ಮುಕ್ಕಣ್ಣನ ಪರಾಕ್ರಮ

ಬಿದಲೋಟಿ ರಂಗನಾಥ್
ಕೊರಳಲ್ಲಿ ನಾಗರ
ಕೈಯಲ್ಲಿ ಎಚ್ಚರಿಸುವ ಢಮರುಗ
ತ್ರಿಶೂಲಕೆ ಭೂತನಾಥನ ಕೈ ಸ್ಪರ್ಶ
ಆದರೂ ದೇಶ ಎಚ್ಚೆತ್ತುಕೊಳ್ಳಲಿಲ್ಲ
ಭ್ರಷ್ಟಾಚಾರ ಅಳಿಯಲಿಲ್ಲ
ಕೊಲೆ ಸೂಲಿಗೆ ನಿಲ್ಲುತ್ತಿಲ್ಲ
ಆತ್ಯಾಚಾರ ಕೊನೆಗೊಳ್ಳಲಿಲ್ಲ.
ಬೂದಿಬುಕ್ಕಣ್ಣನ ಮೂರು ಕಣ್ಣು
ಹಣೆಯಲ್ಲಿ ಮೂರುಗೆರೆಯ ವಿಭೂತಿ
ಹುಲಿ ಚರ್ಮ ಸೊಂಟದಲ್ಲಿ
ಲೆಕ್ಕವಿಲ್ಲದ್ದಷ್ಟು ಶಿವಶರಣರ ಗುಂಪು
ಶಿವನ ಸ್ತೋತ್ರ ಮಾಡಲು.
ಸತ್ಯ ಅಹಿಂಸೆ ಅಳಿಯಲೆಂದು ಸಾರಲು
ಇವನು ಅರೆ ಬೆತ್ತಲು
ಇವರು ಕೆಂಪು ವಸ್ತ್ರಧಾರುಣರು
ಶಿವರಾತ್ರಿ ಬಂದೈತಿ
ಶಿವನ ಜೋಳಿಗೆ ಮುಂಗಾಲಿಡುತ್ತಿದೆ
ಗುರುತಚ್ಚಲು ಬಡವ ಬಲ್ಲಿದನ
ಭಿಕ್ಷಾಟನೆಯ ರೂಪದಲಿ.
ಅವರ ಮನೆ ಮುಂದಕೆ ಪಾದಾರ್ಪಣೆ
ಲಯಕರ್ತನಿಗು ಜಾತಿ ಲೇಬಲ್.!
ಆದರೆ , ನೋಡಿರಣ್ಣ
ಇವನು ಎಲ್ಲಾ ಜಾತಿಯ ದೈವ.
ಬ್ರಹ್ಮನಿಗೆ ಪೂಜೆಯಿಲ್ಲ
ವಿಷ್ಣುವಿಗೆ ಇನ್ನೊಂದು ಜಾತಿಯ
ಕೈಯಲ್ಲಿ ಪೂಜೆ,ಆರಾಧಕರ ಗುಂಪು
ಇವರು ಅಣ್ಣ ತಮ್ಮಂದಿರಂತೆ.!
ಶಿವನಿಗೆ ಹಲವಾರು ಹೆಸರು
ಇವತ್ತು ಮನುಷ್ಯ, ರವಿ, ಸೈಕೋ ರವಿ
ಚೂರಿ ಮುತ್ತ ಮಚ್ಚ್ ಮಂಜ.!!
ಶಿವನ ತಲೆಯಲಿ ಅರ್ಧಚಂದ್ರನ ಮೇಲೆ
ಗೌರಿಯ ತಾವು
ಪಕ್ಕದಲಿ ಪಾರ್ವತಿ
ಇವತ್ತು ಗಂಡಸ್ಸಿಗು ಅಲ್ಲೊಬ್ಬಳು ಪರಸ್ತ್ರಿ
ಬೇರೊಬ್ಬ ಗಂಡಸ್ಸಿನ ಬಿಸಿ ಉಸಿರ ಕಾವು.
ಹೇಗಿದೆ ನೋಡಿ ದೇಶ
ಹಾಳದದ್ದು ಯಾರಿಂದ..?
ಯಾರದು ತಪ್ಪು..?





0 Comments