ಹಿರಿಯ ಸಾಹಿತಿ, ಸಾಮಾಜಿಕ ಹೋರಾಟಗಾರರಾದ ಕೋಟಿಗಾನಹಳ್ಳಿ ರಾಮಯ್ಯನವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
‘ಆದಿಮ’ದ ಬಳಿಯ ರಾಮಯ್ಯನವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ
-ಶಿವಪ್ರಸಾದ್
**
ಕೋಲಾರದ ಸಾಂಸ್ಕೃತಿಕ ಅಸ್ಮಿತೆ ಶ್ರೀ ಕೋಟಿಗಾನಹಳ್ಳಿ ರಾಮಯ್ಯ ಅವರಿಗೆ ಯಾವುದೆ ತೊಂದರೆ ಇಲ್ಲದೆ ಆರೋಗ್ಯವಾಗಿದ್ದಾರೆ.ಅವರ #ಕಣ್ಣಿಗೂ ಏನೂ ತೊಂದರೆ ಆಗಿಲ್ಲ.ರಾಮಯ್ಯ ಅವರ ಮೇಲೆ ನಡೆದ ಹಲ್ಲೆಗೆ ಸಂಬಂದಿಸಿ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ ಅವರ ನೇತೃತ್ವದಲ್ಲಿ ಮೂವ್ವರನ್ನು ಬಂದಿಸಿ ಕ್ರಮ ಕೈಗೊಂಡು,ರಾಮಯ್ಯ ಅವರ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ.
ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ.
-ಪಿಚ್ಚಳ್ಳಿಶ್ರೀನಿವಾಸ್
**
ಬುಡ್ಡಿ ದೀಪದ ಬೆಳಕೇ ನಿಮ್ಮೊಂದಿಗೆ ನಾವಿದ್ದೇವೆ..
ರಾಮಯ್ಯ ಮಂಡ್ಯದಲ್ಲಿ ನೆಲೆ ಊರುತ್ತೇನೆ ಎಂದಾಗ ಕೊಂಚ ಗಲಿಬಿಲಿಯಾದವರಲ್ಲಿ ನಾನೂ ಒಬ್ಬ. ಹೊಸ ಜಾಗ, ಹೊಸ ಜನ, ರಾಮಯ್ಯನವರನ್ನು ಅರ್ಥ ಮಾಡಿಕೊಳ್ಳುತ್ತಾರಾ.. ಸಂಘರ್ಷಕ್ಕೆ ದಾರಿಯಾಗುತ್ತದಾ… ಹೀಗೆ ಅನೇಕ ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಂಡು ಏನೇನೋ ಕಲ್ಪಿಸಿಕೊಂಡು ಆತಂಕದಲ್ಲಿದ್ದೆವು…
ಇದೀಗ ರಾಮಯ್ಯನವರ ಮೇಲೆ ತಾಯ್ನೆಲದಲ್ಲೇ ಹಲ್ಲೆಯಾಗಿದೆ. ತೇರಳ್ಳಿ ಬೆಟ್ಟವನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ಕಟ್ಟಿ ವಿಶೇಷವಾಗಿ ಮಕ್ಕಳ ಬೆಳವಣಿಗೆ-ಚಿಂತನೆಯನ್ನು ರೂಪಿಸುವಲ್ಲಿ ಶ್ರಮಿಸಿದ ಇವರನ್ನು ಸ್ಥಳೀಯರೂ ಅರ್ಥ ಮಾಡಿಕೊಳ್ಳಲಿಲ್ಲವೇ..!?
“ನಮಗೆ ಟೈಂ ಇಲ್ಲಾ.., ಕಟ್ಟಬೇಕಾಗಿದೆ… ಮಕ್ಕಳಿಗಾಗಿ ಟೆಕ್ಸ್ಟ್ ಗಳು ಬೇಕಿದೆ… ಮೀರ್ ರಾಂಡಾ ಚಾಲಾ ಮಾಟ್ಲಾಡೇದುಂದೀ…ಆ ವೆಂಕಟೇಶ್ ಪಿಲಿಸ್ಕೊನಿ ವಚ್ಚೇಯ್ಯಂಡಾ… “ ರಾಮಣ್ಣನವರಿಗೆ ಯಾವಾಗ ಫೋನ್ ಮಾಡಿದರೂ ಇಷ್ಟೇ ಅರ್ಜೆನ್ಸಿಯಲ್ಲಿ ಹೊಸದೇನೋ ಕಟ್ಟುವ ಮಾತುಗಳನ್ನೇ ಆಡುವುದು. ಇಂದು ಅವರ ಮೇಲೆ ಹಲ್ಲೆ ಆಗಿರುವ ಸುದ್ಧಿ ಕೇಳಿ ಆತಂಕವಾಯಿತು. ಕ್ಷಣ ಕಾಲಾ ಸಾವರಿಸಿಕೊಂಡ ನಂತರ ಒಂದೆರಡು ಸಾಲುಗಳು…
ಹಕ್ಕಿಯಂತೆ ಹಾರಿ ಹಾರಿ
ಹಾಡು ಕಟ್ಟಿ- ಆಟ ಕಟ್ಟಿ
ಗರಿಕೆ-ಕಡ್ಡಿ ಹೊತ್ತು ತಂದು
ಗುಡ್ಡದಲ್ಲಿ ಗೂಡು ಕಟ್ಟಿ
ಜನರ ಮನದಿ ನೆಲೆಯು ಊರಿ
ಎಷ್ಟು ದೂರ ನಡೆದಿರಿ ರಾಮಯ್ಯ
ಕತ್ತಲಿದ್ದ ಕಡೆಗೆ ಎಲ್ಲಾ
ಬುಡ್ಡಿ ದೀಪ ಹಚ್ಚಿ ಹಿಡಿದು
ಬೆಳಕು ಕೊಡುತಾ ನಡೆದು ನಡೆದು
ಜಲದೇವಿಯ ಕಣ್ಣುತೆರೆಸಿ
ಮೊಳೆವ ಕನಸಿಗೆ ನೀರು ಎರೆದು
ಎಷ್ಟು ದೂರ ನಡೆದಿರಿ ರಾಮಯ್ಯ
(ಮತ್ತೆಂದಾದರೂ ಮುಂದುವರೆಸುವೆ.. ರಾಮಣ್ಣನ ಮೇಲಿನ ಹಲ್ಲೆ ಸಹಿಸಲಾಗುತ್ತಿಲ್ಲ)
-ನಾಗೇಶ್ ಕಾಳೇನಹಳ್ಳಿ


0 Comments