ಕಿರುಪದ್ಯಗಳು

ಬದುಕು ದಡಸೇರಬಹುದೆ?
ಸಾವಿನ ನೆರಳು ಬೆನ್ನ ಹಿಂದೆ;
ಅಗಾಧ ಕಡಲು ಕಣ್ಣ ಮುಂದೆ
*
ಟೈಮು ಖರಾಬಾಗಿದೆ
ಪ್ರೀತಿಯಿಂದ ಎತ್ತಿಟ್ಟ ಹೂವಿಗೂ
ವಿಷದ ನಾಲಿಗೆ ಮೂಡಿದೆ.
*
ಮನಸ್ಸು ಗಾಯಗೊಂಡಿತ್ತು;
ಚೇತರಿಸಲು ಮುಲಾಮು ಸೋಕದ
ಪುಟ್ಟ ಬೆರಳೂ ಸಾಕಿತ್ತು!
*
ಸೂರಿಗೆಂದು
ಗಳ ಕಡಿದು ತಂದೆ;
ನನ್ನ ಹೆಣದ ಚಟ್ಟಕ್ಕಾಯಿತು.






Chennagide…
ತುಂಬ ಚೆನ್ನಾಗಿವೆ.
super manju
Manjina hanigalante allve baduku