ಅಕ್ಕಿಮಂಗಲ ಮಂಜುನಾಥ
ಗುಮ್ಮ

‘ಯಾರೇ ಅವನು ಗುಮ್ಮ?
ಅವ ಹೇಗಿರ್ತಾನೆ , ಅಮ್ಮ? ‘
ಹೇಗಿರ್ತಾನಾ? ಕೇಳು
ಅವ ಆಗಸದೆತ್ತರ ಆಳು
ತಲೆಯಲಿ ಇರ್ತವೆ ಕೋಡು
ಕಾಲಲಿ ಮುಳ್ಳಿನ ಜೋಡು
ಉದ್ದುದ್ದ ಕೂದಲ ಜಡೆ
ಕೂದಲೇ ಅವನಿಗೆ ಕೊಡೆ
ಕಣ್ಣು ಕೆಂಡದ ಉಂಡೆ
ಮೂಗೋ ಜಾರೋ ಬಂಡೆ
ಬಾಯಲ್ಲಿ ಇಷ್ಟುದ್ದ ಕೋರೆ
ನೋಡಲು ಆಗದು ಮೋರೆ
ಕಾಲ್ಗಳು ಹಿಂದು ಮುಂದು
ಕಂಡರೆ ಮಾಡುವೆ ಒಂದು
ಕೈಗಳು ಅವನಿಗೆ ನೂರು
ಸೂಜಿಗಳಂಥಾ ಉಗುರು
ಪ್ರತಿ ಕೈಯಲ್ಲೂ ಇಕ್ಕಳ
ಹಿಡಿಯಲು ತುಂಟ ಮಕ್ಕಳ
ನೀ ಹೀಗೇ ಕಾಡಿದರೆ ನನ್ನ
ಕರೀತೀನಿ ಅವನನ್ನ.’
ಹೋತನ ಗಡ್ಡ

ಒಂದಾನೊಂದು ಕಾಲದಲ್ಲಿ
ಮಲೆನಾಡಿನ ಈ ಕಾಡಿನಲ್ಲಿ
ಇದ್ದನು ಹೋತನ ತಾತ
ತಾತನ ಹೆಂಡತಿ ಮಕ್ಕಳನೆಲ್ಲ
ಕೊಂದು ತಿಂದನು ಸಿಂಹಿಣಿ ನಲ್ಲ
ಆಗಲೆ ಮಾಡಿದ ಇವ ಶಪಥ
ನನ್ನಯ ಮನೆಯವರೆಲ್ಲರ ತಿಂದನೆ ?
ನೋಡಿಯು ನಾನೂ ಹಾಗೆಯೆ ಬಿಡುವೆನೆ ?
ಸಾವಿರ ಸಿಂಹವ ಕೊಲ್ಲುವೆನು
ಕೊಲ್ಲದೆ ಹೋದರೆ ಗಂಡೇ ಅಲ್ಲ
ನನ್ನೀ ಗಡ್ಡವ ತರಿಯುವುದಿಲ್ಲ’
ಎಂದು ಶಪಥವ ಮಾಡಿದನು
ಒಂದೂ ಸಿಂಹವ ಕೊಲ್ಲಲೆ ಇಲ್ಲ
ಹೀಗೆಯೆ ಕಳೆಯಿತು ಕಾಲವು ಎಲ್ಲ
ಸತ್ತೇ ಹೋದನು ಆ ತಾತ
ನಡೆದೇ ಹೋದರು ಆ ಕತೆ ಎಂದೋ
ಬೋಳಿಸಲಾರದೆ ಗಡ್ಡವ ನಿಂದೂ
ಉಳಿದಿಹ ಈಗಲೂ ಈ ಹೋತ
ಬೆಕ್ಕಿನ ಕನಸು
ಅಟ್ಟದ ಮೇಲೆ
ಮಲಗಿದ ಬೆಕ್ಕು
ಕನಸನು ಕಾಣುತ್ತಿತ್ತು
ಕನಸಿನ ಒಳಗೆ
ಬೆಕ್ಕಿನ ಮುಂದೆ
ಇಲಿಯೊಂದಾಡುತ್ತಿತ್ತು
ನಿಜವಿದು ಎಂದು
ತಿಳಿದಾ ಬೆಕ್ಕು
ಚಂಗನೆ ಹಾರಿತ್ತು
ಹಾರಿದ ರಭಸಕೆ
ನೆಲದಲಿ ಬೀಳುತ
ಚಿಟ್ಟನೆ ಚೀರಿತ್ತು
ನೋವಿಗೆ ನೊಂದು
ಇಲಿಯನು ಬೈದು
ಮತ್ತೆ ಮಲಗಿತ್ತು
ಆಗಲೆ ಇಲಿಯು
ಆಕಡೆ ಬಂದು
ತಿಳಿಯದೆ ಒದ್ದಿತ್ತು
ಕಂಡರೂ ಬೆಕ್ಕು
ಕನಸೇ ಎಂದು
ಸುಮ್ಮನೆ ಮಲಗಿತ್ತು
ಇಲಿ ಇದ ನೋಡಿ
ಬಿರ ಬಿರ ಓಡಿ
ಬಿಲದಲಿ ಅವಿತಿತ್ತು.






ನಿಮ್ಮ ಮೂರೂ ಮಕ್ಕಳ ಪದ್ಯಗಳು ಮುದ್ದಾಗಿವೆ; ಅಭಿನಂದನೆಗಳು.
ಹಿರಿಯರಾದ ಬೋಳುವಾರು ಅವರಿಗೆ ಕೃತಜ್ಞತೆಗಳು.
ತಮ್ಮ ಇ ಮೇಲ್ ವಿಳಾಸವನ್ನು ನೀಡುತ್ತೀರಾ ?
ನನ್ನ ವಿಳಾಸ:manjumangala72@gmail.com
very fine
Olleya padyagalu…
Chennagive Chennagive..
ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು.
-ಅಕ್ಕಿಮಂಗಲ ಮಂಜುನಾಥ
muuruu padyagaliguu abhinandanegaLu. muddagive
wow, really beautiful….