ರಜನಿ ಗರುಡ
ಕೈ ಎತ್ತಿ ಪ್ರಾರ್ಥಿಸಲಾರೆ ಆಸೀಫಾ
ನಾನೇ ಉಮ್ಮಳಿಸುವಷ್ಟು
ರಕುತದ ವಾಸನೆ
ಮೆತ್ತಿಕೊಂಡಿದೆ ಕೈಯ್ಯ
ನಿನಗಾಗಿ ಭೂಮಿ ಸ್ಪರ್ಶಿಸಿ
ಮಂಡಿಯೂರಲಾರೆ ಆಸೀಫಾ
ತಲೆಬುರುಡೆ ಮೂಳೆ ಚಕ್ಕಳ
ಎದ್ದು ಚುಚ್ಚುತ್ತಿವೆ ನನ್ನ ಬುಡವನ್ನಾ

ರೆಪ್ಪೆಗಳೆರಡು ಕೂಡಿಸಿ ಕಣ್ಮುಚ್ಚಿ
ನಿದ್ರಿಸಲಾರೆ ಆಸೀಫಾ
ನಿನ್ನ ಗುಲಾಬಿ ಕೆನ್ನೆಯ ಮೇಲೆ
ನನ್ನ ಕಂದನ ಚಿತ್ರ ಮೂಡಿ
ಹೊಳೆವ ನಿನ್ನ ಕಣ್ಣು ಕುಕ್ಕುತ್ತವೆ
ಉಡಲಾರೆ ತೊಡಲಾರೆ
ತುತ್ತೆತ್ತಿ ಉಣ್ಣಲಾರೆ ಆಸೀಫಾ
ಧರ್ಮದ ಮನೆ ತೊರೆದು ನಿಂತಿದ್ದೇನೆ
ನನ್ನ ದಾರಿಗಳು ನಿನ್ನ ತಲುಪುವ ತನಕ
ಕೈ ಎತ್ತಿ ಪ್ರಾರ್ಥಿಸಲಾರೆ ಆಸೀಫಾ
। ನಾಟಕಕ್ಕಾಗಿ ಬರೆದಿದ್ಧು.. ।






0 Comments