ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೋವಿ ನುಂಗಿದ ರಕ್ತ ನನ್ನ ಕವಿತೆ

ನನ್ನ ಕವಿತೆ

– ಗುರುನಾಥ ಬೋರಗಿ

ಕ್ಷಮಿಸಿ,ನನ್ನ ಕವಿತೆ

ನಿಮ್ಮ ಕವಿತೆಯಂತಲ್ಲ

ಉಳ್ಳವರ ತುಳಿತಕ್ಕೆ

ಮೈ-ಮನಸು ಹ(ಹು)ಣ್ಣಾಗಿ

ನೆಲಕಿಳಿದ ಕಣ್ಣೀರು ನನ್ನ ಕವಿತೆ

ಹೊರೆ-ಬದುಕು ಭಾರಕ್ಕೆ

ಬರಿ ಹೊಟ್ಟೆ ಬೆನ್ನಾಗಿ

ಬಸವಳಿದ ಬಿಸಿಯುಸಿರು ನನ್ನ ಕವಿತೆ

ಹಿಡಿ ಅನ್ನ ಸಂಬಳಕೆ

ದುಡಿ-ದುಡಿದು ಕರಕಾದ

ಕಾರ್ಖಾನೆಯ ಕಪ್ಪುಹೊಗೆ ನನ್ನ ಕವಿತೆ

ಧನಿಕರ ಮೈತೃಷೆಗೆ

ಹಸಿಮಾಂಸ ಹೊ(ನ)ರಳಾಡಿ

ತಿಪ್ಪೆ ಸೇರಿದ ಭ್ರೂಣ ನನ್ನ ಕವಿತೆ

ಸಮಬಾಳು ಸಮಪಾಲು

ಹಕ್ಕುಗಳಿಗೆ ದನಿಯೆತ್ತಿ

ಕೋವಿ ನುಂಗಿದ ರಕ್ತ ನನ್ನ ಕವಿತೆ

‍ಲೇಖಕರು G

11 November, 2012

2 Comments

  1. Gopaal Wajapeyi

    ಮನಸ ಭಾರವಾಗಿಸಿತು ನಿಮ್ಮ ಕವಿತೆ…

  2. D.RaviVarma

    ಧನಿಕರ ಮೈತೃಷೆಗೆ
    ಹಸಿಮಾಂಸ ಹೊ(ನ)ರಳಾಡಿ
    ತಿಪ್ಪೆ ಸೇರಿದ ಭ್ರೂಣ ನನ್ನ ಕವಿತೆ
    ಸಮಬಾಳು ಸಮಪಾಲು
    ಹಕ್ಕುಗಳಿಗೆ ದನಿಯೆತ್ತಿ
    ಕೋವಿ ನುಂಗಿದ ರಕ್ತ ನನ್ನ ಕವಿತೆ……….

    excellent….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading