ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೊಳಲನ್ನು ನಿಲ್ಲಿಸಿ ಕಟಕಟೆಯಲ್ಲಿ

sandhyarani

 

 

 

 

 

 

 

ಸಂಧ್ಯಾರಾಣಿ 

ಯಾರಲ್ಲಿ, ಹಿಡಿದು ತನ್ನಿ ಕೊಳಲನ್ನು
ನಿಲ್ಲಿಸಿ ಕಟಕಟೆಯಲ್ಲಿ

ಬೊಗಸೆಗೆ ಬಿದ್ದ, ಖಾಲಿ ಉಸಿರ ಎದೆಗೆ ಬಿತ್ತಿ
ಮೊಳಕೆಯೊಡಿಸಿ, ಒಡಲ ಅಸುವುಣ್ಣಿಸಿ
ಕಣ್ಣು, ಕೈ ಬೆರಳು ಮೂಡಿಸಿ, ರಾಗಗಳ ಹೆತ್ತು ಕೊಡುವ
ಉದ್ಧಟತನ ಕೊಳಲಿಗೆ ಕಲಿಸಿದ್ದ್ಯಾರು?

music1

 

 

 

 

 

 

 

 

 

 

 

 

 

 

 

 

 

ಲಿಪಿಯೇ ಇಲ್ಲದ ಕಣ್ಣುಗಳ ಭಾಷೆ
ಮಾತುಗಳ ಪೇಟೆಯಲಿ ನಡೆಯದ ನಾಣ್ಯ
ಹೆತ್ತ ರಾಗಗಳ ಎತ್ತಿ ಹಿಡಿದೆ ನಿನ್ನೆದಿರು,
ನನ್ನ ತುಟಿಯಲ್ಲಿದ್ದದ್ದು ಖಾಲಿ ಉಸಿರು
ಹೇಳು ಈ ಹಾಡು ಯಾರದೆಂದರೆ ಏನೆನ್ನಲಿ
ನಾನು ಶಕುಂತಲೆಯ ಊರವಳು.
ಮೌನದಲ್ಲಿ ಪಡೆದವನನ್ನು ಮಾತಿನಲ್ಲಿ ಕಳೆದುಕೊಂಡವಳು

ಯಾರಲ್ಲಿ, ಕರೆತನ್ನಿ ಕೊಳಲನ್ನು ಕಟಕಟೆಗೆ..
ಒಂದು, ಒಂದು ಕೂಡಿದರೆ ಎರಡೇ ಆಗಬೇಕು
ಬೆಳಕನ್ನು ಪಡೆದು ಕಾಮನಬಿಲ್ಲನ್ನು ಹಡೆದ
ಕೊಳಲ ಕೊರಳಿಗೆ ಮೌನದ ಗಂಟೆ ಕಟ್ಟಬೇಕಿದೆ

music2

‍ಲೇಖಕರು admin

13 October, 2015

6 Comments

  1. narayan Raichur

    thumbaa chennaagi moodi bandide ; lipiye illada kannugala bhashe -maatugala peteyali nadeyada naanya ! ! – Good !!

    Narayan Raichur

  2. Ravi

    Super… ಶಬ್ದಗಳೆ ಮೌನವಾಗಿ ನಾವೇ ಕಟಕಟೆಯಲಿ ನಿಂತ ಹಾಗೆ…!

  3. smitha

    ಚೆಂದದ ಕವಿತೆ……..

  4. Bharathi b v

    On of your best sandhya

  5. Jayashree

    Beautiful!

  6. ಅಕ್ಕಿಮಂಗಲ ಮಂಜುನಾಥ

    ಚೆನ್ನಾಗಿದೆ , ಪದ್ಯ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading