– ಡಾ ಶಿವಾನಂದ ಕುಬಸದ
ಕಷ್ಟವಾಗುತ್ತಿದೆ ಜಾತಿಗಳಿಲ್ಲದೆ ಬದುಕುವುದು
ಅಂದು ನೀ ಕಿತ್ತೆಸೆದ ಶಿವದಾರ ಜನಿವಾರಗಳನ್ನೆಲ್ಲ
ತಿರುಗಿ ಹುಡುಕಿ ಹೆಕ್ಕಿ ತಂದು ಜತನವಾಗಿಟ್ಟು
ಹಬ್ಬ ಹರಿದಿನಗಳಲ್ಲಿ ಸ್ವಚ್ಚಗೊಳಿಸಿ ತಿರು ತಿರುಗಿ
ನೋಡಿಕೊಳ್ಳುತ್ತೇವೆ ಭದ್ರವಾಗಿದೆಯೇ ಎಂದು
ಅಸ್ಮಿತೆ ಕಳೆದುಹೋಗುವ ಚಿಂತೆ ನಮಗೆ
ಹಲವು ಹನ್ನೆರಡು ಜಾತಿಗಳನ್ನು ಒಪ್ಪ ಓರಣಗೊಳಿಸಿ
ಮತ್ತೆ ಕೆಲವನ್ನು ಹೊಚ್ಚ ಹೊಸದಾಗಿ ಹುಟ್ಟಿಸಿ ಅವಕೆಲ್ಲ
ಅಂಕಿಗಳ ನೀಡಿ ಗಣತಿಯಲ್ಲಿನ ಸಂಖ್ಯೆಗಳನ್ನಾಗಿಸುತ್ತೇವೆ
ಅಂಕಿಗಳ ಅಂಕೆಯಲ್ಲಿ ತೆವಳುತ್ತ ಮೇಲು ಕೀಳಿನ ಆಟ
ಆಡುತ್ತಿದ್ದೇವೆ ಹೊಸತೆರದಿ ಮತ್ತೆ ಒಬ್ಬರಿನ್ನೊಬ್ಬರ ಪುಟಗಳಲಿ
ಇಣುಕುತ್ತ ನೀನಾರವ ನಾನಾರವ ಎಂದು ಹಾರತೊಡಗಿದ್ದೇವೆ

ನಿನ್ನೆಲ್ಲ ಶರಣರ ಜಾತಿಗಳ ಕೆದಕಿ ಹರಾಜು ಹಾಕಿ
ಒಂದೊಂದು ಜಾತಿಗೆ ಒಬ್ಬರಂತೆ ವಿಂಗಡಿಸಿ ಅವರನ್ನೆಲ್ಲ
ಮೊಳೆಹೊಡೆದು ಗೋಡೆಗೆ ನೇತಾಡಿಸಿ ವರ್ಷಕ್ಕೊಮ್ಮೆ
ಮೆರವಣಿಗೆ ಮಾಡಿ ಇವನು ನಮ್ಮವನು ಮಾತ್ರ ಎಂದು
ಘೋಷಣೆ ಕೂಗಿ ವಿರಮಿಸುತ್ತೇವೆ ನೆರೆಮನೆಯವನ
ನೆಟ್ಟನೆಯ ಗೆಳೆತನವನು ಗುಮಾನಿಯಿಂದ ನೋಡುತ್ತ
ತಲೆ ಎತ್ತಿನೋಡಿದರೆ ಟೊಪ್ಪಿಗೆ ಬೀಳುವಷ್ಟೆತ್ತರದ
ಮೂರ್ತಿಯನು ಮಾಡಿ ಕೈಯಲ್ಲೊಂದು ಖಡ್ಗವನಿತ್ತು
ತಲೆಗೊಂದು ಕಿರೀಟ ಮಂತ್ರಿ ಪೋಷಾಕಿನಲ್ಲಿ ಸಿಂಗರಿಸಿ
ಚೌಕಗಳಲ್ಲಿ ನಿಲ್ಲಿಸಿದ್ದೇವೆ ಸ್ಥಾವರಕ್ಕಳಿವೆಂದವನ ನೆನಪಿನಲ್ಲಿ
ನೀನಿತ್ತ ಲಿಂಗವನು ಕೆಂಪನೆಯ ಅರಿವೆಯಲಿ ಸುತ್ತಿ
ದೇವರ ಮನೆಯ ಗೂಟಕ್ಕೆ ಜೋತಾಡಿಸಿದ್ದೇವೆ
ಅದಕ್ಕೆ ಬಸವಣ್ಣ ಕ್ಷಮಿಸಿಬಿಡು ನಮ್ಮನು
ಹೇಗಿರುವೆವೋ ಹಾಗೆಯೇ ಇರಲು ಬಿಡು






This is the way Basavanna or for that matter any prophet, has been made irrelevant since long. I remember a lesson at my B.Sc.I in Hindi, ‘Paap ke char hathiyar’. Ignoring, suppressing, punishing and ultimately worshiping are the four evolutionary steps in making a Pravartaka (prophet) irrelevant to the present. We worship him and fail to follow his guidelines, saying that we are petty people and we can’t follow his guidelines. In simple words you have brought out well our hypocrisy.
Shivanna
Super analysis
Reality depicted in simple words
Really wears creating more castes n sub castes
V good poem
Reality pricks our conscience
Gd day
ನಿಮ್ಮ ಕವನ ತುಂಬಾ ಚನ್ನಾಗಿದೆ ಅಣ್ಣಾಜಿ,
ನೀರನು ಕಂಡು ಮುಳುಗುವರಯ್ಯಾ, ಮರವನು ಕಂಡು ಸುತ್ತುವರಯ್ಯಾ
ಬತ್ತುವ ಜಲವ ಒಣಗುವ ಮರವ ಮೆಚ್ಚಿದವರು ನಿಮ್ಮ ನೆತ್ತ ಬಲ್ಲರು
ಕೂಡಲಸಂಗಮ ದೇವಾ? ಎಂದು ಹೇಳಿದ ಬಸವಣ್ಣ ನವರನ್ನೇ ಮೂರ್ತಿ
ಮಾಡಿ ಪೂಜಿಸಿ, ಕಾಯಕ ಮಾಡಿ ಪುನೀತರಾಗುತ್ತಿದ್ದೇವೆ. ಅವರ ಆಚಾರ
ವಿಚಾರ ಗಳನ್ನು ಎಂದಿಗೂ ಅರ್ಥ ಮಾಡಿಕೊಳ್ಳುವುದಿಲ್ಲ….
ಹೆಣ್ಣು ಹೊನ್ನು ಮಣ್ಣು ಎಲ್ಲವೂ ಮಾಯೆ ಅಂದರು. ಎಲ್ಲಾ ಯುದ್ಧಗಳು ನಡೆದದ್ದೂ, ಮಾನವನಿರ್ಮಿತ ಅನರ್ಥ ಅನಾಹುತಗಳು ನಡೆದದ್ದು/ನಡೆಯುತ್ತಿರುವುದು ಈ ಮೂರು ಕಾರಣಗಳಿಂದಲೇ ಅನ್ನುತ್ತಾರೆ. ಒಪ್ಪಬೇಕಾದದ್ದೇ. ಎಲ್ಲರೂ ಇದನ್ನು ಒಪ್ಪುತ್ತಾರೆ ಕೂಡಾ…
ಪ್ರಸಕ್ತ ವಿದ್ಯಮಾನಗಳನ್ನು ಗಮನಿಸಿದರೆ ಮುಂದಿನ ಅನರ್ಥ ಅನಾಹುತಗಳಿಗೆ ಈ ಮೂರು ಕಾರಣಗಳಿಗೂ ಮಿಗಿಲಾಗಿ ‘ಜಾತಿ ಯಾ/ಮತ್ತು ಧರ್ಮ’ ಅನ್ನುವ ಕಾರಣ ಸೇರಿಕೊಳ್ಳಬಹುದು.
ಗಣತಿಯ ಹೆಸರಿನಲ್ಲಿ ಜಾತಿಗಳು ಮರಿಗಳನ್ನಿಡುತ್ತಿವೆ. ಹೊಸಹೊಸ ನಾಮಕರಣಗಳು ನಡೆಯುತ್ತಿವೆ.
ಇದು ಒಡೆದು ಆಳುವ ತಂತ್ರ ಅನ್ನುವ ಸಂಶಯವೂ ಬರುತ್ತಿದೆ…
ವರ್ಷಕ್ಕೊಮ್ಮೆ ಮಹಾಪುರುಷರುಗಳ ‘ಜಯಂತಿ’ಗಳನ್ನು ‘ವಿಜ್ರಂಭಣೆ’ ಯಿಂದ ಆಚರಿಸಿ ಅಲ್ಲೂ ಒಂದಿಷ್ಟು ರಾಜಕೀಯ ಮಾಡಿ ಒಬ್ಬರ ಮೇಲೆ ಇನ್ನೊಬ್ಬರು ಕೆಸರೆರಚಿ ಸುಖಿಸುತ್ತಿದ್ದೇವೆ, ನಾವು. ಇದ್ದದ್ದು ಸಾಕಾಗದೆಂಬಂತೆ ಒನ್ನೊಂದಷ್ಟು ‘ಜಯಂತಿ’ಗಳನ್ನು ಕಡತಗಳಿಂದ ಹೊರತೆಗೆದು ಆಚರಿಸಿ ಆಮೇಲೆ ಯಾರಿಗೂ ಅರಿಯದ ಅವರ ಮೂಲಗಳನ್ನು ಹುಡುಕುತ್ತಿದ್ದೇವೆ.
ಮೂರ್ತಿಪೂಜೆ ಬೇಡ; ಗುಡಿ ದೇಗುಲ ಬೇಡ ಎಂದವರ ದೊಡ್ಡ ದೊಡ್ಡ ಮೂರ್ತಿಗಳನ್ನು ಅಲ್ಲಿ ಇಲ್ಲಿ ವೃತ್ತಗಳಲ್ಲಿ ನಿಲ್ಲಿಸಿ ಅದ್ಧೂರಿಯಿಂದ ‘ಮಾನ್ಯ ರಾಜಕಾರಿಣಿ’ಗಳಿಂದ ‘ ಅನಾವರಣಗೊಳಿಸಿ ಅದಕ್ಕೊಂದು ಪೂಜೆ ಮಾಡಿ ಅವರದೇ ವಚನಗಳ/ಸಂದೇಶಗಳ ಧ್ವನಿಮುದ್ರಿಕೆಗಳನ್ನು ಹಾಕಿ ಒಂದಿಷ್ಟು ಶಬ್ದಮಾಲಿನ್ಯ ಮಾಡಿ, ವಾಹನ ಸಂಚಾರಗಳಿಗೆ ಅಡೆತಡೆ ಉಂಟುಮಾಡಿ ಅವರ ಸಂದೇಶಗಳನ್ನು ಗಾಳಿಗೆ ತೂರುತ್ತಿರುವ ನಾವು ಬದಲಾಗುವುದು ಯಾವಾಗ???
ತುಂಬಾ ಚೆನ್ನಾಗಿ ಬರೆದಿದ್ದೀರಿ… ಅರ್ಥಮಾಡಿಕೊಳ್ಳುವವರು ಬೇಕು… ಅಷ್ಟೇ…
Superb!
chintanege haccuva kavana nice..sir
superb sir
Very well written and thought provoking.
congratulations for such a nice publications
Bhalla chennagede
very good collection..chennagide
Its 100% fact sir