ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆಲವು ಹನಿಗವನಗಳು…

ಎಚ್ ಕೆ ಶರತ್

ಬಿಕನಾಸಿ ಬಣ್ಣಗಳೆಲ್ಲ
ಬಿದ್ದುಕೊಂಡಿವೆ ಕಾರ್ಗತ್ತಲಲಿ…
ಕಪ್ಪು ಮಾತ್ರ
ಕುಣಿಯುತ್ತಿದೆ
ಗೆದ್ದ ಸಂಭ್ರಮದಲಿ!

ದುಗುಡದ ದಡದ ಮೇಲೆ
ಸಾಗಿ ಬಂದವನು
ನಡು ಬೀದಿಯ
ನಿರ್ಭಾವುಕತೆ ಕಂಡು
ನಗುತ್ತಿದ್ದಾನೆ


ನೋವು ಮುರಿದುಕೊಂಡು ಬಿದ್ದ ರಾತ್ರಿ
ಭಾವುಕತೆಯ ಊರಲ್ಲಿ ಮಲಗಿದ್ದವನು
ನಾನೊಬ್ಬನೆ
ಬೆಳಕರಿದ ಮೇಲೆ ಎದುರಿದ್ದದ್ದು
ಅದೇ ವಾಸ್ತವ

ಗೊಂದಲದ ಗೆರೆಗಳ
ಮಡಿಲಲ್ಲಿ ಮಲಗಿದ
ಬದುಕಿನ ರೇಖೆ
ಆಕಾರ ಕಳೆದುಕೊಂಡು
ವಿಕಾರವಾಗುತ್ತಿದೆ

ನೆಪದ ಪರದೆ ಹಿಂದೆ
ಹೇಳಲಾಗದ ಮಾತು
ಮನದ ಚಾದರದ ತುಂಬ
ತುಂಬಿಕೊಂಡಿವೆ ತೂತು

‍ಲೇಖಕರು G

14 November, 2013

4 Comments

  1. Anonymous

    excellent,,,, each one of them

  2. kajooru sathish

    very nice!

  3. mmshaik

    chennaagide..!

  4. bharathi b v

    tuuuuuumba chennagide ….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading