ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೋಗಿಲೆಗಳು ಹಾಡುತ್ತಿಲ್ಲ ಏನೋ ಕೆಟ್ಟ ಮರೆವು ಅವುಗಳಿಗೆ..

ಎಲ್ಲಾ ದಿನಗಳೂ ಹಾಗೇ ಇವೆ!

ಶ್ರೀವಿಭಾವನ

1
ಕ್ಯಾಲೆಂಡರ್‍ನಲ್ಲಿ ಹಾಕಿದ್ದ ಪೆನ್ಸಿಲ್ ಗುರುತು
ನೆನಪಿಸಿತು. ನಿನ್ನೆ ವಸಂತ ಋತುವಿನ ಮೊದಲ ದಿನ
ಹುಡುಕುತ್ತಿದ್ದೇನೆ ನನ್ನೊಳಗೆ
ಮೊನ್ನೆಯಿಂದ ನಿನ್ನೆಗೆ, ನಿನ್ನೆಯಿಂದ
ಇಂದಿಗೆ ಏನಾಗಿದೆ ಎಂದು
ಹಾಗೇ ಇದ್ದೇನೆ; ಎಲ್ಲವೂ ಹಾಗೇ ಇವೆ
2

ಮನೆಯ ಎದುರಿನ ಮಾವಿನ ಮರ
ಹೂ ಬಿಟ್ಟಿಲ್ಲ; ಚಿಗುರಿದ ಎಲೆಗಳೆಲ್ಲವೂ
ಧೂಳಿನಲ್ಲಿ ಮುಚ್ಚಿವೆ.
ಕೋಗಿಲೆಗಳು ಹಾಡುತ್ತಿಲ್ಲ
ಏನೋ ಕೆಟ್ಟ ಮರೆವು ಅವುಗಳಿಗೆ.
ಋತುಗಳ ನೆನಪು ಮಾಸಿದೆಯಂತೆ.
3

ಹೊಲ ಗದ್ದೆ, ಕೊಟ್ಟಿಗೆ, ಕೊನೆಗೆ
ದಟ್ಟ ಕಾಡಿನ ಮಧ್ಯೆ
ವಸಂತ ರಾಜನ ಆಗಮನದ ಸುಳಿವಿಲ್ಲ
ಏನೋ ಒಂದು ಸಂಕಟದ ಮೌನ!
ನೀರಿಲ್ಲದೆ ಒಣಗಿದ ಮಣ್ಣಲ್ಲಿ
ಬರೀ ಸೂತಕಗಳ ಮೆರವಣಿಗೆ.

4

ಹಳೆ ಪುಸ್ತಕಗಳ ಧೂಳು ಕೊಡವಿಟ್ಟಿದ್ದೇನೆ
ಅನುಭವಿಸಲಾಗದ ಸಂಗತಿಗಳನ್ನು
ಊಹಿಸೋಣವೆಂದು, ನನ್ನೊಳಗೇ ಒಬ್ಬ
ವಸಂತನನ್ನು ಎದುರುನೋಡುತ್ತಾ.
ಛಂದದ ಒಂದು ದಿನಕ್ಕಾಗಿ
ಆದರೆ ಮುಳುಗೇಳುವ ಸೂರ್ಯ ಬದಲಾಗುತ್ತಿಲ್ಲ.

‍ಲೇಖಕರು admin

16 April, 2017

2 Comments

  1. nutana Shyam

    kogilegalige marevu…sankatavoo chennagide..

    nutan shyam

  2. DEVARAJL

    ನಿಮ್ಮ ಕವಿತೆ ಇದೇ ಮೊದಲ ಬಾರಿಗೆ ನಾನು ಓದುತ್ತಿದ್ದೇನೆ. ತುಂಬಾ ಚೆನ್ನಾಗಿದೆ. ವಾಸ್ತಂಶಕ್ಕೆ ಹತ್ತಿರವಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading