
ಗುರುಪ್ರಸಾದ್ ಡಿ ನಾರಾಯಣ್
ರಾಮ್ ಗೋಪಾಲ್ ವರ್ಮಾ ಅವರ ‘ಕಿಲ್ಲಿಂಗ್ ವೀರಪ್ಪನ್’ ಅತ್ಯುತ್ತಮವಾದ ಹಾಸ್ಯ ಸಿನೆಮಾ.. ದಯವಿಟ್ಟು ಇದು ಥ್ರಿಲ್ಲರ್ ಅಥವಾ ವೀರಪ್ಪನ್ ಬಗೆಗಿನ ನೈಜ ಸಿನೆಮಾ ಎಂಬ ತಪ್ಪು ಗ್ರಹಿಕೆಯಲ್ಲಿ ಹೋಗಿ ರಸಭಂಗ ಮಾಡಿಕೊಳ್ಳಬೇಡಿ….
ಶಿವರಾಜ್ ಕುಮಾರ್ ತಮ್ಮ ಹಾಸ್ಯ ಸಂಭಾಷಣೆ ಮತ್ತು ಮ್ಯಾನರಿಸಂಗಳಿಂದ ನಿಮ್ಮನ್ನು ನಕ್ಕೂ ನಗಿಸಿ ಹೊಟ್ಟೆ ಹುಣ್ಣಾಗಿಸದೆ ಇರರು.. ವಿಸ್ಕಿ ಕುಡಿದು ಮಾಡಿದ ಪ್ಲ್ಯಾನ್ ಫ್ಲಾಪ್ ಆಗುವುದರಿಂದ ಟೀ ಕುಡೀತಾ ವೀರಪ್ಪನ್ ನನ್ನು ಶೂಟ್ ಮಾಡುವ ಅತ್ಯಧ್ಬುತ ಹಾಸ್ಯ ಸನ್ನಿವೇಶಗಳಿವೆ..
ಪರುಲ್ ಯಾದವ್ ನಟನೆಯ ಶ್ರೀಯಾ ಎಂಬ ಪಾತ್ರವಂತೂ ವರ್ಣನಾತೀತ… ಅದು ವೀರಪ್ಪನ್ ಕೊಲ್ಲಲು ನಡೆಯುವ ಪ್ರತಿ ಕಾರ್ಯಾಚರಣೆಯಲ್ಲೂ ಕಾಣಿಸಿಕೊಳ್ಳುವ ಮೂಲಕ ತಮಾಷೆಯನ್ನು ದುಪ್ಪಟ್ಟು ಮಾಡುತ್ತಾರೆ..
ಆರ್ ಜಿ ವಿ ಈಸ್ ಅ ಕಿಲ್ಲಿಂಗ್ ಜೀನಿಯಸ್ ಮ್ಯಾನ್.

ನೂರಾರು ಆನೆಗಳನ್ನು, ಪೋಲಿಸರನ್ನು ಕೊಂದ ವೀರಪ್ಪನ್ ಹತ್ಯೆಯಾದ ನಂತರವೂ ಇನ್ನೇನು ಕೊಲ್ಲಬಹುದು ಎಂಬ ವಿಚಿತ್ರ ಪ್ರಶ್ನೆಯನ್ನು ನಾವು ಹಾಕಿಕೊಂಡರೆ ಆರ್ ಜಿ ವಿ ಎಂಬ ಕಲಾವಿದನನ್ನು (ಭೌತಿಕವಾಗಲ್ಲ) ದಿವಂಗತ ವೀರಪ್ಪನ್ ಕೊಂದಿದ್ದರೆ ಹಾಗೆಯೇ ಆರ್ ಜಿ ವಿ ಕೂಡ ವೀರಪ್ಪನ್ ನನ್ನು ತನ್ನದೇ ಸಿನಿಮೀಯ ರೀತಿಯಲ್ಲಿ ಕೊಂದಿದ್ದಾರೆ. ಇವೆರಡರಿಂದ ಪ್ರೇಕ್ಷಕನ ಸಿನೆಮಾ ಅನುಭವ ಕೂಡ ಹತನಾಗುತ್ತದೆ!

ಇತ್ತೀಚಿಗೆ ಹಲವು ಸಿನೆಮಾ ವಿಮರ್ಶಕರು ಚಿತ್ರ ಸೋತುಹೋಗಿಬಿಡುವ ಭಯದಲ್ಲಿ ನರಳುತ್ತಾರೆ ಅಥವಾ ಸಿನೆಮಾ ಗೆಲ್ಲಿಸಲು ಟೊಂಕ ಕಟ್ಟಿ ನಿಂತುಬಿಡುತ್ತಾರೆ. ತಾವು ಕೆಲಸ ಮಾಡುವ ಪತ್ರಿಕೆಗೆ, ಪ್ರೇಕ್ಷಕನಿಗೆ ಎಲ್ಲದಕ್ಕೂ ಮಿಗಿಲಾಗಿ ವಿಮರ್ಶೆ ಎಂಬ ತತ್ವಕ್ಕೆ ಬದ್ಧನಾಗಿರುವ ಬದಲು ತಾವು ನೋಡುವ ಸಿನೆಮಾದ ರಕ್ಷಕರಾಗಿ ಮಾರ್ಪಾಡಾಗುತ್ತಿರುವುದು ಇಂದಿನ ದುರಂತ!
ಚಿತ್ರದ ಸೋಲು ಅಥವಾ ಗೆಲುವು ವಿಮರ್ಶಕನಿಗೆ ನಗಣ್ಯವಾಗಬೇಕು. ನಿರ್ಮಾಪಕನ, ನಟನ, ನಿರ್ದೇಶಕನ ಬಗೆಗಿನ ವೈಯಕ್ತಿಕ ಕಾಳಜಿ ವಿಮರ್ಶೆಯ ಹೊರತಾಗಿರಬೇಕಷ್ಟೇ! ಅದು ವಿಮರ್ಶೆಯಲ್ಲಿ ಮಿಳಿತವಾಗಿ ಹೋದರೆ ವಿಮರ್ಶೆಯ ಗುಣಮಟ್ಟ ತೊಪ್ಪೆ!
ಒಬ್ಬ ಸಿನೆಮಾ ನಿರ್ದೇಶಕ ತನ್ನ ಸಿನೆಮಾ ಹೇಗೆ ಅತ್ಯುತ್ತಮವಾಗಿ ಮೂಡಿಬರಬೇಕು ಎಂದು ಹವಣಿಸಬೇಕೋ, ಹಾಗೆಯೇ ಒಬ್ಬ ಸಿನೆಮಾ ವಿಮರ್ಶಕ ತನ್ನ ವಿಮರ್ಶೆಯ ಗುಣಮಟ್ಟ, ಮತ್ತು ಅದರಲ್ಲಿರುವ ಇನ್ ಸೈಟ್ಸ್ ಕೂಡ ಗುಣಮಟ್ಟದ್ದಾಗಿರಬೇಕು ಎಂಬುದಕ್ಕೆ ಶ್ರಮಿಸಬೇಕೆ ಹೊರತು ಚಿತ್ರದ ಗೆಲುವಿಗಾಗಲೀ-ಸೋಲಿಗಗಾಗಲೀ ಅಲ್ಲ. ಅಥವಾ ಮತ್ತೊಬ್ಬ ವಿಮರ್ಶಕ ಈ ಸಿನೆಮಾದ ಬಗ್ಗೆ ಕಟುವಾಗಿ ಬರೆದರೆ ಏನು ಗತಿ ಎಂಬ ಭಯದಿಂದ ನರಳುವುದಂತೂ ಪತ್ರಿಕಾ ಲೋಕದ-ವಿಮರ್ಶಾ ಲೋಕದ ಭೀಕರ ಬಿಕ್ಕಟ್ಟುಗಳಲ್ಲಿ ಮೂಂಚೂಣಿಯದು!





ಹಲೋ ಸರ್, ಒಂದು ಗಂಭೀರವಾದ ಚಿತ್ರಕಥೆ ಹೊಂದಿರುವ ಚಿತ್ರ ನಿಮಗೆ ಹಾಸ್ಯ ಚಿತ್ರವಾಗಿ ಹೇಗೆ ಕಂಡಿತು ಎನ್ನುವುದು ಹಾಸ್ಯಾಸ್ಪದವಾಗಿದೆ.
ಇತ್ತೀಚೆಗೆ ಉತ್ತಮ ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಕನ್ನಡ ಚಿತ್ರಗಳು ಕೂಡ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಚಿತ್ರಗಳ ಬಗ್ಗೆ ಪೂರ್ವಗ್ರಹ ಪೀಡಿತ ಭಾವನೆಯಿಂದ ಮಾತನಾಡುವುದು ಸರಿಯಲ್ಲ.
ಕಿಲ್ಲಿಂಗ್ ವೀರಪ್ಪನ್ ಗಂಭೀರ ಚಿತ್ರಕಥೆಯ ಚಿತ್ರವನ್ನು ಹಾಸ್ಯ ಚಿತ್ರವೆಂದು ಕರೆದ ನಿಮ್ಮ ಲೇಖನವೇ ಹಾಸ್ಯಾಸ್ಪದವಾಗಿದೆ. ಇತ್ತೀಚೆಗೆ ಉತ್ತಮವಾದ ಕನ್ನಡ ಚಿತ್ರಗಳು ತೆರೆಯ ಮೇಲೆ ಬರುತ್ತಿವೆ. ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಿ, ಬೆಳೆಸಿ, ಉಳಿಸಿ, ಅದನ್ನು ಬಿಟ್ಟು ಪೂರ್ವಗ್ರಹ ಪೀಡಿತ ಭಾವನೆಯಿಂದ ಬರೆಯುವುದು ಸರಿಯಲ್ಲ.
KANDITHA ishtu kalapeyaagirllilla CHITRA..
sophesticated enisuva muttulakshmi onderadu kade asahaja anisodu bittare mikkiddela chennagi moodi bandide