ನಾಗರಾಜ್ ಹೆತ್ತೂರ್
ನದಿ ದಂಡೆಯಲ್ಲಿ ಹರಿವ ನೀರೊಳಗೆ ಇಳಿಬಿಟ್ಟ ಕಾಲುಗಳಿಗೆ , ಮೀನ ಮರಿಗಳ ಹಿಂಡು ಮುತ್ತಿಡುವ ಕ್ರಿಯೆಗೆ ಮೈ ಒಂದು ಕ್ಷಣ ಜುಂ ಎಂದು ಮನಪುಲಕಗೊಳ್ಳುತ್ತದೆ. ಮೈಮನಸ್ಸಷ್ಟೇ ಅಲ್ಲ , ಎದೆಗೂಡು ಹೊಟ್ಟೆಯೊಳಗೆಲ್ಲಾ ನುಣ್ಣನೆಯ ಮೀನ ಮರಿಗಳ ಸಾಲು ಹರಿದಾಡಿದಂತಾಗಿ ಜೀವ ಹಾಯೆನಿಸುತ್ತದೆ. ಗಂಭೀರವಾಗಿ ಕಪ್ಪಾಗಿ ಟುಸ್ . . .ಟುಸ್ . . . ಎಂದು ಸಣ್ಣಗೆ ಹೊಗೆ ಬಿಡುತ್ತಾ ನಿರುಪದ್ರವಿಯಂತೆ ರೈಲ್ವೆ ನಿಲ್ದಾಣದಲ್ಲಿ ನಿಂತಿರುವ ಹೊಗೆ ಬಂಡಿಯ ಹತ್ತಿರ ನಿಲ್ಲಿ. ಕರಿ ಇದ್ದಿಲಿನ ಹೊಗೆಯ ಕಮಟು ಘಾಟಿನ ನಾಟಿ ವಾಸನೆಯ ಪರಿಚಯ ಮಾಡಿಸುತ್ತದೆ. ಕ್ಷಣ ಕಳೆದಂತೆ ಅದರ ಒಡಲ ಬೆಂಕಿಯ ಶಾಖ ನಿಮ್ಮನ್ನು ಆವರಿಸಿ ತತ್ತರಿಸುವಂತೆ ಮಾಡುತ್ತದೆ. ಈ ರೀತಿ ಒಂದರಲ್ಲಿ ತಂಗಾಳಿ ಒಡಲೊಳಗೆ ನುಗ್ಗಿದಂತಹ ಮುದ ಅನುಭವವಾದರೆ, ಚರ್ಮ ಚುರುಮುರು ಕಿರ್ರೋ ಎನ್ನುವ ಅನುಭವ ಮತ್ತೊಂದರಲ್ಲಿ ಈ ತದ್ವಿರುದ್ದ ಅನುಭವಗಳನ್ನು ಆಗಿಂದ್ದಾಗ್ಗೆ ನಮಗೆ ನೀಡಬಲ್ಲ ಏಕೈಕ ಚಿತ್ರಕಲಾವಿದ ಕೆೆ.ಟಿ.ಶಿವಪ್ರಸಾದ್ . . . .ಆಲಿಯಾಸ್ ಶಿವ ಎಂದು ವರ್ಣಿಸುತ್ತಿದ್ದ ಮತ್ತೊಬ್ಬ ಕಲಾವಿದ ಪ.ಸ.ಕುಮಾರ್ ಮಾತು ನಿಜವೆನಿಸುತ್ತದೆ.
ಬರೀ ಚಿತ್ರಕಲಾವಿದರಷ್ಟೇ ಅಲ್ಲದ ಬುದ್ದ ನಾಗಾರ್ಜುನ , ಪೆರಿಯಾರ್ ಅಂಬೇಡ್ಕರ್ ಅವರ ಚಿಂತನೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ತಮ್ಮದೇ ಆದ ವಿಶಿಷ್ಟ ಒಳನೋಟಗಳಿರುವ ಚಿಂತಕ ಹೋರಾಟಗಾರ ಸುಮಾರು ಎಪ್ಪತ್ತರ ದಶಕದಿಂದಲೇ ಪ್ರಗತಿ ಪರ ಚಳವಳಿಗಳಲ್ಲಿ ತುಂಬ ಪ್ರಾಮಾಣಿಕವಾಗಿ ದುಡಿದವರು ಮುಖ್ಯವಾಗಿ ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿಗಳಲ್ಲಿ ಎಂದೂ ರಾಜಿ ಮಾಡಿಕೊಳ್ಳದೆ ಅನ್ಯಾಯದ ವಿರುದ್ಧ ದನಿ ಎತ್ತಿ ಹೋರಾಡಿ ದನಿ ಇಲ್ಲದವರಿಗೆ ದನಿಯಾದವರು. ಇಂದಿಗೂ ತಳ ಸಮುದಾಯದವರ ಪರ ದನಿಯಾಗಿರುವವರು ನಾಡಿನ ಖ್ಯಾತ ಅಂತರರಾಷ್ಟ್ರೀಯ ಚಿತ್ರಕಲಾವಿದರಾದ ಕೆ.ಟಿ. ಶಿವಪ್ರಸಾದ್ . ಇವರು ಚಿತ್ರಕಲಾಕ್ಷೇತ್ರದಲ್ಲಿಯೇ ಅತ್ಯುನ್ನತ್ತ ಪ್ರಶಸ್ತಿ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಯಕ್ತಿಕವಾಗಿ ನನಗೆ ಕೆಟಿ ಚಳುವಳಿಯ ಗುರುಗಳು, ಬುದ್ದ, ಅಂಬೇಡ್ಕರ್ ಅವರನ್ನು ಕೆಟಿ ಯಿಂದ ತಿಳಿದುಕೊಂಡರೆ ವಾಸ್ತವ ನೆಲೆಗಟ್ಟಿನಲ್ಲಿ ಅವರನ್ನು ಹೇಗೆ ನೋಡಬೇಕು ಎಂಬ ಬಗ್ಗೆ ಹೊಸ ಚಿಂತನೆಗಳನ್ನು ಹೇಳುತ್ತಾರೆ. ಹಾಗೆ ಕೆಟಿ ಅವರ ಸಂಬಂಧ ಎಂದರೆ ಈ ನೆಲದ ಶೋಷಿತರೊಂದಿಗಿನ ಒಡನಾಟ. ಇಂತಹ ನಮ್ಮ ಗುರುಗಳಿಗೆ ಈ ಪ್ರಶಸ್ತಿ ಬಂದಿರುವುದು ನನ್ನಂತಹ ಅಸಂಖ್ಯಾತ ಹೋರಾಟದ ಮನಸ್ಸುಗಳಿಗೆ ನಮಗೆ ಬಂದಷ್ಟು ಖುಷಿ. ಈ ಸಂದರ್ಬದಲ್ಲಿ ಕೆಟಿ ಏನು ಹೇಳುತ್ತಾರೆ ಎಂಬುದು ಕೂಡ ಮೂಕ್ಯ.. ಈ ನಿಟ್ಟಿನಲ್ಲಿ ಅವರೊಂದಿಗೆ ಒಂದು ಆಪ್ತ ಮಾತುಕತೆ ಇಲ್ಲಿದೆ.

1.ಚಿತ್ರಕಲೆಯನ್ನೇ ನಿಮ್ಮ ಬದುಕಾಗಿ ಮಾಡಿಕೊಂಡಿದ್ದು ಹೇಗೆ ಮತ್ತು ಏಕೆ ?
ಶಿವ: ನಾನು ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಶಾಲೆಯಲ್ಲಿ ಹಾಬಿಕ್ಲಾಸ್ ನಡೆಯುತ್ತಿತ್ತು. ಸಂಗೀತ ಅಥವಾ ಚಿತ್ರಕಲೆ ಎರಡರಲ್ಲಿ ಒಂದನ್ನು ಆಯ್ದುಕೊಳ್ಳಬೇಕಾಗಿತ್ತು. ಸಂಗೀತ ಕಲಿಯುವುದು ಕಷ್ಟ , ಬಣ್ಣ ಬಳಿಯುವುದು ಸುಲಭ ಎಂದು ಭಾವಿಸಿ ಚಿತ್ರಕಲೆ ಆಯ್ಕೆ ಮಾಡಿಕೊಂಡೆ.
ಚಿತ್ರಕಲೆಯನ್ನು . ಶಿಕಕ ವೃತ್ತಿಯಿಂದ ನಿವೃತ್ತರಾಗಿದ್ದರು. ವಯಸ್ಸಾಗಿದ್ದರೂ ಗಂಭೀರ ನಡೆಯ ಘಾಣೆಕರ್ ದಿಲ್ ದಾರಾಗಿ ತರಗತಿಗೆ ಬರುತ್ತಿದ್ದರು.ಸದಾ ತ್ರೀ ಪೀಸ್ ಸೂಟ್ ಧರಿಸಿ ತಿಲಕರಂತೆ ತಲೆಗೆ ಪಗಡಿ ಸುತ್ತಿಕೊಂಡಿರುತ್ತಿದ್ದ ಘಾಣೇಕರ್ ಅವರ ವ್ಯಕ್ತಿತ್ವದಿಂದ ನಾನು ಆಕರ್ಷಿತನಾದೆ.
2. ಇದುವರೆಗೆ ನೀವು ಯಾವ ಯಾವ ಮಾದರಿಯಲ್ಲಿ ಚಿತ್ರ ಮೂಡಿಸಿದ್ದೀರಿ ?
ಶಿವ: ನಾನು ಮುಖ್ಯವಾಗಿ ಆಯಿಲ್ ಕಲರ್ ಪೇಯಿಟಿಂಗ್ ಮಾಡುತ್ತೇನೆ. ವಾಟರ್ ಕಲ್ಲರ್ ನಲ್ಲಿ ಮಾಡುವುದು ತುಂಬಾ ಕಡಿಮೆ .ಆಕ್ರೆಲಿಕ್ ನಲ್ಲಿ ಸ್ವಲ್ಪ ಕೆಲಸ ಮಾಡಿದ್ದೇನೆ ಅಷ್ಟೆ. ಇದು ಬಿಟ್ಟರೆ ನಾಡಿನಲ್ಲಿ ನಾನು ಮಾಡಿರುವ ಬಹುದೊಡ್ಡ ವಾಸ್ತು ಶಿಲ್ಪ ಅಂದರೆ ಕುಪ್ಪಳ್ಳಿಯಲ್ಲಿ ರಾಷ್ಟ್ರಕವಿ ಕುವೆಂಪು ಹಾಗೂ ಪೂರ್ಣಚಂದ್ರತೇಜಸ್ವಿಯವರ ಸಮಾಧಿ ನಿರ್ಮಾಣ.
3.ಚಿತ್ರಕಲೆಯ ಜೊತೆಗೆ ಫೋಟೋಗ್ರಫಿ , ಆರ್ಕಿಟೆಕ್ಟ್ ಕೂಡ ಮಾಡುತ್ತೀರಿ ಅದು ಹೇಗೆ ?
ಶಿವ: ನನ್ನ ಯಶಸ್ಸಿಗೆ ಸ್ಪೂರ್ತಿ ಪೂರ್ಣಚಂದ್ರತೇಜಸ್ವಿ. ಕೆ.ಟಿ.ಶಿವಪ್ರಸಾದ್ ಮೇಡ್ ಬೈ ಪೂರ್ಣಚಂದ್ರತೇಜಸ್ವಿ. ಪೂರ್ಣ ಚಂದ್ರ ತೇಜಸ್ವಿ ಅವರು ಮೂಡುಗೆರೆಯಲ್ಲಿ ಇದ್ದ ಹಳೇ ತೋಟವನ್ನ ಮಾರಿ ಅಲ್ಲೆ ಇನ್ನೊಂದು ಹೊಸ ತೋಟ ಖರೀದಿಸಿದ್ದರು. ಆ ತೋಟದಲ್ಲಿ ಮನೆ ಇರಲಿಲ್ಲ. ಅಲ್ಲಿ ಮನೆಕಟ್ಟಬೇಕಾಗಿದ್ದರಿಂದ ನಾನು ತೇಜಸ್ವಿ ಇಬ್ಬರು ಸೇರಿ ಮನೆ ಡಿಸೈನ್ ಮಾಡಿದ್ದವಿ ಅಲ್ಲಿಂದ ಆರಂಭವಾಯಿತು ನನ್ನ ಆರ್ಕಿಟೆಕ್ ವೃತ್ತಿ ಇದುವರೆಗೆ ರಾಜ್ಯದಲ್ಲಿ ಸುಮಾರು 95ಕ್ಕೂ ಹೆಚ್ಚು ಮನೆಗಳ ಡಿಸೈನ್ ಮಾಡಿದ್ದೇನೆ.
ಫೋಟೋಗ್ರಫಿ ನನ್ನ ಚಿತ್ರಕಲೆಗೆ ಅನುಕೂಲವಾಗುತ್ತಿದ್ದುದ್ದರಿಂದ ತೇಜಸ್ವಿ ಫೋಟೋಗ್ರಫಿ ಮಾಡು ಎಂದು ಪ್ರೋತ್ಸಾಹಿಸಿದರು ಅವರ ಪ್ರೋತ್ಸಾಹದಿಂದ ಫೋಟ್ರೋಗ್ರಫಿಯನ್ನು ಕಲಿತುಕೊಂಡೆ. ಅಲ್ಲದೇ ಫಿಲಾಸಫಿಯನ್ನು ಓದುವ ಅಭಿರುಚಿಯನ್ನು ಮೂಡಿಸಿದರು ಇವರ ಒಡನಾಟದಿಂದ ನನ್ನ ಇಡೀ ವ್ಯಕ್ತಿತ್ವ ಬದಲಾಯಿತು.ನಾನು ಇಂದು ಸಮಾಜದಲ್ಲಿ ಉತ್ತಮ ಕಲಾವಿದ , ಆಕರ್ಿಟೆಕ್ , ಛಾಯಾಗ್ರಾಹಕ ನಾಗಲು ಕಾರಣ ಪೂರ್ಣ ಚಂದ್ರತೇಜಸ್ವಿ. ಇವರು ನನಗೆ ಒಂದು ಬಗೆಯ ಮಾಂತ್ರಿಕಶಕ್ತಿ.
4.ಒಟ್ಟು ನಿಮ್ಮ ಚಿತ್ರಕಲೆಯ ವೃತ್ತಿ ಬದುಕನ್ನು ನೀವೇ ಅವಲೋಕಿಸಿಕೊಂಡಾಗ ನಿಮಗೇನನಿಸುತ್ತದೆ ?
ಶಿವ:ಚಿತ್ರಕಲೆ ದೃಷ್ಟಿಗೆ ಸಂಬಂಧಪಟ್ಟಿದ್ದು. ನಾವು ಮತ್ತು ಹೊರ ಜಗತ್ತು ಹಾಗೂ ಮನುಷ್ಯನ ಜೀವನ ಈ ಸಂಬಂಧಗಳನ್ನು ಒಬ್ಬ ಕಲಾವಿದ ಹೇಗೆ ತೋರಿಸ ಬಹುದು ಎಂಬುದು ತುಂಬಾ ಮುಖ್ಯವಾದುದು. ಉದಾಹರಣೆಗೆ ಹೇಳುವುದಾದರೆ ಈ ಪ್ರಪ್ರಚಂದಲ್ಲಿ ಯಾವುದು ಆಗಿರುವುದು ಯಾವುದು ಇಲ್ಲ ಎಲ್ಲವೂ ಆಗುತ್ತಾ ಇರುವುದು. ಈ ಚಿಂತನೆಯನ್ನು ಹೇಗೆ ಕಲಾವಿದ ಚಿತ್ರಿಸುತ್ತಾನೆ ಎಂಬುದು ಬಹುಮುಖ್ಯ.
5.ಇದುವರೆಗೆ ಎಷ್ಟು ಚಿತ್ರಕಲೆಯನ್ನು ಪ್ರದರ್ಶನ ಮಾಡಿದ್ದೀರಾ ? ಎಲ್ಲೆಲ್ಲಿ ?
ಶಿವ: ಸುಮಾರು ಐವತ್ತಕ್ಕೂ ಹೆಚ್ಚು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಹಾಗೂ ಸಮೂಹ ಚಿತ್ರಕಲಾ ಪ್ರದರ್ಶನ ಮಾಡಿದ್ದೇನೆ. ಅದು ದೇಶದಲ್ಲಿ ಬೆಂಗಳೂರು , ಬಾಂಬೆ , ಮದ್ರಾಸ್ , ದೆಹಲಿ , ಅಂತರ ರಾಷ್ಟ್ರದಲ್ಲಿ ಇಂಗ್ಲೆಂಡ್ , ಆಸ್ಟ್ರೇಲಿಯ , ಕೋರಿಯ , ಅಮೇರಿಕ ದೇಶಗಳಲ್ಲಿ ನನ್ನ ಚಿತ್ರಕಲೆ ಪ್ರದರ್ಶನಗೊಂಡಿದೆ.
ದೇಶದಲ್ಲಿ ಬಾಂಬೆ , ದೆಹಲಿ ಮತ್ತು ಮದ್ರಾಸ್ ನಲ್ಲಿ ಮಾರುಕಟ್ಟೆ ಇರುವುದರಿಂದ ಅಲ್ಲಿ ನಾನು ಹೆಚ್ಚು ಪ್ರದರ್ಶನ ಮಾಡುತ್ತೇನೆ.
6. ರೈತ ಹಾಗೂ ದಲಿತ ಚಳವಳಿ ಸೇರಿದಂತೆ ಅನೇಕ ಜನಾಂದೋಲನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೀರಿ. ಈ ಚಳವಳಿಗಳು ನಿಮ್ಮ ವ್ಯಕ್ತಿತ್ವ ಮತ್ತು ಚಿತ್ರಕಲೆಯ ಮೇಲೆ ಪ್ರಭಾವ ಬೀರಿವೆಯೇ ?
ಶಿವ: ಪರಿಣಾಮ ಬೀರಿದೆ. ದಲಿತ ಮತ್ತು ರೈತ ಸಂಘದ ಹೋರಾಟಗಳೊಂದಿಗೆ ನಾನು ದು:ಖದ ಅನುಸಂಧಾನ ಮಾಡುವುದನ್ನು ಕಲಿತುಕೊಂಡೆ. ಇದು ನನ್ನ ಕಲೆಯ ಕಲಾಮೀಮಾಂಸೆಯ ಮುಖ್ಯ ಗುರಿಯಾಯಿತು. ದುಃಖದ ಅನುಸಂಧಾನ ಮಾಡುವುದು ಬೌದ್ಧ ಕಲಾಮೀಮಾಂಸೆಯ ಮುಖ್ಯ ಗುರಿಯು ಹೌದು. ಹಾಗೆಯೇ ಕಲೆ ಸಂತೋಷವನ್ನು ಕೊಡಬೇಕೆನ್ನುವುದು ಹಿಂದು ಧರ್ಮದ ಕಲಾ ಮೀಮಾಂಸೆಯ ಮುಖ್ಯ ಗುರಿ. ಚಳವಳಿ , ಅನುಭವಗಳಿಂದ ಜಾನ ಪಡೆದುಕೊಂಡು ಹಿಂದು ಧರ್ಮದ ಕಲಾ ಮೀಮಾಂಸೆಯನ್ನು ಬಿಟ್ಟು ಬೌದ್ಧ ಕಲಾ ಮೀಮಾಂಸೆಯನ್ನು ನನ್ನ ಕಲೆಯಲ್ಲಿ ಅಳವಡಿಸಿಕೊಂಡಿದ್ದೇನೆ.
7. ಅನೇಕ ಚಳವಳಿಗಳಲ್ಲಿ ಭಾಗವಹಿಸಿದ್ದ ಅನುಭವ ನಿಮಗಿದೆ ಅವೆಲ್ಲವೂ ವೈಪಲದ ಹಾದಿ ಹಿಡಿದದ್ದು ಏಕೆ ?
ಶಿವ : ವೈಪಲ್ಯ ಅಂತ ಅಲ್ಲ ಚಳವಳಿಗಳು (ರೈತ ಮತ್ತು ದಲಿತ ) ಆರಂಭದಲ್ಲಿ ರೈತ ಚಳವಳಿ ರೈತರ ಆಥರ್ಿಕ , ಸಾಮಾಜಿಕ ಅನ್ಯಾಯಗಳನ್ನು ಖಂಡಿಸಿ ನ್ಯಾಯ ಪಡೆಯುವ ಸಲುವಾಗಿ ಹುಟ್ಟಿತು. ರೈತರಿಗೆ ಮಾರುಕಟ್ಟೆಯಲ್ಲಿ ತಾವು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿರಲಿಲ್ಲ. ಆ ಸಂದರ್ಭದಲ್ಲಿ ರೈತ ಸಂಘ ಬೆಳೆಗಳಿಗೆ ವೈಜಾನಿಕ ಬೆಲೆ ನೀಡುವಂತೆ ಒತ್ತಾಯಿಸುವುದು ಹೋರಾಟದ ಮುಖ್ಯ ಗುರಿಯಾಗಿತ್ತು. ಅದೇ ದಲಿತ ಚಳವಳಿ , ಜಮೀನು ಇಲ್ಲದವರಿಗೆ ಜಮೀನು , ಅಸ್ಪೃಷ್ಯತೆ ನಿಮರ್ೂಲನೆ , ಮೂಡನಂಬಿಕೆ ವಿರುದ್ಧ ಹಾಗೂ ಮೀಸಲಾತಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಹೋರಾಟ ರೂಪಿಸಿತು. ರೈತ ಚಳವಳಿ ರಾಮ್ ಮನೋಹರಲೋಹಿಯ ಅವರ ಸಿದ್ಧಾಂತದ ಮೇಲೆ ಪ್ರೋ. ನಂಜುಂಡಸ್ವಾಮಿ ಮತ್ತು ಸುಂದರೇಶ್ ಅವರ ಮುಖಂಡತ್ವದಲ್ಲಿ ನಡೆಯುತ್ತಿತ್ತು. ಆಗ ಆ ಚಳವಳಿಗೆ ಒಂದು ಸೈದ್ದಾಂತಿಕತೆ ಇತ್ತು. ಮೊದಲೆ ಹೇಳಿದಂತೆ ಜಾತಿಗಳ ತಿಕ್ಕಾಟದಿಂದ ರೈತ ಸಂಘ ಒಡೆದು ಹೋಯಿತು. ಇದರಿಂದ ಚಳವಳಿ ನಿಂತಿಲ್ಲ. ಜಾಗತೀಕರಣದಿಂದ ಕೆಲವು ಹೊಸ ಸಮಸ್ಯೆಗಳು ಎದುರಾಗುತ್ತವೆ ಅದನ್ನು ಹೇಗೆ ಬಗೆಹರಿಸಬೇಕು ಎನ್ನುವುದನ್ನು ಆಲೋಚಿಸಬೇಕು. ಹಾಗೆ ದಲಿತ ಚಳವಳಿಯಲ್ಲಿಯೂ ಕೂಡ ಈ ಚಳವಳಿ ಆರಂಭವಾದಾಗ ಬೌದ್ಧಮತಕ್ಕೆ ಯಾರು ಸೇರಿಕೊಳ್ಳಲಿಲ್ಲ ಕಾರಣ ಅವರನ್ನು ಕಾಡಿದ್ದು ಮೀಸಲಾತಿ. ಈ ಧರ್ಮಕ್ಕೆ ಸೇರಿದರೆ ಎಲ್ಲಿ ನಾವು ಮೀಸಲಾತಿಯಿಂದ ವಂಚಿತರಾಗುತ್ತೇವೋ ಎಂಬ ಅನುಮಾನವಿತ್ತು. ಆದರೆ ಈಗ ಆ ಅನುಮಾನ ದೂರವಾಗಿರುವುದರಿಂದ ಬಹುತೇಕ ದಲಿತರು ಬೌದ್ಧಧರ್ಮ ಸೇರುತ್ತಿದ್ದಾರೆ. ದಲಿತ ಸಂಘದಲ್ಲಿಯೂ ಕೂಡ ಎಡ ಮತ್ತು ಬಲ ಗುಂಪುಗಳಾಗಿ ಒಡೆದು ಹೋಗಿದೆ. ಬೌದ್ಧ ಧರ್ಮ ಸೇರಿವ ಮೂಲಕ ಒಂದಾಗಬಹುದೆಂದು ನನಗೆ ಅನಿಸುತ್ತದೆ. ಅಸ್ಪೃಶ್ಯತೆ ವಿರುದ್ಧದ ಹೋರಾಟ ನಿರಂತರ ಆದ್ದರಿಂದ ಈ ಹೋರಾಟ ಇನ್ನೂ ನಡೆಯುತ್ತಿದೆ ಹೋರಾಟ , ಚಳವಳಿ ಎಂದೂ ನಿಲ್ಲುವುದಿಲ್ಲ.
8. ರೈತ ಮತ್ತು ದಲಿತ ಚಳವಳಿಗಳಲ್ಲಿ ತಾವು ವೈಯಕ್ತಿಕ ಪ್ರಭಾವ ದಿಂದ ಭಾಗವಹಿಸಿದ್ದಿರೋ ಅಥವಾ ಏನಾದರೂ ಸೈದ್ಧಾಂತಿಕ ಪ್ರೇರಣೆಯ ಒತ್ತಡವಿತ್ತೋ ?
ಶಿವ:ಯಾವುದೇ ಚಳವಳಿಗೆ ಸೈದ್ಧಾಂತಿಕ ನಿಲುವು ಮುಖ್ಯ. ವೈಯಕ್ತಿಕ ದೃಷ್ಠಿಯನ್ನಿಟ್ಟುಕೊಂಡು ಯಾವುದೇ ಚಳವಳಿಗೆ ಸೇರಿಕೊಳ್ಳುವುದಕ್ಕೆ ಅರ್ಥವಿಲ್ಲ. ರೈತ ಸಂಘದವರು ತಮ್ಮ ಆಥರ್ಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದನ್ನು ಮುಖ್ಯವಾಗಿಟ್ಟುಕೊಂಡಿದ್ದರು. ಅಲ್ಲದೇ ಜಾತಿ ನಿಮರ್ೂಲನೆಯ ಕಾರ್ಯಕ್ರಮಗಳನ್ನೂ ಹಾಕಿಕೊಂಡರು. ಆದರೆ ಅದು ಕೇವಲ ಓಬಿಸಿಗಳಿಗೆ ಮಾತ್ರ ಸೀಮಿತವಾಗಿತ್ತು. ಆದ್ದರಿಂದ ದಲಿತರು ರೈತ ಸಂಘಟನೆಯಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಇದರ ಅರಿವು ನನಗೆ ಬಂದ ಮೇಲೆ ರೈತ ಸಂಘ ಬಿಟ್ಟು ದಲಿತ ಸಂಘಟನೆಯ ಹೋರಾಟಕ್ಕೆ ಸೇರಬೇಕಾಯಿತು. ರೈತರು ಮತ್ತು ದಲಿತರು ಒಂದಾಗಿಲ್ಲದಿದ್ದರಿಂದ ಇದನ್ನೇ ಮೇಲ್ಜಾತಿಯವರು ಬಳಸಿಕೊಂಡು ರೈತ ಮತ್ತು ದಲಿತ ಹೋರಾಟಗಳನ್ನು ಛಿದ್ರಗೊಳಿಸುವಲ್ಲಿ ಸಫಲರಾದರು.
9. ನಿಮ್ಮ ಮತ್ತು ಪೂರ್ಣಚಂದ್ರತೇಜಸ್ವಿ ಹಾಗೂ ಪ್ರೋ. ನಂಜುಂಡಸ್ವಾಮಿಯವರ ಒಡನಾಟ ಹೇಗಿತ್ತು. ?
ಪೂರ್ಣಚಂದ್ರತೇಜಸ್ವಿ ಪ್ರಪಂಚದ ಪ್ರಸಿದ್ದ ಸಾಹಿತಿಗಳಲ್ಲಿ ಇವರು ಒಬ್ಬರು . ಪ್ರೋ. ನಂಜುಂಡಸ್ವಾಮಿ ಉತ್ತಮ ವಾಗ್ಮಿ, ಹೋರಾಟಗಾರರು, ಇವರು ಚಿತ್ರಕಲೆ ಸೇರಿದಂತೆ ಎಲ್ಲಾ ವಿಷಯಗಳಲ್ಲೂ ಹೆಚ್ಚು ಪಾಂಡಿತ್ಯ ಪಡೆದಿದ್ದರು. ಇವರ ಅತುತ್ಯುತ್ತಮ ವ್ಯಕ್ತಿತ್ವ ನನ್ನ ಆಕರ್ಷಿಸಿತು. ಇವರೊಂದಿಗೆ ಆಗಾಗ ನಾನು ನಡೆಸುತ್ತಿದ್ದ ಚರ್ಚೆಗಳು ನನಗೆ ಪ್ರಭಾವ ಬೀರಿತು. ಪ್ರೋ ನಂಜುಂಡ ಸ್ವಾಮಿಯವರ ಜೊತೆ ರೈತ ಸಂಘದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದೆ ಅವರ ಚಿಂತನೆಗಳನ್ನು ನನ್ನ ಬದುಕಿನಲ್ಲಿ ಅಳವಡಿಸಿಕೊಂಡೆ. ಹೋರಾಟದಿಂದ ಜೈಲು ಶಿಕ್ಷೆಯನ್ನು ಅನುಭವಿಸಿದೆ.
10..ಇದುವರೆಗೆ ನೀವು ಪಡೆದಿರುವ ಪ್ರಶಸ್ತಿಗಳು ಯಾವುವು ?
ಶಿವ: ಲಲಿತಕಲಾ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ , ಶಂಕರನಾರಾಯಣ ಪ್ರಶಸ್ತಿ ಪಡೆದಿದ್ದೇನೆ.
11. ವೆಂಕಟಪ್ಪ ಪ್ರಶಸ್ತಿ ಪಡೆದಿರುವುದು ನಿಮಗೆ ಖುಷಿ ತಂದಿದೆಯೇ ?
ಶಿವ : ಸರ್ಕಾರ ನನ್ನ ಹಾಗೂ ನನ್ನ ಕೆಲಸವನ್ನು ಗುರುತಿಸಿ ಪ್ರಶಸ್ತಿ ನೀಡಿದೆ ಸಂತಸ ತಂದಿದೆ. ಅಂದ ಹಾಗೆ ಪ್ರಶ್ತಿಯಲ್ಲಿ ಒಂದು ಲಕ್ಷವನ್ನು ಮೈಸೂರಿನ ಒಡನಾಡಿ ಸಂಸ್ಥೆಗೆ ಘೋಷಿಸಿದ್ದೇನೆ.
12.ಕಲೆಯ ಬಗ್ಗೆ ಇನ್ನೇನು ಹೇಳಲು ಇಚ್ಛೆ ಪಡುತ್ತೀರ ?
ಎಲ್ಲಾ ಕಲೆಯಲ್ಲೂ ಚಲನೆ ಇರಬೇಕು ಅದು ಸ್ಥಗಿತವಾಗಬಾರದು ಚಲನೆ ಇದ್ದರೆ ಹೊಸ ಕಲೆಗಳು ಸೃಷ್ಠಿಯಾಗುತ್ತದೆ. ಸ್ಥಿಗ್ಮ ಕಲೆಗೆ ವಿಜಾನಕ್ಕೆ ಸಂಬಂಧ ಇಲ್ಲ ಎನ್ನುವ ನಂಬಿಕೆ ತಪ್ಪು ವಿಜಾನ ನಮಗೆ ಚಲನೆ ಕೊಡುತ್ತದೆ ಹೊಸ ಅನುಭವ , ಚಿಂತನೆಗಳನ್ನು ಮೂಡಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರು ವಿಜಾನದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ವಿಜಾನ ಯಾವತ್ತು ಸ್ಥಗಿತವಾಗಲ್ಲ ಚಲನೆಯಲ್ಲಿ ಇರುತ್ತದೆ.







ಕೆಟಿಯವರ ಸಂದರ್ಶನ ಉತ್ತಮವಾಗಿದೆ. ಈ ಹಿಂದೆಯೂ ಅವರ ಹಾಗೂ ಅವರ ಬಗೆಗಿನ ಬರಹಳನ್ನು ಓದಿದ್ದೇವೆ. ನಂಜುಂಡಸ್ವಾಮಿ, ತೇಜಸ್ವಿ ತಲೆಮಾರಿನವರಲ್ಲಿ ಇಂದು ಮಾರ್ಗದರ್ಶಕ ಸ್ಥಾನದಲ್ಲಿ ನಿಲ್ಲಬಲ್ಲವರೆಂದರೆ ಮೂವರ ಮಾತ್ರ ಎನ್ನಿಸುತ್ತದೆ. ಶಾಮಣ್ಣ, ದೇವನೂರ ಮಹಾದೇವ ಮತ್ತು ಕೆಟಿ. ನಮ್ಮೊಂದಿಗೆ ನೂರ್ಕಾಲವಿರಲಿ. ಇದು ನಮ್ಮ ಬಯಕೆ.
ಧನ್ಯವಾದಗಳು ಹಾಗೂ ಅಭಿನಂದನೆಗಳು ನಾಗರಾಜ್
ಸಂದರ್ಶನ ಚೆನ್ನಾಗಿ ಮೂಡಿದೆ. ಅದರಲ್ಲಿಯೂ ಚಳುವಳಿ ಹಾಗೂ ತೇಜಸ್ವಿಯರೊಂದಿಗಿನ ಸಂಬಂಧ
ಕೇಟಿ ಕಲಾವಿದರ ನಡುವೆ ಹೊಸ ಮಾರ್ಗವನ್ನು ತುಳಿದವರು. ಚಳುವಳಿಯೊಂದಿಗಿನ ಅವರ ಸಂಬಂಧ , ತೇಜಸ್ವಿಯವರ ಪ್ರಭಾವ ಬಹಳ ಚೆನ್ನಾಗಿ ಮೂಡಿದೆ. ಅವರ ಮಾತು ಜಗತ್ತಿನಲ್ಲಿ ಎಲ್ಲವೂ ಆಗುತ್ತಲಿದೆ ಅದನ್ನು ಗ್ರಹಿಸಿ ಮೂಡಿಸುವುದೇ ಗುರಿ ಎಂಬ ಮಾತು , ಮತ್ತು ಫಿಲಾಸಫಿಯ ಅಧ್ಯಯನ , ವಿಜ್ಞಾನದ ಧ್ಯಯನದ ಮಹತ್ವವನ್ನು ಅವರು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಇವುಗಳ ಅಧ್ಯಯನವೇ ಸಾಹಿತಿ , ಕಲಾವಿದರಿಗೆ ಮಾತ್ರವಲ್ಲ ಚಳುವಳಿಕಾರರಿಗೂ ಅತ್ಯವಶ್ಯ. ಅದಿಲ್ಲದೆ ಈ ಎಲ್ಲವೂ ತೆಳುವಾಗುತ್ತದೆ ಅಥವಾ ಬರಡಾಗುತ್ತದೆ.
ಆದರೆ ರೈತ ಹಾಗೂ ದಲಿತ ಚಳುವಳಿಗಳ ಿಂದಿನ ಸ್ಥಿತಿಯ ಕಾರಣಗಳ ಬಗ್ಗೆ ದರ ಮುಂದಿನ ದಾರಿಯ ಬಗ್ಗೆ ಅವರ ಅಭಿಪ್ರಾಯ ಾಳವಾದ ಚಿಂತನೆಯಿಂದ ಮೂಡಿಲ್ಲ