ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೂಡಿಟ್ಟಿದ್ದೇನೆ ಒಂದಷ್ಟು ಕನಸುಗಳ ಈ ಶ್ರಾವಣದ ಮಳೆಗೆ…

– ಶ್ರೀನಿವಾಸ ಎಂ


1
ಬಿರು ಮಳೆಯ ರಭಸ ಜೋರಾದಾಗಲೆಲ್ಲ
ಜಗಲಿಯಲ್ಲಿ ಕೂತು, ಮಾಡಿನ ನೀರಿಗೆ
ಪಾದ ತಾಕಿಸುವ ಪುಳಕ.
 
2
ಸಿಡಿಲು-ಮಿಂಚಿನ ಭಯವಿಲ್ಲ,
ಕಣ್ಣು ತೆರೆದಿದ್ದರೂ ಬೀಳುವ ನೂರು ಕನಸುಗಳ
ನನಸಾಗಿಸುವ ಹಠದ ಭಾರವಿಲ್ಲ
 
3
ಚಂದ್ರ ಕೈ ಕೊಟ್ಟ ಇರುಳು,
ಭುವಿ ನಡುಗಿಸುವ ಚಂಡಿ ಮಳೆಯ ನಡುವೆ
ನಿನ್ನ ದಾರಿಯ ನೆನೆವ ಸುಖದ ಸಂಕಟ
 
4
ಆಗಾಗ್ಗೆ ಮುಖ ತೋರಿಸಿ ಮರೆಯಾಗುವ ಸೂರ್ಯ,
ನಿನ್ನ ನೆನಪುಗಳಿಗಿಂತ ವಾಸಿ,
ನೆನೆದ ಮನಗೊಂದಿಷ್ಟು ಬೆಚ್ಚಗೆಯ ಸ್ಪರ್ಶ
 
4
ಕಾಲ ಚಕ್ರವ ಹಿಂದೆ ತಿರುಗಿಸುವ ಭ್ರಮೆ
ಕಾಗದದ ದೋಣಿಯ ಹಿಡಿದು
ನಿನಗಾಗಿ ಹುಡುಕಾಟ
 
5
ವಾಸ್ತವದ ಅರಿವಾದಾಗಲೆಲ್ಲ
ನೆನಪಾಗುತ್ತದೆ, ಈ ಮುಂಗಾರಿನ ಭವಿಷ್ಯ
ಶ್ರಾವಣದಲ್ಲೂ ದುರ್ಬಲ ಮಳೆ ಸಾಧ್ಯತೆ
 

‍ಲೇಖಕರು G

31 July, 2014

5 Comments

  1. smitha Amrithraj

    chendada male hanigalu.

  2. DVK

    super shrini sir

  3. mmshaik

    chennaagide..

  4. ಪ್ರಕಾಶ ಬಿ. ಜಾಲಹಳ್ಳಿ

    KAVITE Channagide sir

  5. SHRINIVASA M

    Thanks for all the readers and appreciations
    Shrinivasa M,

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading