ಕೆ.ಟಿ. ಗಟ್ಟಿ ಬರೆಯುತ್ತಾರೆ:

ಭಾಷೆ ಮತ್ತು ಸಂಸ್ಕೃತಿ

ಕೃಪೆ: ಅತ್ರಿ ಬುಕ್ ಸೆಂಟರ್ ಕೆ. ಟಿ. ಗಟ್ಟಿ

ಭಾರತ ದೇಶದಲ್ಲಿ ನೂರಾರು ಭಾಷೆಗಳಿವೆ. ಪ್ರತಿಯೊಂದು ಭಾಷೆಗೂ ಅದರದೇ ಆದ ಹೆಸರಿದೆ. ಭಾಷೆಗಳಿಗೆ ಹೆಣೆದುಕೊಂಡಂತೆ ಸಂಸ್ಕೃತಿಯಿದೆ. ಉದಾಹರಣೆಗೆ, ಕನ್ನಡ ಭಾಷೆಗೆ ಕನ್ನಡ ಎಂಬ ಅದರದೇ ಆದ ಹೆಸರಿದೆ.

ಭಾರತದಲ್ಲಿ ತೀರಾ ಅನಗತ್ಯವಾಗಿ ನ್ಯಾಶನಲ್ ಲ್ಯಾಂಗ್‍ವೇಜ್ ಎಂಬ ಶಬ್ಧವನ್ನು ಬಳಸಲಾಗುತ್ತದೆ. ಅಷ್ಟೇ ಅಲ್ಲ, ನ್ಯಾಶನಲ್ ಲ್ಯಾಂಗ್ವೇಜ್ ಎಂಬ ಅನಗತ್ಯ ಪ್ರಯೋಗವಿದೆ. ನ್ಯಾಶನಲ್ ಲ್ಯಾಂಗ್ವೇಜ್ ಹಿಂದಿ ಎಂದು ಯಾರೋ ಒಂದು ಪದಬಳಕೆ ಆರಂಭಿಸಿದರು. ಹಿಂದಿ ಭಾರತದ ಉದ್ದಗಲದಲ್ಲಿ ಜನರು ಆಡುವ  ಭಾಷೆಯಲ್ಲ. ನೂರಾರು ಭಾಷೆಗಳಲ್ಲಿ ಎಲ್ಲವೂ ದೇಶ ಭಾಷೆಗಳೇ ಆಗಿವೆ. ಈ ಹತ್ತು ಹಲವು ಭಾಷೆಗಳಲ್ಲಿ ಕೆಲವರು ನಾಲ್ಕೈದು ಭಾಷೆಗಳನ್ನು ಆಡುತ್ತಾರೆ. ಎಲ್ಲ ಭಾಷೆಗಳನ್ನು ಕಲಿತು ಆಡುವವರೂ ಇದ್ದಾರೆ. ಯಾವುದೇ ಭೇದ-ಭಾವ ಇಲ್ಲದ ದೇಶ ಭಾರತ ಎಂದು ನಿಸ್ಸಂದೇಹವಾಗಿ ಹೇಳಬಹುದು. ಈ ಸತ್ಯ ಇಡೀ ಜಗತ್ತಿಗೆ ಗೊತ್ತಿದೆ.

ನಾವು ಗಮನಿಸಬೇಕಾದ ಒಂದು ಮುಖ್ಯ ವಿಚಾರವೆಂದರೆ ರಷ್ಯಾ, ಅಮೆರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್, ಚೈನಾ ಮತ್ತಿತರ ಯಾವ ದೇಶದಲ್ಲಿಯೂ ರಾಷ್ಟ್ರಭಾಷೆ ಅಥವಾ ನ್ಯಾಶನಲ್ ಲ್ಯಾಂಗ್ವೇಜ್ ಎಂಬ ಪ್ರಯೋಗವಿಲ್ಲ. ಎಲ್ಲ ಭಾಷೆಗಳೂ ಸಮಾನ. ಯಾವುದೂ ಮೇಲಲ್ಲ, ಯಾವುದೂ ಕೀಳಲ್ಲ. ಆ ಅರ್ಥದಲ್ಲಿ ದೇಶದ ಎಲ್ಲ ಭಾಷೆಗಳನ್ನೂ ರಾಷ್ಟ್ರೀಯ ಭಾಷೆಗಳೆಂದು ಹೇಳಬೇಕಾಗುತ್ತದೆ.

ಕನ್ನಡ ಎಂಬ ಭಾಷೆಯ ಕುರಿತಾಗಿ ವಿವರವಾಗಿ ಹೇಳುವುದಾದರೆ, ಕನ್ನಡ ಭಾಷೆಯಲ್ಲಿ ಸಾವಿರಾರು ಸಾಹಿತ್ಯ ಕೃತಿಗಳಿವೆ. ಪುಸ್ತಕಗಳಿವೆ. ಕನ್ನಡದಲ್ಲಿ ಸಾಹಿತ್ಯ ರಚನೆ ಶತಮಾನಗಳ ಹಿಂದೆಯೇ ಆರಂಭವಾಗಿದೆ. ಅದೇ ರೀತಿ ಕನ್ನಡದಲ್ಲಿ ಹಾಡಿನ ರೂಪದಲ್ಲಿರುವ ಕಾವ್ಯವನ್ನು ಕನ್ನಡ ನಾಡಿನ ಉದ್ದಗಲಕ್ಕೆ ನೂರಾರು ಶಾಲೆ ಕಾಲೇಜು ಮತ್ತು ಸಂಸ್ಕೃತಿ ಮಂದಿರಗಳಲ್ಲಿ ಪ್ರತಿ ದಿನ ಹಾಡಲಾಗುತ್ತದೆ.

ಅಂತೆಯೇ ಹಾಡು ಕುಣಿತ ನರ್ತನ, ನಾಟಕ ಮತ್ತು ಹಾಡು ಮಾತು ನೃತ್ಯ ಮತ್ತು ಕಥಾವಿವರಣೆ ಯಕ್ಷಗಾನವೆಂಬ ನಾಟ್ಯ, ಸಂಗೀತ ಮತ್ತು ಕಥಾವಿವರಣೆ ಪ್ರತಿ ದಿನವೂ ನಡೆಯುತ್ತದೆ. ಪ್ರಯೋಗ ಪ್ರತಿ ದಿನವೆಂಬಂತೆ ನಡೆಯುತ್ತದೆ. ರಾತ್ರಿ, ಹಗಲು ನಡೆಯುತ್ತದೆ. ಪ್ರೇಕ್ಷಕರು ಈ ವೈವಿಧ್ಯಮಯ ಕಾರ್ಯಕ್ರಮವನ್ನು ರಾತ್ರಿ, ಹಗಲು ಎಂಬ ವ್ಯತ್ಯಾಸವಿಲ್ಲದೆ ನೆಲದಲ್ಲಿ ಅಥವಾ ಕುರ್ಚಿಗಳಲ್ಲಿ ಕುಳಿತು ವೀಕ್ಷಿಸುತ್ತಾರೆ.

ಇದು ಮುಖ್ಯವಾಗಿ ನಿರಂತರ ನಡೆಯುವುದು ಕರ್ನಾಟಕ ರಾಜ್ಯದಲ್ಲಿ. ಇಂಥ ಅದ್ಭುತ ಮನೋರಂಜಕ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮ ಲೋಕದಲ್ಲಿ ಬೇರೆಲ್ಲಿಯೂ ಇಲ್ಲ. ಇದನ್ನು ಬಹುಮಟ್ಟಿಗೆ ಹೋಲುವ ಸಾಂಸ್ಕೃತಿಕ ಕಾರ್ಯಕ್ರಮಗಳು ಬೇರೆ ದೇಶಗಳಲ್ಲಿಯೂ ನಡೆಯುತ್ತಿರಬಹುದು.

 

ಸರ್ವ ನಾಶದ ದಾರಿಯಲ್ಲಿ ಮಾನವ

ಈ ತನಕ ತಾನೇ ಸೃಷ್ಟಿಸಿಕೊಂಡ ಸಂಪತ್ತಿನ ಹೊಂಡದಲ್ಲಿ ಬಿದ್ದು ನಾಶವಾಗಿರುವ ಮನುಷ್ಯರ ವಿಚಾರವನ್ನು ಇಲ್ಲಿಗೇ ಬಿಟ್ಟು ಇನ್ನು ಮುಂದೆ ಮನುಷ್ಯ ನಾಶವಾಗದಿರಬೇಕಾದರೆ ಏನು ಮಾಡಬೇಕು ಎಂಬುದರ ಕುರಿತು ಚಿಂತಿಸೋಣ.

ಇದು ಅಸಾಧಾರಣ ಚಿಂತನೆ ಎಂದು ಕೆಲವರೆಂದರೆ. ಅರ್ಥಹೀನ ಚಿಂತನೆ ಎಂದು ಬೇರೆ ಕೆಲವರು ಹೇಳುತ್ತಾರೆ. ಲೋಕ ಏನು ಹೇಳುತ್ತದೆ ಎಂಬುದು ಮುಖ್ಯವೆ, ನೀವು ಬದುಕುವ ರೀತಿ ನಿಮಗೆ ಮುಖ್ಯವೆ? ದಯವಿಟ್ಟು ಯೋಚಿಸಿ.

ಯೋಚಿಸುವ, ಚಿಂತನೆ ನಡೆಸುವ ರೀತಿ ಬೇರೆ, ಧ್ಯಾನ ಮಾಡಿ, ನಾನು ಎಂಬುದು ಬೇರೆ ತನ್ನತನ ಎಂಬುದು ಬೇರೆ ಎಂದು ಅರ್ಥ ಮಾಡಿಕೊಂಡಿರುವ ಮನಸ್ಸುಗಳು ಇಲ್ಲವಾಗಿ, ಅವೆಲ್ಲ ಫೇಸ್‍ಬುಕ್, ವಾಟ್ಸಾಪ್ ಮುಂತಾದವುಗಳ ರೋಚಕ ರೋಮಾಂಚಕ ಆಲಿಂಗನಕ್ಕೆ ಸಿಲುಕಿ ಇದ್ದರೂ ಇಲ್ಲವೆಂಬಂತೆ ಬದುಕು ಮಾಡುತ್ತಿರುವವರ ಸಂಖ್ಯೆ ಬೆಳೆಯುತ್ತಾ ಮನುಷ್ಯ ಕೊನೆಗೊಳ್ಳುವ ಮೊದಲು ಮಾನವೀಯತೆಯೇ ಕೊನೆಗೊಳ್ಳುತ್ತದೇನೋ ಎಂಬ ಆತಂಕವುಂಟಾಗುತ್ತಿದೆ.

ನೀವು ಹೇಗಿರಬೇಕು ಏನು ಮಾಡಬೇಕು ಎಂದು ನಿಮ್ಮನ್ನು ಕೇಳುವ ಬದಲು

ನಾವು ನಿಮಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತೇವೆ. ದಯಮಾಡಿ ಆ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸಿ.

1. ನೀವು ಬಚ್ಚಿಟ್ಟುಕೊಂಡಿರುವ ಕೋಟಿ ಕೋಟಿ ಹಣವನ್ನು ನೀವು ಹೇಗೆ ಖರ್ಚು ಮಾಡುತ್ತೀರಿ?  ಆ ಎಲ್ಲ ಮೊತ್ತವನ್ನು ಖರ್ಚು ಮಾಡಿ ಮುಗಿಸಲು ನಿಮ್ಮಿಂದ ಸಾಧ್ಯವೆ?

2. ನಿಮ್ಮ ಮಕ್ಕಳಿಗೆ ಹಂಚಿದರೆ ಅವರು ಹಣ ಪೋಲು ಮಾಡುವುದಿಲ್ಲವೆ? ಹಣವನ್ನು ಹಾಳುಮಾಡಿಕೊಳ್ಳುವುದಿಲ್ಲವೆ?

3. ಆ ಹಣವನ್ನು ಒಳ್ಳೆಯ ಕರ್ಮಕ್ಕೆ ಬಳಸಲು ನಿಮ್ಮಿಂದಾಗದೆ?

4. ಲಕ್ಷಗಟ್ಟಲೆ ಕೋಟಿಗಟ್ಟಲೆ ಖರ್ಚು ಮಾಡಿ ಯಾಕೆ ಮನೆ ಕಟ್ಟಿಸಿಕೊಳ್ಳುತ್ತೀರಿ? ಅದರಿಂದ ಏನು ಪ್ರಯೋಜನವಿದೆ?

5. ಬೇರೆ ಬೇರೆ ವಿಧಾನದಿಂದ ನೀವು ಅನ್ಯಾಯವಾಗಿ ಸಂಗ್ರಹಿಸಿ ಬಚ್ಚಿಟ್ಟುಕೊಂಡಿರುವ ಹಣ ಮಾತ್ರವಲ್ಲ, ಎಲ್ಲದರ ಅಂದರೆ ಸರಿ ದಾರಿಯಲ್ಲಿ ಸಂಪಾದಿಸಿದ ಎಲ್ಲದರ ಮೇಲೂ ತೆರಿಗೆ ವಸೂಲು ಮಾಡುವ ಅಧಿಕಾರಿಗಳು ಕೈಯಿರಿಸುವುದಿಲ್ಲವೆ? ನಿಮ್ಮನ್ನು ದಿನಗಟ್ಟಲೆ, ತಿಂಗಳುಗಟ್ಟಲೆ ಸೆರೆಮನೆಯಲ್ಲಿ ಇರಿಸುವಾಗ ನಿಮಗೆ, ನಿಮ್ಮ ಹೆಂಡತಿ ಮಕ್ಕಳಿಗೆ ಅಪಾರವಾದ ದುಃಖ ವೇದನೆ ಉಂಟಾಗುವುದಿಲ್ಲವೆ? ಅದಕ್ಕೆ ಕಾರಣ ನೀವೇ ಅಲ್ಲವೆ? ಈ ಘೋರವಾದ ನೋವಿಗೆ ಮತ್ತು ದುಃಖಕ್ಕೆ ನೀವೇ ಕಾರಣವಲ್ಲವೆ?

6. ಎಷ್ಟು ಕಾಲ ನೀವು ಈ ದುಸ್ಥಿತಿಯಲ್ಲಿ ದಿನ ದೂಡುತ್ತೀರಿ? ತನ್ನ ಹೆಂಡತಿ, ಮಕ್ಕಳಿಗೆ ತನ್ನಿಂದ ಎಂಥ ದುಃಖವಾಯಿತು ಎಂದು ನೀವು ನಿರಂತರ ಪರಿಪಿಸುವುದಿಲ್ಲವೆ? ಎಲ್ಲಿ ಕಾಣುತ್ತೀರಿ ನೀವು ಬದುಕಿನ ಸಂತಸ?

‍ಲೇಖಕರು avadhi

September 27, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: