ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಸ್ತಿಯಲ್ಲಿ ಕುಣಿದಿದ್ದು ಮೈಯ್ಯೋ.. ಮನಸೋ?

ಸಿದ್ರಾಮ್ ಪಾಟೀಲ

ನನ್ನ ಕಣ್ಣ ಕನದಲ್ಲಿ ಅವಳ
ನೋಟದೊಂದಿಗೆ ಇಂದು ಕುಸ್ತಿ..
ಕಂಡ ಕನಸಿಗೆ, ಚಂದ ಮನಸಿಗೆ
ಸೊಗಸಿಗೆ ಬಿರುಸಿಗೆ ಒರಸಿಗೆ
ರೆಪ್ಪೆಗಳು ರೆಪ್ಪೆಗಳೊಂದಿಗೆ
ತುಟಿಗಳು ತುಟಿಗಳೊಂದಿಗೆ
ಯಾಕೆ ಕಾದಾಡಿದವೋ ಇನ್ನಷ್ಟೇ ತಿಳಿಯಬೇಕಿದೆ

ಎದೆಯ ಬಾರ ಈಗತಾನೆ ಇಳಿಯಿತು
ಬೆವರಿನೊಂದಿಗೆ ನೀರಾಗಿ
ಹರಿಯತೊಡಗಿತು ನದಿಯಾಗಿ
ಉಸಿರಿನ ಹುಟ್ಟುಹಾಕುತ್ತ
ನಾವೇ ದೋಣಿಯೇರಿ ಪಯಣಿಸಿದೆವು
ಎಲ್ಲಿಗೆ ಹೊರಟಿದ್ದೇವೆಂದು ಇನ್ನಷ್ಟೇ ತಿಳಿಯಬೇಕಿದೆ

ಆ ಉಸಿರು ಹೊರಡಿಸಿದ ಗಾಳಿ ಹೇಳಿತು
ಒಳಗೆ ಬೆಚ್ಚಗಿತ್ತು, ಹೊರಹಾಕಿದೆ ನೀ
ಅವಳಿಗೂ ಹೇಳಿಬಿಡು ಉಸಿರೆಸೆಯಲು
ನನ್ನ ಜತೆಗಾತಿ ಬಂದರೆ ನಾನೂ ಬದುಕುವೆ! ಎಂದು..

‌ನನಗೇನೋ ಗೊಂದಲ..
ಕುಸ್ತಿಯಲ್ಲಿ ಕುಣಿದಿದ್ದು ಮೈಯ್ಯೋ.. ಮನಸೋ?
ದಣಿವಂತೂ ಎರಡಕ್ಕೂ ಆಗಿಲ್ಲ!!

ಕನ ಮತ್ತೆ ಕಣ್ಣೋಟದ್ದು ಅಂತ ಅರಿವಾಯಿತು..
ಈಗ ತುಸು ಸಮಾದಾನ..
ಕುಸ್ತಿ ಹೇಗಿತ್ತೆಂದು ಕಣ್ಣುಗಳೇ ಹೇಳಬೇಕೀಗ..
ರೆಪ್ಪೆಗಳು ತುಟಿಗಳಿಗೇನು ಕೆಲಸ?
ಅವಿನ್ನೂ ಕನದಲ್ಲೇ ಇವೆ.

 

‍ಲೇಖಕರು avadhi

14 February, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading