ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಕೆಂಪು ಬಸ್ಸಿನ ಪಯಣ…’ – ಸೌಮ್ಯ ಕಳಸ

ಕೆಂಪು ಬಸ್ಸಿನ ಪಯಣ… 

ಸೌಮ್ಯ ಕಳಸ

ಸುಮ್ನೆ ಹೀಗೆ ಅನಿಸಿದ್ದು…

ಈ ನೈಟ್ ಬಸ್ಸುಗಳು ಬಂದ ನಂತರ ನಾವೆಲ್ಲಾ ಎಷ್ಟೊಂದು ಸುಂದರ ಕ್ಷಣಗಳನ್ನ ಕಳೆದುಕೊಂಡುಬಿಟ್ಟಿದ್ದೀವಲ್ಲಾ ಅಂತ…

ಮೊದಲೆಲ್ಲ ಅಜ್ಜಿ ಮನೆಗೆ ಹೋಗೋದು ಅಂದ್ರೆ ವರದ ಮೊದಲೇ ಸಂಭ್ರಮ ಶುರು. ನಮ್ಮಜ್ಜಿ ಮನೆ ಮೈಸೂರು. ನಮ್ಮೂರಿಂದ ಮೈಸೂರಿಗೆ ಹೋಗೋಕೆ ಇದ್ದಿದ್ದು ಎರಡೇ ಡೈರೆಕ್ಟ್ ಬಸ್ಸುಗಳು. ಎರಡೂ ಕೆಂಪು ಬಣ್ಣದ ಕೆಎಸ್ಸಾಟರ್ಿಸಿ ಬಸ್ಸುಗಳೇ. ಬೆಳಗ್ಗೆ ಮುಂಚೆ ಏಳು ಗಂಟೆ ಸುಮಾರಿಗೆ ಮನೆ ಎದುರಿನ ಬಸ್ ಸ್ಟಾಪಿನಲ್ಲಿ ಕೆಂಪು ಬಸ್ಸು ಹತ್ತಿದ್ರೆ ಮೈಸೂರು ತಲುಪೋ ಹೊತ್ತಿಗೆ ಸೂರ್ಯ ಮನೆಗೆ ಹೋಗೋಗೆ ರೆಡಿಯಾಗಿರ್ತಿದ್ದ. ಇನ್ನು ಅಲ್ಲಿಂದ ಆಟೋದಲ್ಲಿ ಅಜ್ಜಿ ಮನೆ ತಲುಪೋ ವೇಳೆಗೆ ಕತ್ತಲಾಗಿ, ಕರೆಂಟೂ ಹೋಗಿ ಮನೆಯ ತುಂಬೆಲ್ಲಾ ಮೊಂಬತ್ತಿಗಳನ್ನ ಹೊತ್ತಿಸಿಯಾಗ್ತಿತ್ತು. ಒಂದಿಡೀ ದಿನ ಬರೀ ಪ್ರಯಾಣಕ್ಕೇ ಮೀಸಲಾಗಿರ್ತಿದ್ದ ಕಾಲ ಅದು. ಈಗ್ಲೂ ಹೆಚ್ಚೇನೂ ಬದಲಾಗಿಲ್ಲ… ಬಸ್ಸುಗಳ ಸಂಖ್ಯೆ ಸ್ವಲ್ಪ ಜಾಸ್ತಿಯಾಗಿರೋದು ಹೌದಾದ್ರೂ ಇವತ್ತಿಗೂ ಇರೋ ಅವೇ ರಸ್ತೆಗಳ ದಯೆಯಿಂದ ಕನಿಷ್ಟ ಏಳೆಂಟು ಗಂಟೆಗಳ ಪ್ರಯಾಣವಂತೂ ಇದ್ದಿದ್ದೇ. ಆದ್ರೆ ಈಗಿನ ಸೂಪರ್ ಸ್ಪೀಡ್ ಜಮಾನಾದಲ್ಲಿ ಒಂದಿಡೀ ದಿನವನ್ನ ಬಸ್ಸಿನಲ್ಲಿ ಕಳೆಯುವಷ್ಟು ಪುರುಸೊತ್ತು ಯಾರಿಗಿರುತ್ತೆ ಹೇಳಿ. ಅದಕ್ಕಾಗಿ ಶುರುವಗಿದ್ದೇ ನೈಟ್ ಬಸ್ಸುಗಳು. ಮೊಟ್ಟಮೊದಲ ನೈಟ್ ಬಸ್ಸು ನಮ್ಮೂರಿಂದ ಹೊರಟಾಗ ಎಲ್ಲರಿಗೂ ಅದೇನೋ ರೋಮಾಂಚನ. ರಾತ್ರಿ ಬಸ್ಸು ಹತ್ತಿ ಮಲಗಿಬಿಟ್ರೆ ಆಗೋಯ್ತು. ಬೆಳಕು ಹರಿಯೋ ಹೊತ್ತಿಗೆ ಊರು ಬಂದುಬಿಟ್ಟಿರುತ್ತೆ. ನಿದ್ದೆನೂ ಆಯ್ತು, ಮಪ್ರಯಾಣದ ಗೋಳೂ ಇಲ್ಲ. (ಪ್ರಯಾಣವನ್ನ ಗೋಳು ಅನ್ನೋದಿಕ್ಕೆ ಒಂದು ಕರಣ ಇದೆ. ಈ ಹಗಲು ಹೊತ್ತಿನ ಬಸ್ಸುಗಳು ಬಹುತೇಕ ಬಾರಿ ದಾರಿ ಮಧ್ಯದಲ್ಲಿ ಕೈಕೊಟ್ಟು ಅದರ ರಿಪೇರಿಗೇ ಅನೇಕ ಗಂಟೆಗ ಕಾಲ ಹಿಡಿಯುತ್ತಿತ್ತು. ಈ ಸಮಯ ನಿಂತಿರೋ ಬಸ್ಸಿನೊಳಗೆ ಸುಮ್ಮನೇ ಕೂತಿರೋದು ನಿಜಕ್ಕೂ ಒಂದು ನರಕ.) ರಾತ್ರಿಯ ಬಸ್ಸುಗಳಿಂದ ಎಷ್ಟೊಂದು ಸಮಯ ಉಳಿಯುತ್ತಲ್ಲ ಅನ್ನೋ ಸಂಬ್ರಮ ಬೇರೆ. ಕ್ರಮೇಣ ಈ ನೈಟ್ ಬಸ್ಸುಗಳಿಗೆ ಜನ ಎಷ್ಟರ ಮಟ್ಟಿಗೆ ಒಗ್ಗಿಹೋಗಿದ್ದಾರೆಂದ್ರೆ ಹಗಲು ಹೊತ್ತಿನಲ್ಲಿ ಬೆಂಗಳೂರು, ಮೈಸೂರು ಥರದ ದೂರದೂರುಗಳಿಗೆ ಬಸ್ಸಿನಲ್ಲಿ ಪ್ರಯಾಣಿಸುವವರು ಅಂದ್ರೆ ಅವರು ಅನಕ್ಷರಸ್ಥರು ಅಂತಲೇ ಜನರ ಭಾವನೆ.

ಇದೆಲ್ಲಾ ಸರಿ… ಆದ್ರೆ ಈ ನೈಟ್ ಬಸ್ಸುಗಳು ಬಂದ ನಂತರ ನಾವು ಕಳಕೊಂಡಿದ್ದು ಏನು… ಪ್ರಯಾಣದ ಮಜಾ…

ಕಿಟಕಿ ಪಕ್ಕದ ಸೀಟಿಗಾಗಿ ಸದಾ ಜಗಳವಾಡುತ್ತಾ ಕೊನೆಗೂ ಅದು ಸಿಕ್ಕಾಗ ಆಗೋ ಆನಂದವೇ ಬೇರೆ. ಇನ್ನು ಬಸ್ಸು ರಷ್ ಇದ್ದರಂತೂ ಕಿಟಕಿ ಪಕ್ಕ ಕೂತಿರೋರೆಲ್ಲಾ ನಮ್ಮ ಸಂತೋಷವನ್ನ ಹಾಳುಮಾಡೋಕೆ ಅಂತಲೇ ಭೂಮಿ ಮೇಲೆ ಅವತರಿಸಿರೋ ವಿಲನ್ ಗಳ ಥರಾ ಕಾಣಿಸ್ತಿದ್ರು. ಕೆಲವೊಮ್ಮೆಯಂತೂ ಅವ್ರ ಬಳಿ ಹೋಗಿ ‘ನೀವು ಯಾವ ಸ್ಟಾಪಿನಲ್ಲಿ ಇಳೀತೀರಾ?’ ಅಂತ ಕೇಳಿಯೂ ಬಿಡ್ತಿದ್ವಿ. ನಂತರ ಕಿಟಕಿ ಪಕ್ಕ ಕೂತು ಅದ್ರ ಮೂಲಕ ನಮ್ಮೊಂದಿಗೇ ಚಲಿಸ್ತಾ ಇರೋ ಹೊರಗಿನ ದೃಶ್ಯಗಳನ್ನ ನೋಡೋ ಪುಳಕ ಅನುಭವಿಸಿಯೇ ತೀರಬೇಕು. ಊರು ಬರುವವರಗೆ ಆ ಕಿಟಕಿಯಿಂದ ಕಣೋಧಷ್ಟೇ ಜಗತ್ತು ತಿಂಡಿಗೆ, ಊಟಕ್ಕೆ ಅಂತ ನಿಲ್ಲಿಸಿದಾಗ ಎಲ್ಲರೂ ಇಳಿದು ಹೋಗ್ತಾ ಇದ್ರೆ ನಾವಂತೂ ಸೀಟು ಬಿಟ್ಟು ಅಲ್ಲಾಡ್ತಿಲರ್ಿಲ್ಲ. ನಾವು ಬರೋದ್ರೊಳಗೆ ಬೇರೆ ಯಾರಾದ್ರೂ ಆ ಸೀಟನ್ನ ಆಕ್ರಮಿಸಿಕೊಂಡುಬಿಟ್ರೆ ಅನ್ನೋ ಭಯ. ಪ್ರಯಾಣಕ್ಕೆ ಅಂತಲೇ ಬ್ಯಾಗಿನಲ್ಲಿ ಇರುತ್ತಿದ್ದ ತಿಂಡಿಗಳು, ಹಣ್ಣುಗಳನ್ನ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಅಷ್ಟೇ ಅಲ್ಲ, ಅಜ್ಜಿ ಮನೆಗೆ ಹೋಗೋದು ಅಂದ್ರೆ ಕನಿಷ್ಟ ಒಂದು ತಿಂಗಳಾದ್ರೂ ಅಲ್ಲೇ ಠಿಕಾಣಿ ಹೊಡೀತಿದ್ವಿ. ಹಾಗಾಗಿ ಲಗೇಜೂ ಜೋರಾಗೇ ಇತರ್ಿತ್ತು. ಹಾಗಾಗಿ ನಾವು ಕೂತಿತರ್ಾ ಇದ್ದ ಸೀಟಿನ ಜಾಗಕ್ಕೆ ಅವನ್ನೆಲ್ಲಾ ಸರಿಯಾಗಿ ಜೋಡಿಸಿ ಇಟ್ಟುಕೊಳ್ತಾ ಇದ್ವಿ. ಅದನ್ನ ಬದಲಾಯಿಸೋ ಮತೇ ಇಲ್ಲ. ಆ ಒಂದು ದಿನದ ಮಟ್ಟಿಗೆ ಆ ಸೀಟು ನಮ್ಮದೇ ಸ್ವಂತ ಆಸ್ತಿ ಅನ್ನುವಂತಾಗಿಬಿಡ್ತಿತ್ತು.

ಅಷ್ಟಕ್ಕೂ ಒಂದಿಡೀ ದಿನ ಕಿಟಕಿಯನ್ನ ಯವ್ದೇ ಕಾರಣಕ್ಕೂ ಮುಚ್ಚದೆ ಹೊರಗೆ ನೋಡುವಂಥದ್ದು ಏನಿತ್ತು ಅನ್ನೋ ಪ್ರಶ್ನೆ ಎದುರಾಗ್ಬಹುದು. ಅಲ್ಲಿ ವಿಶೇಷವಾಗಿ ಏನೂ ಇತರ್ಿಲರ್ಿಲ್ಲ. ಆದ್ರೆ ನಮಗೆ ಅದು ವಿಶೇಷ ಅನುಭವವಾಗಿತ್ತು. ವರ್ಷದಲ್ಲಿ ಕೆಲವೇ ಕೆಲವು ಬಾರಿ ಬರೋ ಬಂಪರ್ ಆಫರ್ ಥರಾ. ಊರು ಬಿಟ್ಟ ಕೂಡ್ಲೇ ಸಾಲಾಗಿ ಒಂದಷ್ಟು ಮನೆಗಳು ಕಾಣ್ತಿದ್ವು. ಬಗೆಬಗೆಯ ಪರಿಚಿತ ಮತ್ತು ಅಪರಿಚಿತ ಮನೆಗಳು ಮುಂದೆ ಹೋಗ್ತಾ ಇದ್ಹಾಗೆ ಬರೀ ಕಾಡು ಮೇಡುಗಳದ್ದೇ ಸಾಮ್ರಾಜ್ಯ. ಎಲ್ಲೆಲ್ಲೂ ಹಸಿರು ತೋಟಗಳು, ಗದ್ದೆಗಳು, ಕಾಡು… ಮಧ್ಯದಲ್ಲೆಲ್ಲೋ ಧುತ್ತನೆ ಎದುರಾಗೋ ನೀರಿನ ಝರಿ… ಆದ್ರೆ ಪ್ರತಿಯೊಂದು ಚಿತ್ರವೂ ಕೆಲವೇ ಸೆಕೆಂಡುಗಳಷ್ಟು ಸಮಯ ಮಾತ್ರ. ಮತ್ತೆ ಬೇಕಂದ್ರೂ ಸಿಗ್ತಿಲರ್ಿಲ್ಲ. ಮತ್ತೆ ಮುಂದಿನ ಊರು ಬಂದಾಗ ಮತ್ತೆ ಮನೆಗಳು, ಅಂಗಡಿಗಳು, ಕೆಲವೊಮ್ಮೆ ದಾರಿಯಲ್ಲಿ ಕಾಣೋ ಯಾವುದೋ ಮಕ್ಕಳು ಸುಮ್ಮನೆ ಕೈಬೀಸುತ್ತಿದ್ದವು. ನಾವೂ ಕೂಡ ಅವ್ರು ನಮಗೆ ಬಹಳ ಪರಿಚಿತರು ಅನ್ನೋ ಥರಾ ಪ್ರತಿಯಾಗಿ ಕೈಬೀಸ್ತಾ ಇದ್ದೆವು. ಹಾಸನ ದಾಟಿದ ನಂತರದ ಚಿತ್ರಗಳು ಅಷ್ಟೇನೂ ಚೆನ್ನಾಗಿತರ್ಿಲ್ಲಿಲ್ಲ. ಕಾಡು ಮುಗಿದು ಹೋಗಿತರ್ಿತ್ತು ಇನ್ನು ಬರೀ ಬಯಲಿನ ಬಿಸಿಗಾಳಿ. ಬಹುಶಃ ನಾವು ಪ್ರಯಾಣಿಸೋ ಸಮಯಕ್ಕೆ ಗದ್ದೆ ಕೆಲಸವೆಲ್ಲಾ ಮುಗಿದು ಹೋಗಿತರ್ಿತ್ತು ಅನ್ಸುತ್ತೆ. ಒಣಗಿದ ನೆಲದಿಂದ ಧೂಳು, ಬಿಸಿಗಾಳಿ ಬಿಟ್ರೆ ಬೇರೇನೂ ಇತರ್ಿಲರ್ಿಲ್ಲ. ಆಗ ಸಾಮಾನ್ಯವಾಗಿ ನಾವು ನಿದ್ದೆ ಮಾಡಿತರ್ಿದ್ವಿ. ಎಚ್ಚರವಾದಾಗ ಮೈಸೂರು ಹತ್ತಿ ಹತ್ತಿರ ಬತರ್ಾ ಇದೆ ಅನ್ನೋ ಎಕ್ಸೈಟ್ಮೆಂಟ್ ಇತರ್ಿತ್ತು. ದೊಡ್ಡ ದೊಡ್ಡ ಕಟ್ಟಡಗಳು, ಬೃಹದಾಕಾರದ ಅಡ್ವಟರ್ೈಸ್ಮೆಂಟಿನ ಹೋರ್ಡಿಂಗ್ ಗಳು ಕಾಣ್ತಾ ಇದ್ವು. ಅವುಗಳನ್ನ ಓದೋದೇ ಒಂದು ಸಂಭ್ರಮ. ಅಲ್ಲಿ ರಸ್ತೆ ಚೆನ್ನಾಗಿತರ್ಿದ್ರಿಂದ ಬಸ್ಸು ವೇಗವಾಗಿ ಚಲಿಸ್ತಿತ್ತು. ಹಾಗಾಗಿ ಓದೋಕೆ ಹೆಚ್ಚು ಸಮಯ ಸಿಗ್ತಿಲರ್ಿಲ್ಲ. ಟಿವಿ ಟವರ್ ಕಾಣ್ತು ಅಂದ್ರೆ ಮೈಸೂರು ಬಂತು ಅಂತ ಅರ್ಥ. ಆಗ ಶುರು ನಮ್ಮ ಲಗೇಜು ರೆಡಿ ಮಾಡ್ಕೊಳ್ಳೋ ಕೆಲ್ಸ.

ಬಸ್ ಸ್ಟ್ಯಾಂಡ್ ಬಂದ ಕೂಡ್ಲೇ ಧಡಭಡ ಬಸ್ಸಿಳಿದು ಲಗೇಜು ಸಮೇತ ಆಟೋ ಹತ್ತಿ ಅಜ್ಜಿ ಮನೆ ತಲುಪಿದ್ವಿ ಅಂದ್ರೆ ಅಲ್ಲಿ ಹಚ್ಚಿಟ್ಟ ಮೋಂಬತ್ತಿಗಳು ಗಾಳಿಗೆ ತಾರಾಡುತ್ತಾ ನಮ್ಮನ್ನ ಸ್ವಾಗತಿಸ್ತಾ ಇದ್ವು. ಬೊಚ್ಚುಬಾಯಿಯ ತಾತ ನಮ್ಮನ್ನ ನೋಡಿ ‘ಎಷ್ಟೊತ್ತಿಗೆ ಬಸ್ಸು ಹತ್ತಿದ್ರಿ ಊರಿಂದ?’ ಅನ್ನೋ ಮಾತಿನಿಂದ ನಾವೂ ನಮ್ ಕೆಂಪು ಬಸ್ಸಿನ ಪ್ರವರ ಹೇಳೋಕೆ ಶುರು ಮಾಡ್ತಿದ್ವಿ.

‍ಲೇಖಕರು G

17 December, 2012

1 Comment

  1. Kiran Shetty

    🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading