ಬಿ ವಿ ಭಾರತಿ
ಆಗಸ ಪೂರಾ ದುಗುಡ ಅವತ್ತು
ಮೋಡ ಒಡೆದು ಹನಿಯಾಗಿ
ಹಗುರಾಗಿ ಬಿಟ್ಟಿತು ಹೇಗೋ …
ಕಿಟಕಿಗೆ ಮುಖವಾನಿಸಿ ನಿಂತ
ನನಗೂ ಒಂದಿಷ್ಟು ಹನಿಗಳ
ಸ್ಪರ್ಶ ಸುಖ !
ಮಳೆ ಬಂದದ್ದಕ್ಕೆ ಸಾಕ್ಷಿಯೀಗ
ಈ ಒದ್ದೆ ನೆಲ
ಹಸಿರೊಡೆದ ಗಿಡ ಮತ್ತು
ಸದ್ದಿಲ್ಲದ ಗಾಳಿಯಷ್ಟೇ ;
ನನ್ನೊಡನೆ ಉಳಿದದ್ದು ಮತ್ತದೇ
ಖಾಲಿ ಖಾಲಿ ಸಂಜೆ
ಮತ್ತು ಒದ್ದೆ ಒದ್ದೆ ನಕ್ಷತ್ರ ….
]]>




nice…
waah…just superb
ಜೊತೆಗೆ ಮಣ್ಣಿನ ಪರಿಮಳ …ತುಂಬಾ ಚೆನ್ನಾಗಿದೆ .ಅಭಿನಂದನೆಗಳು .