ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಶಬ್ಧಚಿತ್ರಕ್ಕೆ ಮಹತ್ವ.
ಚಿತ್ರದಲ್ಲಿಯೇ ಶಬ್ದದ ಅರ್ಥ ಬರುವ ಹಾಗೆ ಅಥವಾ ಶಬ್ದದಲ್ಲಿಯೇ ಅದರ ಚಿತ್ರ ಮೂಡುವ ಹಾಗೆ ಮಾಡುವ ಕಲೆ- ಕ್ಯಾಲಿಗ್ರಾಂ.
ಇಂಗ್ಲಿಷ್ ಭಾಷೆಯಲ್ಲಿ ಜಗತ್ತಿನಾದ್ಯಂತ ಜನಪ್ರಿಯ.
ಆದರೆ ಕನ್ನಡದಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪ.
ಈ ಕೆಲವು ವಾರಗಳಿಂದ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಕ್ಯಾಲಿಗ್ರಾಂ ಪದೇ ಪದೇ ಸದ್ದು ಮಾಡಿದೆ. ಇದಕ್ಕೆ ಕಾರಣ ಶಾಶ್ವತ್ ಹೆಗ್ಡೆ ತ್ಯಾಗ್ಲಿ.
ಕನ್ನಡದಲ್ಲಿಯೂ ಕ್ಯಾಲಿಗ್ರಾಂ ಮಾಡಬಹುದು ಎಂದು ತೋರಿಸಿದ ಇವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಸದ್ಯ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸಮಾಡುತ್ತಿದ್ದಾರೆ.
‘ಅವಧಿ’ ನಡೆಸಿದ ಫಟಾ ಫಟ್ ಸಂದರ್ಶನ ಇಲ್ಲಿದೆ.
ಅಕ್ಷರಗಳಿಗೆ ರೂಪ ಕೊಡುವ ಕಾರ್ಯವನ್ನ ಯಾವಾಗಿಂದ ಶುರು ಹಚ್ಕೊಂಡ್ರಿ ?
ತಿಂಗಳ ಹಿಂದೆ ಅಷ್ಟೆ.
ತ್ಯಾಗ್ಲಿ ಅಂದ್ರೆ ತ್ಯಾಗಿ ಅಂತಾನಾ ?
ಅದು ಊರ ಹೆಸರು.
ಕವನ ಬರಿತೀರಿ, ಫೋಟೋ ತೆಗೀತೀರಿ, ಅಕ್ಷರಗಳಿಗೆ ರೂಪ ಕೊಡ್ತಿರಿ. ಇನ್ನೇನ್ ಮಾಡ್ತೀರಿ ?
ಯಕ್ಷಗಾನ, ನಾಟಕ, ಚಿತ್ರಕಲೆ, ಗ್ರಾಫಿಕ್ಸ್ ಡಿಜೈನ್ಸ್ ಮಾಡ್ತೀನಿ.
ವಾಯ್ಸ್ ಡಬ್ಬಿಂಗ್ ಮೇಲೆ ಒಲವು ಹುಟ್ಟಿದ್ದು ಯಾವಾಗ ?
ಬಾಲ್ಯದಲ್ಲಿಯೇ. ನಾಟಕ ಪ್ರವೇಶ ಮಾಡಿದಾಗಿನಿಂದ ವಾಯ್ಸ್ ಡಬ್ಬಿಂಗ್ ಮೇಲೆ ಆಸಕ್ತಿ ಇತ್ತು.
ಮುಂದಿನ ಹೆಜ್ಜೆ ಯಾವುದರ ಕಡೆಗೆ ?
ಗ್ರಾಫಿಕ್ ಡಿಜೈನ್ ನಲ್ಲಿ ಹೊಸದೇನಾದರು ಮಾಡಬೇಕು.
Very creative! You should get more recognition.