ಹದವಾಗಿ ಬೆರೆಸಿಟ್ಟ
ಬಣ್ಣದಲ್ಲದ್ದಿದ್ದೇ
ಕುಂಚದ ಕೂದಲ
ಪ್ರತಿ ಸಿಗುರಲ್ಲೂ
ಗುಳುಗುಳು ರೋಮಾಂಚನ
ಕ್ಯಾನವಾಸಿನ ಮೈ ತುಂಬಾ
ಸುಳಿಸುಳಿ ಗೆರೆಗಳು
ಎಳೆದಂತೆ ಬೆಳೆಯುತ್ತ
ತಿಳಿವಿನೊಳ ತಿರುವುಗಳು
ಆಲಿಂಗನದಾಪ್ತ ಸ್ಪರ್ಶಕೆ
ಉದ್ವಿಗ್ನದುರಿ ಹೊತ್ತಿ
ತುಟಿಯಂಚಿನ ಸಿಹಿ ಒದ್ದೆ
ಮುದ್ರೆಯೊತ್ತುತ್ತ
ಧಗಧಗ ರೇಖೆಗಳು
ಕಣ್ಣೊಳಗಿನ ಅಮೂರ್ತ
ಕಿರಣಗಳು ಸೃಜಿಸಿದ
ಅಗೋಚರ ರೇಖೆಗಳು
ಕ್ಷಿತಿಜದಂಚುಗಳ
ಸವರಿ ಗೆರೆಗೆರೆ
ರೂಪುಗೊಳ್ಳುತ್ತ ಅರೆಬರೆ
ಬೆಳಕು ಬಣ್ಣವಾಗುವ
ಬಣ್ಣ ಬೆಳಕಾಗುವ ಚಿತ್ರ
]]>
0 Comments