ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಿತ್ತೆಸೆದ ಬಟ್ಟೆಗಳು ಮೈಯಡಿಯಲ್ಲಿ ಸಿಲುಕಿ..

ಸಂದೀಪ್ ಈಶಾನ್ಯ ಅವರ ಕವಿತೆ ‘ಎರಡು ದೇಹಗಳ ನಿರಂತರ ಹೊರಳಾಟದಿಂದ‘ ಅವಧಿಯಲ್ಲಿ ಪ್ರಕಟವಾಗಿತ್ತು .

ಆ ಕವಿತೆ ಇನ್ನೊಬ್ಬಕವಿಯಲ್ಲೂ ಕಿಚ್ಚು ಹಚ್ಚಿತು. ‘ಮಹೀ’ ಅನ್ನುವ ಹೆಸರಿನಲ್ಲಿ ಬರೆಯುವ ಪಶುವೈದ್ಯ ಡಾ ಮಹೇಂದ್ರ ‘ನುಣುಪಾದ ಕಾಲಿನ ಮೇಲೆ ಜಾರೋ ಬಂಡಿಯಾಟ..’ ಬರೆದರು.

ಇದನ್ನು ಓದಿದ ಗೀತಾ ಹೆಗ್ಡೆ ಕಲ್ಮನೆಯವರು ಅದಕ್ಕೆ ಹೌದು ನನಗೂ ಕೋಪ ಬರುತ್ತಿದೆ.. ಎಂದು ಪ್ರತಿಕ್ರಿಯಿಸಿದರು.  

ಮೈಸೂರಿನಿಂದ ನಾಗೇಶ ಮೈಸೂರು ಬರೆದರು – ಪಿಸುಗುಟ್ಟಿದ ಕತ್ತಲ ಮಾತು..

ಈ ಎಲ್ಲಾ ಕವನಗಳಿಗೆ ಕಿಚ್ಚು ಹಚ್ಚುವಂತೆ ಉತ್ತರ ಬಂದಿದ್ದು ಶಮ ನಂದಿಬೆಟ್ಟ ಅವರಿಂದ  

ನಿನ್ನ ಬೆನ್ನ ತಿರುವಿನ ಕಂದು ಮಚ್ಚೆಗೆ.. ಕವಿತೆ ಬರೆದರು

ಈಗ ಕಿರಣ್ ಕಂಗೊಕರ್ ಅದಕ್ಕೆ ಕವಿತೆ ಮಾಲೆ ಹೆಣೆದಿದ್ದಾರೆ ಓದಿ 

ಓದಿ 

love

 

ಅಷ್ಟೇ ಅಲ್ಲ, ಈ ಕವಿತೆಗಳು ನಿಮ್ಮೊಳಗೆ ಕಿಚ್ಚು ಹಚ್ಚಿದ್ದಲ್ಲಿ

ನೀವೂ ಕವಿತೆ ಮುಂದುವರೆಸಿ  

kiran kangokr

ಕಿರಣ್ ಕಂಗೊಕರ್ 

ಮುಖವಿಲ್ಲದ ಜನರು, ಮುಖವ ಮುಚ್ಚಿಕೊಳ್ಳಲು
ಮುಖವಾಡವನ್ನು ತೊಟ್ಟಿರುವ ಜಗದಲ್ಲಿ
ನೀನು ಸಹ ಮುಖವಾಡದ ಚಿಂತೆಯಲ್ಲಿರುವೆ,
ಬೇಡ ಗೆಳತಿ, ಮುಖವಾಡವಿರದ ಜೀವನ ನಡೆಸೋಣ..

lips1ಸುಕ್ಕು ಹಿಡಿತದ, ಹೂವಿನಂಥ ಹಾಸಿಗೆಯಲ್ಲಿ
ಬೆಳಕು ಸಹ ನಮ್ಮನ್ನು ನೋಡಬಾರದೆಂದು
ದೀಪ ಆರಿಸಿ ನಡೆಸಿದೆವು ನಮ್ಮ ಮಿಲನ ಮಹೋತ್ಸವವ
ಹಾಸಿಗೆ ಸುಕ್ಕು ಹಿಡಿದಿತ್ತು, ಬಾಡಿದ ಹೂವಿನಂತಾಗಿತ್ತು

ಚಂದ್ರ ಚಂದನದ ಬೆಳಕಲ್ಲಿ ಜೇನಿನಂಥ ರಸದೌತಣದಲ್ಲಿ
ಬಯಕೆಯಿರದ ನನ್ನ ಮನದಲಿ ನೀ ಬಯಕೆಯ ಹುಟ್ಟಿಸಿದೆ
ನನ್ನ ಬಾಹುಬಂಧನದಲಿ ಗಟ್ಟಿಯಾಗಿ ನಿನ್ನ ನಾ ಚುಂಬಿಸಿದೆ
ನೀನು ನಿನ್ನ ಮೋಹಮೈಮಾಟದ ಪಾಶದಲಿ ನನ್ನ ಬಂಧಿಸಿದೆ

ಪುರುಷ, ಪುರುಷನೆಂದು ದುರಹಂಕಾರಿಯಾದ ನನ್ನನು
ಮಿಲನದ ರುಚಿ ತೋರಿಸಿ, ಹಾಲಿಗಾಗಿ ಅಲೆಯುವ ಬೆಕ್ಕಿನಂತಾಗಿಸಿದೆ
ನೀನೆಂಬ ಮೋಹದಲಿ ಸಿಲುಕಿಸಿದೆ, ಕಾಮದಲಿ ಸೆಳೆದೆ
ನನ್ನನು ಕಣ್ಣಿರುವ ಕುರುಡನನ್ನಾಗಿಸಿದೆ, ಮಾತಾಡುವ ಮೌನಿಯನ್ನಾಗಿಸಿದೆ

ಕಿತ್ತೆಸೆದ ಬಟ್ಟೆಗಳು ಮೈಯಡಿಯಲ್ಲಿ ಸಿಲುಕಿ ಬೈಯುತಿಹವು ನಮ್ಮನು
ವಿರಹದ ಬೇಗೆಯಲ್ಲಿ ಸುಡುತ್ತಿದ್ದ ನಾನು, ರಮಿಸಿ ತಣ್ಣಗಾದೆ ನಿನ್ನನು
ಎಂದೂ ಸಿಗದ ಅವಳನ್ನು ನಿನ್ನಲ್ಲಿ ಕಂಡೆ ನಾನು
ನೀ ಕೊಟ್ಟೆ ಅವಳು ಕೊಡದ ಪ್ರೀತಿಯನ್ನು, ಸುಖವನ್ನು

ಇನ್ನೂ ರಿಂಗಿಸುತ್ತಿದೆ ನನ್ನ ಕಿವಿಯಲ್ಲಿ
ನಮ್ಮಿಬ್ಬರ ಮಿಲನ ಮಹೋತ್ಸವದ ಆಡಂಬರದ ಧ್ವನಿ
ಕಣ್ಣು ಮುಚ್ಚಿದರು ಕಾಣುತ್ತಿದೆ, ಕತ್ತಲಲ್ಲಿ ಅಸ್ಪಷ್ಟ ಕಂಡ
ಬೆವರ ತೊಟ್ಟಿಕ್ಕುತ್ತಿದ್ದ ನಿನ್ನ ದೇಹ ಸಿರಿ

ಕಿತ್ತೆಸೆ ಗೆಳತಿ, ಮುಖವಾಡ ಧರಿಸುವ ನಿನ್ನ ಆಲೋಚನೆಯನ್ನು
ಯಾರಿಗೂ ಅಂಜದೆ ಸೇರಿರುವೆ ನನ್ನ ನೀನು
ನನಗೆಂದು ನೀನಿರುವೆ, ನಿನಗಾಗಿ ನಾನಿರುವೆ
ನಾಚಿಕೆಯಿಲ್ಲದ ಜನ ಮಖವಾಡವ ತೊಟ್ಟಿರುವರಿನ್ನು
ನಮಗೆ ಬೇಕಿಲ್ಲ ಅದರ ಅವಶ್ಯಕತೆಯಿನ್ನು

 

‍ಲೇಖಕರು Admin

24 May, 2016

3 Comments

  1. Sangeeta Kalmane

    ಛೆ!ಎಂದೂ ಸಿಗದ ಅವಳನ್ನು ನೆನಪಿಸಿಕೊಳ್ಳಬೇಕಿತ್ತಾ? ಅಯ್ಯೋ ರಾಮಾ ರಾಮಾ!

    • Shama, Nandibetta

      ಸಿಗದವಳು ಹೇಗೋ ಸಿಕ್ಕಿದ ಭ್ರಮೆಯಲ್ಲಿ ಅಡಗಿದ ಖುಷಿಗಿರಬಹುದಾ

  2. ಲಿಂಗರಾಜು ಬಿ.ಎಸ್.

    ಸಿಕ್ಕಿದಾಗ ಸೋತಿದ್ದಕ್ಕೆ ನೆಪ ಹೇಳಿ ಕಾಲ್ಕಿತ್ತಿದ್ದನ್ನು ಹೀಗೂ ಹೇಳಬಹುದಾ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading