ಕನ್ನಡದ ಮನಸ್ಸನ್ನು ಪೂರ್ಣಚಂದ್ರ ತೇಜಸ್ವಿ ಇನ್ನಿಲ್ಲದಂತೆ ಆಳುತ್ತಿರುವುದು ಸ್ಪಷ್ಟ. ತೇಜಸ್ವಿ, ಅವರ ಪಾತ್ರಗಳು, ಅವರ ಊರು, ಅವರ ಬೇಟೆ, ಅವರ ಗೆಳೆಯರು, ಅವರ ಮನೆಮಂದಿ ಎಲ್ಲರೂ ಕನ್ನಡದ ಮನಸ್ಸಿಗೆ ಅತಿ ಆಪ್ತರೇ. ತೇಜಸ್ವಿಯಷ್ಟೇ ಪ್ರೀತಿಯಿಂದ ಓದುಗರು ಈ ಎಲ್ಲರನ್ನೂ ಕಂಡಿದ್ದಾರೆ. ಇಷ್ಟು ಮಾತ್ರ ಅಲ್ಲ ಎಂಬುದನ್ನು ನಾವು ಒಡ್ಡಿದ ಕ್ವಿಜ್ ತೋರಿಸಿಕೊಟ್ಟಿದೆ. ತೇಜಸ್ವಿ ಮನೆಯ ನಾಯಿ ಸಹಾ ಓದುಗರ ಮನದಲ್ಲಿ ಜಾಗ ಪಡೆದುಕೊಂಡಿದೆ. ಈ ಕ್ವಿಜ್ ಗೆ ಎಲ್ಲರೂ ತೋರಿಸಿದ ಪ್ರತಿಕ್ರಿಯೆ ಅಪೂರ್ವ.
ಬಿ ಆರ್ ಸತ್ಯನಾರಾಯಣ ಅವರು ಸುರಾನಾ ಕಾಲೇಜಿನಲ್ಲಿ ಹಿರಿಯ ಗ್ರಂಥಪಾಲಕರು. ನಂದೊನ್ಮಾತು ಬ್ಲಾಗ್ ಹೊಂದಿದ್ದಾರೆ. ಅವರು ಕಳೆದ ವರ್ಷ ತಮ್ಮ ಸಂಸಾರದೊಂದಿಗೆ ಮೂಡಿಗೆರೆಗೆ ಹೋಗಿ ಬಂದಿದ್ದರು. ‘ತೇಜಸ್ವಿಯವರ ಮನೆಯಲ್ಲಿದ್ದ ನಾಯಿ. ಇದರ ಹೆಸರು ‘ಮರಿ’. ಕರ್ವಾಲೋ ಕಾದಂಬರಿಯಲ್ಲಿ ಬರುವ ‘ಕಿವಿ’ ಸತ್ತ ಮೇಲೆ ಇದು ತೇಜಸ್ವಿಯವರ ಮನೆ ಸೇರಿ ಹನ್ನೆರಡು ವರ್ಷವಿತ್ತು. ಮೂಡಿಗೆರೆಯಲ್ಲಿ ನಡೆದ ಡಾಗ್ ಷೋನಲ್ಲಿ ಇದಕ್ಕೆ ಪ್ರಥಮ ಬಹುಮಾನ ಬಂದಿತ್ತಂತೆ ಎಂದಿದ್ದಾರೆ. ಅಷ್ಟೇ ಅಲ್ಲ- ‘ಬಹಳ ಜನ ‘ತೇಜಸ್ವಿಯವರ ಮನೆ ನಾಯಿ’ ಎಂಬ ವಿಚಾರವನ್ನು ಹೇಳಿದ್ದಾರೆ. ಅದು ನಿಜ; ಆದರೆ ‘ಕಿವಿ’ ಅಲ್ಲ; ‘ಮರಿ’! ಕಿವಿ ಹೊಂಬಣ್ಣ ಹಾಗೂ ಬಿಳಿ ಬಣ್ಣದಿಂದ ಕೂಡಿತ್ತು. ಇದು ಮರಿ ಕರಿ ಹಾಗೂ ಬಿಳಿ ಬಣ್ಣದಿಂದ ಕೂಡಿದೆ. ಶ್ರೀಮತಿ ರಾಜೇಶ್ವರಿಯವರೇ ಕನಸಿನ ಮನೆಯ ನಾಯಿಗಳು ಎಂಬ ಶೀರ್ಷಿಕೆಯಲ್ಲಿ ‘ಕೆಂಡಸಂಪಿಗೆ’ಯಲ್ಲಿ ಬರೆದಿದ್ದರು. ಈಗಲೂ ಆ ಪುಟಗಳು ನೋಡಲು ಲಭ್ಯವಿವೆ. ಅಲ್ಲಿ ಮರಿಯ ಚಿತ್ರವೂ ಸ್ಕೂಟರಿನ ಮೇಲೆ ಕುಳಿತಿರುವ ಕಿವಿಯ ಚಿತ್ರವೂ ನೋಡಸಿಗುತ್ತವೆ’ ಎಂದಿದ್ದಾರೆ. ಥ್ಯಾಂಕ್ಸ್ ಸತ್ಯನಾರಾಯಣ್.
ಮಹಾರಾಷ್ಟ್ರದ ಥಾಣೆ ಯಲ್ಲಿರುವ ನೀಲಾಂಜಲ ಬ್ಲಾಗ್ ನ ಸೌಪರ್ಣಿಕ ಹೊಳ್ಳ ರಾಜೇಶ್ವರಿ ಅವರ ಲೇಖನದ ಲಿಂಕ್ ಅನ್ನೂ ಹುಡುಕಿ ಕೊಟ್ಟು ‘ಈ ಸಲದ ತರಲೆ ಐಡಿಯಾ ಚೆನ್ನಾಗಿದೆ, ನಾಯಿಗೂ ಏನು ಡಿಮಾಂಡ್ ಬಂತು’
‘ ಅಂತ ಕಿರುನಗೆ ಬೀರಿದ್ದಾರೆ. ಸೌಪಿಗೂ ಥ್ಯಾಂಕ್ಸ್.
ಆಲಾಪಿನಿ ‘ತೇಜಸ್ವಿಯವರ ಮನೆಲಿಧ್ರು ಅಲ್ವ ಇವ್ರು?’ ಅಂತ ಕೇಳಿದ್ದಾರೆ. ಮಾಲತಿ ಶೆಣೈ ಅವರಿಗೆ ನಾಯಿ ಯಾವುದಾದರೇನು ಮುದ್ದಾಗಿದೆ ಎಂಬ ಭಾವ. ಪುತ್ತೂರಿನ ವೆಂಕಟಕೃಷ್ಣರಿಗೆ ಒಂದಂತೂ ಖಚಿತವಾಗಿದೆ -ಅದು ನಾಯಿ ಅಂತ.
ಈ ಎಲ್ಲದರ ಮಧ್ಯೆ ಅದು ಹುಲಿಯ ಇರಬೇಕು, ಲಂಕೇಶರ ನಾಯಿ ರಾಮು ಇರಬೇಕು ವಿಷ್ಣುವರ್ಧನ್ ಮನೆಯ ನಾಯಿ ಎಂದು ಗುರುತಿಸಿದವರೂ ಇದ್ದಾರೆ.
ಈಗ ವಿಷಯಕ್ಕೆ ಬರೋಣ-
ತೇಜಸ್ವಿಯವರ ಮನೆಯ ‘ಕಿವಿ’ ಅಂತೂ ಸುಪ್ರಸಿದ್ಧ. ಅದು ಸತ್ತ ನಂತರ ಆ ಜಾಗಕ್ಕೆ ‘ಮರಿ’ ಬಂತು. ಅದೂ ಅಪಘಾತಕ್ಕೆ ತುತ್ತಾದ ನಂತರ ಬಹುತೇಕ ಅದನ್ನೇ ಹೋಲುವ ಇನ್ನೊಂದು ‘ಜೂನಿಯರ್ ಮರಿ’ ಎಂದೇ ಕರೆಯಲ್ಪಡುತ್ತಿದ್ದ ಮರಿ ಬಂತು. ಇದು ತೇಜಸ್ವಿ ಅವರ ಮನೆಯ ನಾಯಿ ಎನ್ನುವುದಂತೂ ನಿಜ. ಆದರೆ ಕಿವಿಯೋ, ಮರಿಯೋ ಜೂನಿಯರ್ ಮರಿಯೋ…?
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





0 Comments