ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಖಲೀಲ್ ಗಿಬ್ರಾನ್ ಕವಿತೆ ‘The Poet’

ಮೂಲ ಆಂಗ್ಲ ಲೇಖಕರು: ಖಲೀಲ್‌ ಗಿಬ್ರಾನ್

ಕನ್ನಡಕ್ಕೆಚೈತ್ರಾ ಶಿವಯೋಗಿಮಠ

ಕವಿ ಇವನು,

ಭೂತ – ಭವಿತವ್ಯದ
ನಡುವಿನ ಕೊಂಡಿ
ಜಗದ ಪ್ರತಿ ಚೈತನ್ಯವೂ
ತೃಷೆಯಾರಿಸಿಕೊಳ್ಳುವ
ಶುದ್ಧ ಚಿಲುಮೆ ಇವನು

ಕಪಿಲೆ ನೀರುಣಿಸಿ ಬೆಳೆಸಿ,
ಹಸಿದು ಹಂಬಲಿಸುವ ಮನಗಳಿಗೆ
ಫಲ ನೀಡುವ ತರು.
ದಣಿದ ಜೀವಗಳ ತಣಿಸುವ
ಮಧುರ ಗಾನದ ಹಾಡು ಹಕ್ಕಿ ಇವನು

ಮುಗಿಲ ಮೋರೆಯ ತುಂಬ
ಏರಿಳಿದು ಬೆಳೆದು ಕರಗಿ
ಭುವಿಯ ಬಾಳ, ಬೆಳಕಿಗೆ ಕಣ್ತೆರೆಸಿ
ಜೀವರಸವಾಗುವ ಬೆಳ್ಳಿಮೋಡ ಇವನು

ದೇವತೆಗಳೇ ಕಳುಹಿದ ದೇವದೂತ
ಕತ್ತಲು ನುಂಗಲಾರದ,
ಗಾಳಿಯು ನಂದಿಸಲಾಗದ,
ಪ್ರೇಮದೇವತೆಯು ತೈಲವೆರದು,
ಗಾನಗಂಧರ್ವರು ಮುಡಿಸಿದ
ಕಾಂತಿಯುತ ದೀಪ ಇವನು

ಸ್ಫೂರ್ತಿ ದೇವತೆಯ ಅವಗಾಹನೆಗಾಗಿ
ಸೃಷ್ಟಿಯ ಮಡಿಲೇರಿ,ನಿಶಬ್ಧ ನಿಶೆಯಲಿ
ಶಬ್ದಗಳಿಗಾಗಿ ಸದಾ ಜಾಗ್ರವಾಗುವ
ನಿಷ್ಕಪಟ, ನಿರಾಡಂಬರ ಏಕೈಕ ಜೀವ ಇವನು.

ನಲ್ಮೆಯ ತೋಟದಲಿ
ಭಾವಗಳ ಬೀಜ ಬಿತ್ತಿ
ಮಾನವ ಕೋಟಿಯನ್ನು ಪೊರೆಯಲು
ಪ್ರೀತಿಯ ರಾಶಿ ಮಾಡುವವನು

ಕಿರುನಗೆಯ ಹೊರತು
ಮತ್ತೇನೂ ಅಪೇಕ್ಷಿಸದವನು
ಆತ್ಮದ ಪೊರೆ ಕಳಚಿ, ಬಾಳ
ಬಾಂದಳದಿ ಪದಗಳ ಹರಹುವವನ
ಪ್ರಭೆಯಿಂದಲೆ ಹೊರಗುಳಿಯುವ ಲೋಕವು
ಇದ್ದಾಗ ಕಡೆಗಣಿಸಿ,ಎದ್ದು ಹೋದಾಗ ನೆನೆಯುವುದು

ಎಲ್ಲಿಯವರೆಗೆ ನಿಶ್ಚೇಷ್ಟರಾಗಿರುವಿರಿ?
ಎಲ್ಲಿಯವರೆಗೆ ಅವಕಾಶವಾದಿಗಳ ಸ್ತುತಿಸುವಿರಿ?
ಪ್ರೀತಿ, ಶಾಂತಿಯ ಸಂಕೇತವಾಗಿ ಒಳಗಣ್ಣ
ತೆರೆಸುವವನ ಎಲ್ಲಿಯವರೆಗೆ ಕಡೆಗಣಿಸುವಿರಿ?

ತನ್ನನ್ನೆ ಸುಟ್ಟು ಬೆಳಕ ಕೊಡುವ ಮೇಣದಂತೆ
ಅಂಧಕಾರವ ಕಳೆದು ಬೆಳಕಿನೆಡೆಗೆ ನಡೆಸುವವನ
ಮರೆತು ಎಲ್ಲಿಯವರೆಗೆ ಗತವ ವೈಭೀಕರಿಸುವಿರಿ?
ಎಲ್ಲಿಯವರೆಗೆ ಇರುವವರ ಬಿಟ್ಟು ಇರದವರ ನೆನೆಯುವಿರಿ?

ಹೇ ಕವಿ, ನೀ ಜೀವದ ಜೀವ
ನಿನ್ನ ಬೆಳಕ ಪ್ರಭೆಯು, ಬಿರುಸು-ಬಾಣಗಳಿಗು ಮಿಗಿಲು
ಮುಂದೊಂದು ದಿನ ಎಲ್ಲರ ಹೃದಯ
ಸಾಮ್ರಾಜ್ಯಗಳ ಕೊನೆಯಿರದ ದೊರೆ ನೀನೇ
ಹೇ ಕವಿ! ಮುಳ್ಳಿನ ಮುಕುಟದೊಳಗೂ
ಗೆಲುವಿನ ಹೂದಂಡೆಯೇ ನಿನಗೆ

The Poet

He is a link between this and the coming world.
He is
A pure spring from which all thirsty souls may drink.

He is a tree watered by the River of Beauty, bearing
Fruit which the hungry heart craves;
He is a nightingale, soothing the depressed
Spirit with his beautiful melodies;
He is a white cloud appearing over the horizon,
Ascending and growing until it fills the face of the sky.
Then it falls on the flows in the field of Life,
Opening their petals to admit the light.
He is an angel, send by the goddess to
Preach the Deity’s gospel;
He is a brilliant lamp, unconquered by darkness
And inextinguishable by the wind. It is filled with
Oil by Istar of Love, and lighted by Apollon of Music.

He is a solitary figure, robed in simplicity and
Kindness; He sits upon the lap of Nature to draw his
Inspiration, and stays up in the silence of the night,
Awaiting the descending of the spirit.

He is a sower who sows the seeds of his heart in the
Prairies of affection, and humanity reaps the
Harvest for her nourishment.

This is the poet — whom the people ignore in this life,
And who is recognized only when he bids the earthly
World farewell and returns to his arbor in heaven.

This is the poet — who asks naught of
Humanity but a smile.
This is the poet — whose spirit ascends and
Fills the firmament with beautiful sayings;
Yet the people deny themselves his radiance.

Until when shall the people remain asleep?
Until when shall they continue to glorify those
Who attain greatness by moments of advantage?
How long shall they ignore those who enable
Them to see the beauty of their spirit,
Symbol of peace and love?
Until when shall human beings honor the dead
And forget the living, who spend their lives
Encircled in misery, and who consume themselves
Like burning candles to illuminate the way
For the ignorant and lead them into the path of light?

Poet, you are the life of this life, and you have
Triumphed over the ages of despite their severity.

Poet, you will one day rule the hearts, and
Therefore, your kingdom has no ending.

Poet, examine your crown of thorns; you will
Find concealed in it a budding wreath of laurel.

Khalil Gibran

‍ಲೇಖಕರು Avadhi

28 October, 2020

4 Comments

  1. T S SHRAVANA KUMARI

    ಚಂದದ ಅನುವಾದ

  2. ಚೈತ್ರಾ ಶಿವಯೋಗಿಮಠ

    ಧನ್ಯವಾದಗಳು ಮ್ಯಾಮ್

  3. Prabhakar Nimbargi

    Did Khaleel Gibran write in English?

  4. Chaitra

    Yes sir he has written in English.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading