ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಕೂಡಿಸಿದ ಕೈ ಬೆರಳು ಚೂರು ದೂರ ಸರಿದು..’ – ಪ್ರಜ್ಞಾ ಮತ್ತೀಹಳ್ಳಿ

ಒಂದು ಬೊಗಸೆ ನೀರು 

ಪ್ರಜ್ಞಾ ಮತ್ತೀಹಳ್ಳಿ

ಕಡಲು ಸಾಕಿಕೊಂಡ ಹುಡುಗ ನೀನು

ನಿನ್ನ ಮೀಸೆಯ ಇಶಾರೆಗೆ

ಏರಿಳಿವ ನೂರು ನೂರು

ನೊರೆನೊರೆ ಹೆದ್ದಲೆಗಳು

ಹುಬ್ಬೇರಿಸಿದರೆ ಉಬ್ಬರ

ಕಣ್ಮುಚ್ಚಿದರೆ ಇಳಿತ

ಮಂದಹಾಸದಗುಂಟ

ಹುಣ್ಣಿಮೆಯ ಪೂರ್ಣಚಂದ್ರ

.

ಚಾಚಿದ ತೋಳ ಅಳಿವೆಗೆ

ಬಣ್ಣ ವಾಸನೆ ರುಚಿ ಹೆಸರು

ಅಳಿಸಿಕೊಂಡು ಕೂಡುವ

ಎಲ್ಲೆಲ್ಲಿಯದೋ ಹೊಳೆಗಳು

ಎದೆಯ ರೇವೆಯಲಿ ಹಾಯಿದೋಣಿ

.

ಅವರವರ ಸ್ವಪ್ನಬಲೆಗೆ

ಮೀನು,ಶಂಖ, ಮುತ್ತು

ನೆನಪ ನಾವೆಯೂ ಬದುಕು ಹೆಕ್ಕುವ ತುತ್ತು

ಹೆಜ್ಜೆಗುರುತುಗಳೆಲ್ಲ ಅಳಿಸಿ

ಹುಡಿ ಮರಳು ಹೊಳೆವ ಹೊತ್ತು

.

ಪಾತ್ರೆ ಕಳೆದು ಬಿಂದಿಗೆಯೊಡೆದು

ಕೂಡಿಸಿದ ಕೈ ಬೆರಳು

ಚೂರು ದೂರ ಸರಿದು

ಸುರಿದು ಹೋಗುವ ಕ್ಷಣ

ಹನಿಸುತ್ತೀಯಾ ಹನಿ ಹನಿ ನೀರು

 

‍ಲೇಖಕರು G

15 December, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading