ಪುರಾವೆಗಳಿಲ್ಲದೇ..
ರೂಪ ಹಾಸನ
ಆ ಮೀನು ನೋಡು
ಹೇಗೆ ಈಜುತ್ತಿದೆ
ಸಾಕ್ಷಿಗಳುಳಿಸದೇ!
ಕೊಂ
ಡಿ ಬೆಸೆದಿದ್ದಕ್ಕೆ
ಮತ್ತೆ ಕಳಚಿದ್ದಕ್ಕೆ
ಹೆಜ್ಜೆಗಳ ಗುರುತಿಲ್ಲ
ಒಸರಿದ ಕಣ್ಣೀರೂ
ಈಜಿದ ನೀರಿನೊಂದಿಗೇ ಬೆರೆತು
ಅತ್ತದ್ದು ದಾಖಲಾಗುವುದೇ ಇಲ್ಲ
ಅದರ ಹಾಡಿಗೆ
ಅದರ ಕನಸಿಗೆ ನೆನಪಿಗೆ
ಯಾವ ಪುರಾವೆಗಳೂ ಇಲ್ಲ
ಬದುಕಿದರೆ…..
ಬದುಕಬೇಕು ಹೀಗೆ
ಯಾವ ಪುರಾವೆಗಳೂ ಇಲ್ಲದೇ
ಸತ್ತರೆ ಸಾಯಬೇಕು
ಗುರುತುಗಳುಳಿಸದೇ
ಯಾರ ನೆನಪಿಗೂ ಬಾರದೇ
ಯಾರನ್ನೂ ಕನಸಿನಲೂ ಕಾಡದೇ…..





Olledide roopakka☺kavite
ವಾಹ್ …
“ಸತ್ತರೆ ಸಾಯಬೇಕು
ಗುರುತುಗಳುಳಿಸದೇ
ಯಾರ ನೆನಪಿಗೂ ಬಾರದೇ
ಯಾರನ್ನೂ ಕನಸಿನಲೂ ಕಾಡದೇ…..”
ನಾನೂ ಮೀನಾಗಲೇ ಎನಿಸಿತು
I liked your poem.
Thumbaa Sundara kavithe
ಅರೇ ರೂಪಾ ಮ್ಯಾಮ್, ನಾವೆಲ್ಲರೂ ಒಂದಲ್ಲಾ ಒಂದು ಬಾರಿ ಎದುರಿಸುವ existential crisis ಗೆ ಹೊಸದೇ ಭಾಷ್ಯ ಬರೆದುಬಿಟ್ಟಿರಿ ನೀವು ಈ ಕವಿತೆಯಿಂದ. ಏನನ್ನಾದರೂ ಪುರಾವೆ ಉಳಿಸಿ ಹೋಗಬೇಕು ಎಂಬುದೇ ಮನುಷ್ಯರ ಬದುಕಿನ ನಿತ್ಯಧ್ಯೇಯವಾಗಿರುವಾಗ ‘ಪುರಾವೆಗಳನ್ನಾದರೂ ಏಕೆ ಉಳಿಸಬೇಕು’ ಎಂದು ನೀವು ಕೇಳಿರುವುದು ಎಷ್ಟೊಂದು ಸಕಾರಣವಾಗಿದೆ ಈ ಹೊತ್ತಿನಲ್ಲಿ. ಎಷ್ಟೊಂದು ಪ್ರಶ್ನೆಗಳಿಗೆ ಕವಿತೆ ಹೇಗೆ ತಣ್ಣಗೆ ಉತ್ತರಿಸುತ್ತದೆ ಎಂಬ ಸೋಜಿಗಕ್ಕೆ ಬೆರಗಾಗಿದ್ದೇನೆ.. ನಿಮಗೆ ಅಭಿನಂದನೆಗಳು.
Nice poem
good one.
Tumba channagide roopakka
Ellarigu Dhanyavaadagalu.