ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾವ್ಯ ಎಂ ಎನ್ ಹೊಸ ಕವಿತೆ – ಚೌಕದೊಳಗಿನ ಅಟ್ಟಹಾಸ

ಚೌಕದೊಳಗಿನ ಅಟ್ಟಹಾಸ

-ಕಾವ್ಯ ಎಂ.ಎನ್.

—-

ಕೃತಕ ಕತ್ತಲ ಕಾಮಕೇಳಿಗೆ

ಬೆಳಕು ಬೆತ್ತಲಾದ ಗಳಿಗೆ

ನನ್ನ ಕಿರುಬೆರಳ ಸಂಧಿಯಿಂದ

ಜಾರಿಬಿದ್ದ ನಕ್ಷತ್ರಗಳ ಸಾವು

ಈ ಹೊತ್ತಿನ ಕ್ಷಣಿಕ ಸತ್ಯ

ತೃಷೆಯ ತುಷ್ಠಿಗುಣ

ಹರೆಯದ ಬೇಸಿಗೆ ಕನಸು

ಉರಿವ ಜಡದೊಳಗೆ

ಹೊತ್ತಿದ ಅಮೂರ್ತದ ಕಿಡಿ

ಬತ್ತಿದ ನಾಲಿಗೆಗೆ ಒರತೆಯ ಹುಡುಕಾಡ

ಬೆವರು ಬದಲಾಯಿಸುವ ಕ್ರಿಯೆಗೆ

ಒಲವೆಂಬ ಲೇಪನ

ಅರ್ಥವಾಗದ ಸುಳ್ಳು.

ಭ್ರಮಿಸುವ ಭಾವದ ಜುಗಲುಬಂಧಿ

ಶಸ್ತ್ರವಿಲ್ಲದೆ ಹೂಡಿದ ಯುದ್ದದಲಿ

ನಿತ್ರಾಣಗೊಂಡ ನನ್ನ ದೇಹದ

ಮೇಲಾದ ದಾಳಿಗೆ ಪುರಾವೆಗಳೆ ಇಲ್ಲ

ಕಚ್ಚಿದ ದಿಂಬುಗಳ ಕಣಿವೆಯೊಳಗೆ

ತೂರಿ ಹೋದ ಹನಿಗಳ

ಲೆಕ್ಕಾಚಾರ ಬಂದೂಕಿನ ನಾಲೆಯಿಂದ ಹೊಮ್ಮಿದ ಸದ್ಧಿನಂತೆ

ಚೌಕದೊಳಗಿನ ಅಟ್ಟಹಾಸ

ಛಾವಣಿಯ ಕಿವಿಗೆ ಕಿವುಡ ಭಾವ

ಮಲಿನ ಕ್ಷಣಗಳಲಿ ನಷ್ಟವಾಗುವ

ರಸವಿರದ ನಿಮಿಷಗಳು

ಕೆಣಕಿದಷ್ಟು ನಿಗೂಡ.!!

‍ಲೇಖಕರು avadhi

27 November, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading