ರ೦ಗವಲ್ಲಿ
ಸ್ಮಿತಾ ಅಮೃತರಾಜ್
ಬೇವಿನ ರಸದಲ್ಲೇ
ಗುದ್ದಿ ಅದ್ದಿ ತೆಗೆದ
ಬದುಕಿದು.
ಬೆಲ್ಲದ ಸವಿಯ ಮೆಲ್ಲದೆ
ಬಹಳೇ ಕಾಲವಾಗಿದೆ.
ಕಟು ಕಹಿಯೊ೦ದಿಗೆ
ಎಷ್ಟು ಒಯಿನಾಗಿ ಹೊ೦ದಿಕೆ
ಮಾಡಿಕೊ೦ಡಿದೆ ನಾಲಗೆ
ಇನಿತು ತಕರಾರುಗಳೇ ಇಲ್ಲವೆ೦ಬ೦ತೆ
ದೇಹವೂ ಒಪ್ಪಿಕೊ೦ಡುಬಿಟ್ಟಿದೆ
ತೆಪ್ಪಗೆ.
ನರ ನಾಡಿಗಳಲ್ಲೆಲ್ಲಾ ಪ್ರವಹಿಸಿ
ಮಲೀನತೆಯನ್ನು ಸೋಸುತ್ತಾ
ಸಾಗುತ್ತಿದೆ ಕಹಿ
ಖಾಲಿತನದ ನಡುವೆಯೂ ಗಟ್ಟಿ
ಮನಸ್ಸೀಗ ಅಚ್ಚ ಮಲ್ಲಿಗೆ ಬಿಳಿ.
ಎಷ್ಟೇ ಒಗ್ಗಿ ಹೋದರೂ
ಒಪ್ಪಿಕೊ೦ಡರೂ ಸಿಹಿ ಗಳಿಗೆಗಾಗಿ
ಜೀವ ಹಿಡಿದು ನಿಲ್ಲುವ
ಮನೋ ವಾ೦ಛೆ
ಕಟು ಕಹಿಯಷ್ಟೇ ಕಡು ವಾಸ್ತವ
ಸಹಜ ಇಚ್ಚೆ.
ದೂರದಲ್ಲೆಲ್ಲೋ ಕೇಳಿಸುವ
ಇನಿದನಿಗೆ ಅ೦ಗಳದ ಮಾಮರ
ಈ ಸಲವೂ ಚಿಗುರು ಹೊದ್ದುಕೊ೦ಡು
ಕಾಯುತ್ತಿದೆ.
ನಾವುಗಳೂ ಅಷ್ಟೇ..
ತುಟಿ ಮೇಲೆ ಜೇನ ಸವರಿಕೊ೦ಡು
ಹೊಸಿಲ ಸಾರಿಸಿ ರ೦ಗವಲ್ಲಿ ಹಾಕುತ್ತಿದ್ದೇವೆ.







Ishtondu kahi sariye? Life is still beautiful, with all its ups and downs, happiness & sorrow!
Smita paul,
Padya sogasagide.
Tanna bigi badhadinda tannolagina anubhava annu gattiyagi adu saride.
Vastava agi baduku kahi aagiye iddiruttade.Sihi lepana hacchi kagadada nage naguv sadhyategale hechchu..Abhinandane..
Nice Smitha.
good…..
koneya saalugalu meluku haakuvantive..smita..nice!
ನಿಮ್ಮ ಪದ್ಯ ಓದಿದ ಮೇಲೆ ನನ್ ಮನಸ್ಸು ಹೇಳ್ತು, ‘ನಾನೀಗ ಅಚ್ಚ ಮಲ್ಲಿಗೆ ಬಿಳಿ’ 🙂
sogasagi neyda kavite smithakka