ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್ ಆಯ್ತು ಕವಿತೆ: ಇಗೋ ಇರು ನಾ ಬಂದೆ..

geetha hegde kalmaneಗೀತಾ ಹೆಗ್ಡೆ

ಕಗ್ಗತ್ತಲೆಯ ಗವಿಯಂತಿದೆ
ನೀ ಅಡಗಿದ ತಾಣ
ಅದಾವ ಗಳಿಗೆಯಲಿ
ಅದುಮಿ ಹಿಡಿದಿರುವೆ
she in nestಅಂಗೈಯ್ಯ ಬೆರಳುಗಳ
ಬಿಗಿತ ಜೋರಾಗೆ ಇದೆ
ನೋಡು ನಾ ಬಂದು
ಬಿಡಿಸಿ ಎದೆಗವಚಿಕೊಳ್ಳಲೆ!
ಮುತ್ತಿನ ಮಳೆಗರೆದು
ಒಮ್ಮೆ ಸಂತೈಸಲೆ
ಏನಾಗಿದೆ ನಿನಗೆ
ಯಾರು ನೀನು?

ಅದಾವ ಕಿರಾತ
ಬೆನ್ನಟ್ಟಿದ್ದ ಹೇಳು
ಅಥವಾ ಒಳಗಡೆ ಸೇರಿ
ನಿನ್ನ ಎಳೆದಾಡುತಿರಬಹುದೆ?
ಕಣ್ಣು ಕಿರಿದಾದಷ್ಟೂ
ಬರಿ ಕಪ್ಪು ಕತ್ತಲು
ಬಾವಲಿಗಳದೆಷ್ಟು ಇವೆಯೊ ಏನೊ!
ಕೈಗೆ ಸಿಗಬೇಕು ನನಗೆ
ಕಿಚಾಯಿಸಿಬಿಡುವಷ್ಟು
ಕೋಪ ನಖಶಿಕಾಂತ
ನೀ ಹೆದರಬೇಡ ಮಗಳೆ
ಇಗೋ ಇರು ನಾ ಬಂದೆ

‍ಲೇಖಕರು Admin

7 October, 2016

0 Comments

Trackbacks/Pingbacks

  1. ಕ್ಲಿಕ್ ಆಯ್ತು ಕವಿತೆ: ಇಗೋ ಇರು ನಾ ಬಂದೆ.. | | Sandhyadeepa…. - […] http://avadhimag.online/2016/10/07/%e0%b2%95%e0%b3%8d%e0%b2%b2%e0%b2%bf%e0%b2%95%e0%b3%8d-%e0%b2%86%e0%… […]
  2. ಕ್ಲಿಕ್ ಆಯ್ತು ಕವಿತೆ: ಇಗೋ ಇರು ನಾ ಬಂದೆ.. | – Sandhyadeepa…. - […] http://avadhimag.online/2016/10/07/%e0%b2%95%e0%b3%8d%e0%b2%b2%e0%b2%bf%e0%b2%95%e0%b3%8d-%e0%b2%86%e0%… […]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading