ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾವ್ಯಶ್ರೀ ಬಂಚ್..

ಭಾರವಾಗಿದೆ
ಕಾಫಿಕಪ್
ಖಾಲಿಯಿದೆ ಕುರ್ಚಿ

gujjar she

ಸ್ಟ್ರಾಂಗ್ ಕಾಫಿ
ಮುಗಿದಮೇಲೂ ಉಳಿದೇಬಿಡುತ್ತದೆ
ಗಾಢ ನೆನಪು

ಈ ಸಂಜೆ ಎಂದಿನಂತಿಲ್ಲ
ಈ ನೀರವ ಮೌನ ಎಂದಿನಂತಿಲ್ಲ
ಏನೋ ಮರೆತಿದ್ದೇವೆ ಎಂದಿನಂತೆ ನೆನಪಾಗುತಿಲ್ಲ

ಕೋಗಿಲೆಗೆ ವಸಂತನ ನಿರೀಕ್ಷೆ
ಅಡಗಿ ಕುಳಿತಿವೆ ಮರೆಯಲಿ
ಲೆಕ್ಕವಿಲ್ಲದಷ್ಟು ಬಿಕ್ಕುಗಳು..

ಕದ್ದಿಂಗಳ ರಾತ್ರಿ ಬೆಳದಿಂಗಳ ಕನಸಿದವಳಿಗೆ
ಮುಂಜಾವು ಮೋಡದ ಮರೆಯಲ್ಲಿ
ಸೂರ್ಯ ಪೂರ್ಣಚಂದಿರ

ನಾವು ಲಾಸ್ಟ್ ಬೆಂಚ್ ಹುಡುಗರು
ಬದುಕು ಹಠಮಾರಿ ಟೀಚರ್
ಅರ್ಥಮಾಡಿಸುತ್ತಲೇ ಇರುತ್ತದೆ..

coffee17ಎಚ್ಚರವಾಯಿತು
ಮರದೊಳಗಿಂದ ಹಕ್ಕಿಯ ಕಿಚಪಿಚ
ಆಹ್ ಬದುಕಿದ್ದೇವೆ ಇಬ್ಬರೂ..

ಇರುಳಿಡೀ ಉರಿಸುತ್ತೇನೆ
ಜೋಡಿ ದೀಪ
ಕಣ್ಣೀರು ಕರೆಗಟ್ಟುತ್ತದೆ

ಮಂಜು ಸುರಿವ ಇರುಳು
ಕಿಟಕಿಯಲ್ಲಿ ಮಿಣುಕು ಬೀದಿದೀಪ
ಚಂದ್ರನ ಪ್ರತಿರೂಪ

ಜೀವದಾಯಿನಿಯಿಂದಲೇ ಜೀವಹಾನಿಯೂ
ನೇಹ ನೇಯುವ ಕೈ
ನೋವ ಒರೆವಂತೆ

‍ಲೇಖಕರು Admin

13 December, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading