತೇ ಆಗುತ್ತಿರಲಿಲ್ಲ. ಫ್ರೆಶ್ ಅನ್ನಿಸುತ್ತದೆ, ಮೊದಲ ಬಾರಿ ಮೈಸೂರು ಸ್ಯಾಂಡಲ್ ಸಾಬೂನನ್ನು ಕವರಿನಿಂದ ತೆಗೆದಂತೆ. ಅಲ್ಲದೇ ಕೊಡಗಿನ ಗೌರಮ್ಮನವರು ಗಾಂಧೀಜಿಯವರು ಉಪಯೋಗಿಸಿದ್ದ ಸಾಬೂನನ್ನು ಜೋಪಾನವಾಗಿ ಕಾಯ್ದಿರಿಸಿದ್ದ ಉಲ್ಲೇಖದಿಂದ ಲೇಖನಕ್ಕೊಂದು ಭಾವುಕ ಕಳೆ ಪ್ರಾಪ್ತವಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading