ವೈಶಾಲಿ ಹೆಗಡೆ
ಎಲ್ಲಿ ಅತ್ಯಾಚಾರ ಎಂಬ ಸುದ್ದಿ ಕೇಳಲಿ, ಓದಲಿ ಒಂದಷ್ಟು ಜನ ಬಂದು ಬಿಡುತ್ತಾರೆ ಎಲ್ಲದಕ್ಕೂ ಒಂದೇ ಮದ್ದು ಎಂಬಂತ ಸಲಹೆ ಹಿಡಿದುಕೊಂಡು’ ಈಗೀಗ ನೀವು ಹೆಂಗಸರು ಹಾಕಿಕೊಳ್ಳುವ ಬಟ್ಟೆಯೇ ಕಾರಣ. ನಿಮ್ಮ ಪಾಲಿನ ಅನಾಹುತವನ್ನು ನೀವೇ ಅಹ್ವಾನಿಸಿಕೊಳ್ಳುತ್ತೀರಿ” ಎಂಬಂತ ಅಮೂಲ್ಯ ವಿಚಾರದ ವಾದದೊಂದಿಗೆ.
ಹೌದಲ್ಲವೇ, ಛೆ ನಾವೆಂತ ದಡ್ಡರು! ಅಯ್ಯೋ ಗಂಡಸರು ಕೂಡ ಮನುಷ್ಯರು ಎಂದುಕೊಂಡುಬಿಟ್ಟಿದ್ದೇವೆ, ಎಂತ ಮಂಕುದಿಣ್ಣೆಗಳು ನಾವು. ಅವರಿಗಿನ್ನೂ ಮನುಷ್ಯರಾಗಲು ಬಹಳ ಸಮಯ ಹಿಡಿಯುತ್ತೆ ಕಂದಾ ಮೈ ಮುಚ್ಚಿಕೋ ನೀನು ಎಂದು ನಾವೇ ಹೇಳಿಕೊಡಬೇಕಿತ್ತು ನಮ್ಮಕ್ಕಳಿಗೆ. ತಪ್ಪಾಗಿ ಹೋಯಿತು.
***
ಪಾಶ್ಚಾತ್ಯ ಸಂಸ್ಕೃತಿ ಅನುಕರಿಸುತ್ತಾ ಸಣ್ಣ ಚೊಣ್ಣ ಏರಿಸಿಕೊಂಡು ಓಡಾಡಿದರೆ ಬಿಡುವರೇ?
ಅಯ್ಯೋ ಅಮೆರಿಕೆ, ಯೂರೋಪಿನ ಬೀದಿಬೀದಿಗಳಲ್ಲಿ ಸಾವಿರಾರು ಅತ್ಯಾಚಾರಗಳು ದಿನನಿತ್ಯ ನಡೆಯುತ್ತವ ಬೇಕಾದರೆ ಕೇಳಿ ನೋಡಿ . ಅಲ್ಲಿ ಲಕ್ಷಾಂತರ ಜನ ಬೇಸಿಗೆಯಲ್ಲಿ ಹಾಗೆ ಅಲ್ಲವೇ ಅಡ್ಡಾಡುವುದು?
ಅಯ್ಯೋ ಇಲ್ಲವ? ಹಾಗೆಲ್ಲ ಆಗುವುದಿಲ್ಲವ?
ಲಕ್ಷಣವಾಗಿ ಸೀರೆ ಉಟ್ಟುಕೊಂಡು ಹೋಗಲಿಕ್ಕೆ ನಿಮಗೆಲ್ಲ ಏನು ಧಾಡಿ?
ಅಯ್ಯೋ ಸೀರೆಯಲ್ಲಿ ನಮ್ಮ ಸಣ್ಣ ಸೊಂಟ, ಬಿನ್ನಾಣದ ಬೆನ್ನು ಎಲ್ಲ ಕಂಡರೆ ಅಡ್ಡಿಲ್ಲವ? ಅದಿರಲಿ, ನೀವೆಲ್ಲರೂ ಬರಿಮೈಯಲ್ಲೇ ಬೆವರೊರೆಸಿಕೊಂಡು ಕಂಡ ಕಂಡಲ್ಲಿ ನಗ್ನಸತ್ಯ ಅರಸುತ್ತ ಒರೆಸುತ್ತಾ ನಿಲ್ಲುತ್ತೀರಲ್ಲ, ಎಷ್ಟು ಹೆಂಗಸರು ಮುಗಿಬಿದ್ದಿದ್ದಾರೆ?
ಇದೆಂತ ತಲೆಕೆಟ್ಟ ಪ್ರಶ್ನೆ? ನಾವು ಗಂಡಸರು ಎಲ್ಲಿ ಏನು ಬೇಕಾದರೂ ತೋರಿಸಬಹುದು, ಹೆಂಗಸರು ಹಾಗೆಲ್ಲ ಬಟ್ಟೆ ಧರಿಸಿದರೆ ಅದು ಪ್ರಚೋದನಕಾರಿಯಾಗುತ್ತೆ, ಸಂಸ್ಕೃತಿ ಎಲ್ಲಿಗೆ ಹೋಗುತ್ತಮ್ಮ?
ಒಹೋ ಹೌದು ಮರೆತೇ ಬಿಟ್ಟಿದ್ದೆ, ಸಂಸ್ಕೃತಿ ಕಾಯುವ ಮಹತ್ತರ ಜವಾಬ್ದಾರಿ ಪುಟ್ಟ ಪಾಪಚ್ಚಿ ಹೆಣ್ಣು ಮಕ್ಕಳಿಗೆ ಮಾತ್ರ! ಗಂಡಸರ ಕೆಲಸ ಬರೀ ಪ್ರಚೋದನೆಗೊಳ್ಳುವುದು.
ಎಲ್ಲ ಈ ಅದ್ಧುನೀಕತೆ ಎಂಬ ಹುಚ್ಚು ಅದರಿಂದಲೇ ಇಷ್ತಾಗಿದ್ದು!
ಹ್ನೂ ಇರಬಹುದೇನೋ? ಆದರೆ ಹಾಲಕ್ಕಿ ಹೆಂಗಸರು ಶತಮಾನಗಳಿಂದ ರವಿಕೆಯಿಲ್ಲದೆ ಸೀರೆಯುಡುತ್ತ ಬಂದಿದ್ದಾರಲ್ಲ! ಆ ಆದಿವಾಸಿ ಅಜ್ಜಿ ಅದೇ ಕಂಡಿಲ್ಲವಾ ಅವಳನ್ನು? ಅವಳಂತೂ ಸೊಂಟದಿಂದ ಮೇಲೆ ಪ್ರಾಯಕಾಲದಲ್ಲಿ ಕೂಡ ಏನೂ ಧರಿಸಿರಲಿಲ್ಲ. ಅವರ ಕೇರಿಯಲ್ಲೆಲ್ಲೂ ಅತ್ಯಾಚಾರಗಳು ಈ ಬಗೆಯಲ್ಲಿ ನಡೆದಿಲ್ಲವಲ್ಲ. ನಿಮ್ಮ ಲೆಕ್ಕದಲ್ಲಿ ಆ ಗಂಡಸರು ಗಂಡಸರಲ್ಲವೇ?
***
ನಾವು ಹಾಕಿಕೊಳ್ಳುವ ಬಟ್ಟೆ ನಮ್ಮ ಮರ್ಜಿಗೆ ತಕ್ಕಂತೆ ಎಂದು ಅಂದುಕೊಂಡಿದ್ದು ತಪ್ಪಾಯಿತೇ?
ಹಾಗಿದ್ದರೆ ಗಂಡಸರ ನೈತಿಕತೆ ಒಂದು ಬಟ್ಟೆಯ ಚೂರಿಗೂ ಗಟ್ಟಿ ನಿಲ್ಲದಷ್ಟು ದುರ್ಬಲವೇ? ನಾಗರೀಕತೆ ಎಂದರೆ ಅದು ಗಂಡಸರು ಪ್ರಚೋದನೆಗೊಳ್ಳದಂತೆ ಸದಾ ಹೆಂಗಸರು ನಿರ್ವಹಿಸಬೇಕಾದ ಸಮಾಜ ಮಾತ್ರವೇ? ಹಾಗಿದ್ದರೆ ಹೆಂಗಸರು ಸಭ್ಯ ಸಮಾಜದಲ್ಲಿ ಅಸಭ್ಯ ಉಡುಗೆ ಯಾವುದು, ವರ್ತನೆ ಯಾವುದು ಎಂದು ನಿರ್ಧರಿಸಲಾರದಷ್ಟು ಮತಿಹೀನರಾದೆವೆ?
ಮನುಷ್ಯ ತನ್ನ ವಿಕೃತಿಯ ಮುಚ್ಚಿಡಲು ಹೆಂಗಸರ ಅಂಗುಲ ಅಂಗುಲವನ್ನೂ ಮುಚ್ಚಿಡುತ್ತ ಬಂದರೆ ಅದು ನಾಗರೀಕತೆಯ ಹಾದಿಯೇ?
ಯಾವ ಹೆಣ್ಣಿಗೆಗೆ ಬೇಕಾಗಿದೆ ರಕ್ಷಣೆ, ಕೃಪೆ, ಮಾನ ಕಾಪಾಡುವ ಗಂಡಸು ಸಮಾಜ? ನಮಗೆ ಬೇಕಿರುವುದು ನಮ್ಮನ್ನು ನಮ್ಮಂತೆ ಬಾಳಲು ಬಿಡುವ ಸ್ವಸ್ತ ಸಮಾಜ. ನಮ್ಮ ಧೈರ್ಯಕ್ಕೂ ಆತ್ಮವಿಶ್ವಾಸಕ್ಕೂ ಅದೊಂದು ಭಾರೀ ಸಾಧನೆ ಎಂಬಂತ ಕಿರೀಟವೂ ಬೇಡ. ನಮಗೆ ಬಾಳು ಕೊಡುವೆ ಮಾನ ಕಾಯುವೆ ಎಂಬಂತ ಉದಾತ್ತ ಗುಲಾಮಗಿರಿಯೂ ಬೇಡ. ಮನುಷ್ಯರಾದ ನಮ್ಮನ್ನೂ ನೀವೂ ಮನುಷ್ಯರಾಗಿ ಮನುಷ್ಯ ಕಣ್ಣಿಂದ ನೋಡಿ ಅಷ್ಟೇ.
ನಿರಾಶೆ ಪಡಬೇಕಿಲ್ಲ. ಯಾಕೆಂದರೆ ಮನುಷ್ಯರಾಗಿರುವ ಬಹಳಷ್ಟು ಗಂಡಸರು ನಮ್ಮ ಸುತ್ತಲೂ ಇದ್ದಾರೆ. ಈ ಗಂಡಸು ಸಮಾಜ ಮನುಷ್ಯ ಸಮಾಜವಾಗುವ ದಿನ ಬರಬೇಕಿದೆ. ಕಾಯುವ ಕೆಲಸ ಬಾಕಿಯಿದೆ. ಅಲ್ಲಿಯವರೆಗೆ ಮೈಮುಖ ಮನಸ್ಸೆಲ್ಲ ಗಟ್ಟಿ ಬಟ್ಟೆಯೊಂದರಲ್ಲಿ ಸುತ್ತಿ ಕಟ್ಟಿ ಮುಚ್ಚಿಬಿಡುತ್ತೇವೆ. ಪದೇ ಪದೇ ಪ್ರಚೋದನೆಗೊಳ್ಳುವ ಕರ್ಮ ನಿಮಗ್ಯಾಕೆ ಅಲ್ಲವೇ?







ಶ್ರೀಮತಿ ವೈಶಾಲಿ ಹೆಗಡೆಯವರೇ ಲೇಖನ ಚ್ನೆನ್ನಾಗಿದೆ. ಮೆಲುಕು ಹಾಕುವಂತದ್ದು.ಸಾಮಾನ್ಯವಾಗಿ ಗಂಡಸು ಎಂಬುವವನು ಅತ್ಯಾಚಾರ ಎಂಬ ದುಷ್ಕೃತ್ಯ ಮಾಡಲಾರ. ದುರ್ಬಲ ಮನಸ್ಸಿನವನು ವಿಕೃತ ಮನಸ್ಸಿನವನು ಅ ಕೆಲಸ ಮಾಡುತ್ತಾನೆ. ಸಮಾಜ ಸಹ ಎಚ್ಚೆತ್ತುಕೊಂಡು ಪರಿವರ್ತನೆಯಾಗಬೇಕು
very nice write up.
Thought provoking article Vaishali. You have expressed what’s in most women’s mind.
ವೈಶಾಲಿ ಮೇಡಂ
ಹೆಣ್ಣು ಮಕ್ಕಳ ಬಟ್ಟೆಯಲ್ಲಿ ಅಲ್ಲ ಅತ್ಯಾಚಾರದ ಕರಿನೆರಳಿರುವುದು..
ವಿಕೃತ ಮನಸ್ಸಿನ ಗಂಡು ಜಾತಿಯಾಲ್ಲಿ ಅದಿರುವುದು…
ನೈತಿಕತೆಯ ಪತನ, ಎಲ್ಲರೂ ಬೊಬ್ಬಿಡುವ ಸಂಸ್ಕೃತಿ ಅನ್ನುವ ಆ ಸಂಸ್ಕೃತಿಯ ನಾಶ ಆಗುತ್ತಿರುವುದು ಇಂತಹ ಕಾಮಂಧರಿಂದ… ಅದನ್ನು ಮೊದಲು ಅರಿತುಕೊಂಡು, ಇಂತವರಿಗೆ ಶೀಘ್ರ ಶಿಕ್ಷೆ ನೀಡುವ ವ್ಯವಸ್ಥೆಯಾಗಲಿ.. ನಂತರ ನಮ್ಮಲ್ಲಿ ಬರಲಿ, ವಸ್ತ್ರ ಸಂಹಿತೆ ಜಾರಿಗೊಳಿಸಲು…. ನೋಡೋಣ…
ಇಷ್ಟವಾಯ್ತು ಲೇಖನ.
-ಸುಷ್ಮಾ ಮೂಡುಬಿದರೆ
ಮುತ್ತಿನಂತಹ ಮಾತು! ಕಾನೂನು ಬದಲಾಗಲೇ ಬೇಕಾದ ಸಮಯ ಬಂದಿದೆ! ಭಾರತೀಯರೇ, ಕಾಲ ಮಿಂಚಿ ಹೋಗುವ ಮೊದಲು ಎಚ್ಚತ್ತುಕೊಳ್ಳಿ!
Good one !
ಉತ್ತಮವಾದ ನಿಜ ಬರಹ..ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಅವರ ರಕ್ಷಣೆಗೆ ನಿಲ್ಲುವುದು ಮನುಷ್ಯ ಧರ್ಮ ಅದು ಬಿಟ್ಟ.ಹೆಣ್ಣಿಗೆ ರಕ್ಷಣೆ,ಬಾಳು ಕೊಡುತ್ತೇವೆ ಎಂದು ಹೇಳುತ್ತಾ ಎಲ್ಲವೂ ಗಂಡು ಕೊಟ್ಟರೇನೆ ಹೆಣ್ಣು ಪಡೆಯಲರ್ಹಳು ಎಂದು ಹೇಳುವವರೆ ಬಹುತೇಕ ಮಂದಿ. ಸಮಾನತೆ, ಸ್ವಾತಂತ್ರ್ಯ ಪ್ರತಿಯೊಬ್ಬ ವ್ಯಕ್ತಿಗೂ ಇರಬೇಕಾದುದ್ದೇ ಹೊರತು ಯಾರೊ ಕೊಡುವಂತದ್ದಲ್ಲವಲ್ಲ.ಆದರೆ ಹಿಂದಿನತೆ ಇಂದೂ ಕೂಡ ಸಮಾಜದಲ್ಲಿ ಧರ್ಮ,ಜಾತಿಗಳ ಪೊಳ್ಳು ಆಚರಣೆಗಳ ನೆಪದಲ್ಲಿ ಹೆಣ್ಣಿನ ಸ್ವಾತಂತ್ರ್ಯಹರಣ ಮಾಡಿ ಯಾರದೋ ಆಜ್ಞಾ ಪಾಲಕರಾಗಿಸಿರುವುದು ಒಂದು ರೀತಿಯಾದರೆ , ಇನ್ನೊಂದು ಕಡೆ ಗಂಡ ಹೆಣ್ಣೆಂಬ ಭೇದವಿಲ್ಲದೆ ಮನುಷ್ಯರಾಗಿ ತಮ್ಮದೇ ಚಿಂತನೆಗಳಿಂದ ಕ್ರಿಯಾಶೀಲರಾಗಿ ಸಮಾಜಮುಖಿಯಾಗಿ ಏನನ್ನೋ ಸಾಧಿಸುತ್ತಾ ಅಥವಾ ಸಾಧಾರಣ ಜೀವನ ಸಾಗಿಸುತ್ತಿರುವವರಿಹರಾದರೂ ಇಂಥ ಮುಕ್ತ ಮನಸ್ಸಿನ ಹೆಣ್ಣುಗಳು ಕೂಡಾ ಮಾನಸಿಕ, ದೈಹಿಕ ಅತ್ಯಾಚಾರಿಗಳಿಂದ ತಮ್ಮನ್ನು ತಾವೆ ಅಥವಾ ಬೇರೆಯವರಿಂದ ರಕ್ಷಿಸಿಕೊಳ್ಳಬೇಕಾದ ಸ್ಥಿತಿಯಲ್ಲೇ ನಾವಿಂದೂ ಬದುಕಬೇಕಿರುವುದು ದುರಂತ…
Dear Vishali mam…..
Really a wonderful writing…. what u have said is 100% true…
what you said is right madam. We have to change and accept reality. Go ahead , educate more people.
ಇದು ಒಂದು ರೀತಿಯ ಲ್ಲಿ ಓದಿದರೆ ಆಕ್ರೋಶಿತರಾಗಿ ಬರೆದಂತಿದೆ.. ಅತ್ಯಾಚಾರಕ್ಕೆ ಡ್ರೆಸ್ ಕೋಡು “””” ಒಂದೇ…..”””” ಕಾರಣ ವಲ್ಲ… ಎಂಬುದು ಸತ್ಯ…
ಆದರೆ ಅದೂ.. ” ಒಂದು” ಕಾರಣ ವಾಗಿರಬಹುದು..
ಇತ್ತೀಚಿಗಿನ ಕೆಲವು ಪ್ರಕರಣ ಗಳ ಹಿನ್ನಲೆ ನೋಡಿದರೆ ಅದರ ಬಗ್ಗೆ ಒಂದುವಿವರ ವಾದ ಸಭ್ಯ.. ಲೇಖನ ಬಂದರೆ ಉತ್ತಮ..ಅದರೆಲ್ಲಿ… ಈ ಗಂಡು ಜಾತಿ… ಮಾನ ಕಾಯುವುದು .. ಜೀವನ ಕೊಡುವುದು.. ಮತಿ ಹೀನರಾದರೆ.. ಇತ್ಯಾದಿಗಳು ಬೇಡಪ್ಪ… ಅದು..ಯುದ್ದಕ್ಕೆ ಆಹ್ವಾಸಿಸುವಂತಿದೆ..೧. ಸ್ವೇಚ್ಛೆ… ಸ್ವಾತಂತ್ರ್ಯ ವಲ್ಲ.. ೨. ಡ್ರೆಸ್ …ಕೋಡ್…ಸ್ವಾತಂತ್ರ್ಯ ಹರಣ ವಲ್ಲ ಅದು ಕರ್ತವ್ಯ.. ಅದೂ ೩. ಈ ಎರಡೂ ಜಾತಿಗಿರಲಿ.. ಅದನ್ನ ಹದಿ ಹರೆಯ ದ ಮಕ್ಕಳು ಇರುವ ಮಧ್ಯಮ ವರ್ಗದ ಜನರು ಬರೆಯಲಿ.. ಅವರಿಗೆ ಒಂದು ನಲುವತ್ತೈದು ವರ್ಷ ವಾದರೂ ಅಗಿರಲಿ.. ಅದನ್ನು ಓದಿ ಅನುಕರಿಸುವಾ..
ನಿನ್ನದು ಆರ್ಯ ಸಂಸ್ಕೃತಿ ಏನೂ ಮಾಡೊಕ್ಕಾಗೊಲ್ಲ ಕಣೊ
ನಮ್ಮ ದೇಶವನ್ನೇ ಹಾಳುಗೆಡುವಿದ ಸಂತಾನವಲ್ಲವೇ ನಿಂದು?
ಅತ್ಯಾಚಾರಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಅವರ ಮಾನಸಿಕ ಸ್ಥಿತಿಯನ್ನೂ ವಿಶ್ಲೇಷಿಸುವ ಯತ್ನ ಮಾಡಿದಾಗ, ಉತ್ತರ ದೊರೆಯಬಹುದು.
ಬಿಚ್ಚುಡುಗೆಯ ಹೆಣ್ಣು ಮಕ್ಕಳೇ ಅತ್ಯಾಚಾರಕ್ಕೊಳಗಾಗಿದ್ದಾರೆಂಬುದು ತಪ್ಪು.
ಬಿಚ್ಚುಡುಗೆಯ ಹೆಣ್ಣು ಮಕ್ಕಳು, ಅದೂ ಸಂಬಂಧಿಕರಲ್ಲದಾದಾಗ ಅಥವಾ ಅಪರಿಚಿತರಾದಾಗ, ನೋಡುಗರ ಮನಸ್ಸುಗಳಲ್ಲಿನ ಭಾವನೆಗಳನ್ನು ಕೆರಳಿಸುವುದಿಲ್ಲ ಅನ್ನುವುದೂ ತಪ್ಪು.
ಆದರೆ, ಆ ಭಾವಗಳನ್ನು ಮೆಟ್ಟಿನಿಲ್ಲುವ ಮನೋಸ್ಥೈರ್ಯ ಹಲವರಲ್ಲಿ ಸದಾ ಕೆಲಸ ಮಾಡುತ್ತಿರುತ್ತದೆ.
ಮೈಮನ ಕೆರಳಿಸಿದ ಹೆಣ್ಣೂ, ಅತ್ಯಾಚಾರಕ್ಕೊಳಗಗುವ ಹೆಣ್ಣೂ ಒಂದೇ ಆಗಿರಬೇಕೆಂದೇನೂ ಇಲ್ಲ.
ಯಾರದೋ ಮೇಲಿನ ಕೋಪವನ್ನು ಇನ್ನಾರದೋ ಮೇಲೆ ಇಳಿಸುವುದು ಮಾನವನ ಸಹಜಗುಣವಲ್ಲವೇ?
ಮನೋಸ್ಥೈರ್ಯದ ಕೊರತೆ ಇರುವ, ಕೆರಳಿದ ಮನಸ್ಸುಗಳಲ್ಲಿ ಯೋಜನೆಗಳು ರೂಪುಗೊಳ್ಳಬಹುದು. ಅವು ಅವಕಾಶಕ್ಕಾಗಿ ಕಾಯಬಹುದು. ಅವನ್ನು ಕಾರ್ಯರೂಪಕ್ಕಿಳಿಸಲು, ಪ್ರತಿರೋಧವನ್ನು ವ್ಯಕ್ತಪಡಿಸಲು ಅಶಕ್ತರಾದ “ಸಾಫ್ಟ್ ಟಾರ್ಗೆಟ್”ಗಳನ್ನು ಹುಡುಕಾಡುತ್ತಿರಬಹುದು.
ಇವನ್ನೆಲ್ಲಾ ಭಿನ್ನದೃಷ್ಟಿಕೋನದಿಂದ ಅಭ್ಯಸಿಸಬೇಕಾದ ಅಗತ್ಯ ಇದೆ. ಸುಮ್ಮನೇ ಹತ್ತು ಸಾಲುಗಳಲ್ಲಿ, ಬರೆದು ಇತ್ಯರ್ಥಪಡಿಸಬಹುದಾದ ವಿಷಯ ಅಲ್ಲವೇ ಅಲ್ಲ.
ಇದರಿಂದ “ನಾನೂ ಮಾತಾಡಿದ್ದೇನೆ” ಎಂದು ಅನಿಸಿಕೊಳ್ಳಬಹುದು ಅಷ್ಟೇ!
I totally agree with ur opinion abt moving towards Western culture…. But wat bothers me abt these girls u spoke abt is, Is it really necessary to show their skin too much??? Skirts approximately around knee is okay, but y mini??? Not every man u see around u does these… Infact those men u mentioned “ಈಗೀಗ ನೀವು ಹೆಂಗಸರು ಹಾಕಿಕೊಳ್ಳುವ ಬಟ್ಟೆಯೇ ಕಾರಣ” wud definitely be from ur family too, but not our generation… To be more precise, men who rape are always thinkers abt KAMA… Reason being they r not taught in schools and prepared at an early stage of their life… This is just wat i’ve in my mind… And even I hangout with my frnds who wear shorts… Just to tell some of u who’ve commented “Do not Address to all the men wen u dont know abt all the MEN”… And Finally, Vyshali hegde’avre, ur thought cudn’t keep me away from sharing ur post…