ಊರು.. ಊರಿನ ಕಥೆ
ಹರವು ಸ್ಫೂರ್ತಿಗೌಡ
ಮನೆಮಗ ಊರು ಬುಟ್ಟ
ಊರ ಕಾಡು ಚಲಿಸತ್ತಾವೊ
ಊರು ಮುಂದಕ್ಕೆ ಬೆಳಿತಾವೊ
ದಿನಾ ತೂರಾಡ್ತಿದ್ದ ಬೀದಿ ಟಾರಾಗವೇ
ಕೊಟ್ಟಿಗೆಯಲ್ಲಿಟ್ಟ ನೇಗಿಲು
ಇಟ್ಟಂಗೆ ಇಟ್ಟಲೇ ಮಣ್ಣಹಿಡಿತೋ
ಗದ್ದೆ ಶೀತ ಹಿಡಿಸಿದ್ದ ಕಾವೇರಿ
ಹರೀತ ಉರುಳ್ತ ಕಾಣದ್ದಂಗದ್ಲು
ಪಲ್ಲಗಟ್ಟಲೆ ಹಾಲುಕಟ್ಟುತ್ತಿದ ಭತ್ತ
ಒಣ್ಣಗಿದ್ದ ಪೈರಾಗಿ ಜೊಳ್ಳು ಉದುರಿದೊ
ಕೇರಿಗೆಲ್ಲ ವರ್ತನೆಯಾಗಿದ್ದ ಗೌರಿ ಹಾಲು
ಸೊರಿಕಂಡಿ, ಸುಂಡೊಗವ್ಳೆ..
ಊರೆಲ್ಲಾ ಹೂ ಅರಳಿದಾಗ
ಕನ್ನಾಂಬಾಡಿ ಹಬ್ಬ ಕಟ್ಟೋರು
ಹೂ ಅರಳಿಲ್ಲ, ಜಾತ್ರೆ ಕಟ್ಟಲ್ಲಿಲಾ
ಹಬ್ಬ ಮಾಡಕೆ ಮನೆಲಿ ಮಕ್ಕಳಿಲ್ಲ
ಊರು ತುಂಬಾ ಮುದುಕ್ರು
ಗಂಡ ಸತ್ತ ಮುಂಡೆರು
ಬೀದಿಲಿ ಮಣ್ಣೂಕಳೋ ಮಕ್ಕಳು
ಹರಳಿಕಟ್ಟೆ ಸುತ್ತೊ ಹೆಣ್ಣಮಕ್ಕಳಿಲ್ಲ
ಕಬ್ಬಿನ ಗಾಡಿ ಹೊಡಿತ್ತಿದ್ದ ಗಂಡು ಮಕ್ಕಳಿಲ್ಲ
ಒಂದು ಕೇಳಿದರೆ ನೂರು ಹೇಳ್ತಿಯಲ್ಲ ಯಾವೂರು
ನೂರು ಹೇಳಿದ್ರೇನು..
ಕಪ್ಪ ಕತ್ತಲ್ಲಲಿ ಸಾವಿರ ಕಥೆ..
ಕುರುಡಕಂಡ.. ಕಿವುಡ ಕೇಳ್ದ
ಹೊಟ್ಟೆ ತುಂಬ್ದೋರು ಕಣ್ಣಪ್ಪ
ಒಂದೂರ್ ಕತೆ ನೂರಾತು..
ಮಂಡ್ಯದತ್ರ ಹರವ್ನೋನು…!







ಸಾದೃಶವಾಗಿದೆ ಕವಿತೆ, ನಮ್ಮೂರ ಕತೆಯೂ ಇದೇ, ತಮ್ಮ ಶೀರ್ಷಿಕೆಯಂತೆ!
ಗ್ರಾಮ ಬದುಕಿನ ದುರಂತಕ್ಕೆ ಹಿಡಿದ ಕನ್ನಡಿ.
vaastavakke kannadi idida Adbhuthavaada kavithe. Dhanyavaadagalu.
Very nice poem on current state of villages. My village came in front of my eyes, as soon as I started reading these lines.
ಶಿತಿಲಗೊಂಡಿರುವ ಹಳ್ಳಿಜೀವದ ಸುಂದರ ಸ್ವಗತ ಗೀತೆ
thanks:)