ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೋಳಿ ಕೂಗದ ಬೆಳಗು…

ಅಜಿತ್ ಹರೀಶಿ

ಎಷ್ಟು ಬೇಕಾದರೂ
ಕಾಲು ಚಾಚುವಷ್ಟು
ಉದ್ದದ ಹಾಸಿಗೆ ಕೊಂಡುತಂದೆ
ಆ ಅಂಗಡಿಯವನಿಗೆ
ಅರ್ಧದಷ್ಟು ಹಣ ಮಾತ್ರ
ಪಾವತಿಸುವುದು ಬಾಕಿಯಿದೆ

ತೀರದ ಹಂಬಲದಿಂದ
ಏರಿದೆ ದೂರದ ಬೆಟ್ಟವ
ಇರಿಯುವ ಕಲ್ಲು ಮುಳ್ಳುಗಳ
ನುಣ್ಣ ತೋರಿಸಿದ
ಕಣ್ಣ ಕಾಣ್ಕೆ ಎರಡೂ

ಸಮುದ್ರಕ್ಕೆ ಇಳಿದೆ
ಮೊಣಕಾಲು ಮಟ್ಟದ
ನೀರಿಗಿಂತ
ಮುಂದೆ ಹೋಗಲು
ಆತ್ಮಸಾಕ್ಷಿ
ಮಾಡಿಕೊಡಲಿಲ್ಲ ಅನುವು

ಸಾವು ಬದುಕಿನ ನಡುವೆ
ಹೋರಾಡುತ್ತಿದ್ದವನ
ಜೊತೆ ಹೋದವನಿಗೆ
ಬಾಡಿಗೆ ವಾಹನ
ಚಾಲಕನ ಜೊತೆಗಿನ
ಗುದ್ದಾಟ ಚಿಲ್ಲರೆಯದು

‍ಲೇಖಕರು Admin

8 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading