ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಲ ಲಂಪಟಿಗ..

ಸ್ಪೂರ್ತಿ ಗಿರೀಶ್
ಕಾಲ- ಹೆರುತ್ತಿದೆ ಒಂದೇ ಸಮನೆ
ಅಸಂಖ್ಯಾತ ಮನುಷ್ಯರನ್ನು
ಕುರಿಗಳಂತೆ
ತುಂಬುತ್ತಿದೆ ಅವರಲ್ಲಿ ದುಃಖವನ್ನು
ಹಸಿವನ್ನು  ಅತೀ ಆಸೆಗಳನ್ನು  ಒಟ್ಟಿಗೆ
ಕಾಲ ಯಾವತ್ತು  ಯಮವೇಗದಲ್ಲಿ ಓಡುತ್ತಾನೆ
ಜೋತು ಬಿದ್ದ ಮನುಷ್ಯ
ಸವೆದು ಮೂಳೆಗೊಂಡಿದ್ದಾನೆ
ಅಲ್ಲಲ್ಲಿ ಮಾಸಲು ರಕ್ತ ಕಾರಿಕೊಂಡು
ಕಾಲ ಈ ಲೋಕದ ಯಜಮಾನ
ಅನ್ನ ಹಿಡಿಮಣ್ಣನ್ನು
ಕೆಲವರಿಗೆ ದಯಾಳುವಾಗಿ
ಕೆಲವರಿಗೆ ದಂಡಿಯಾಗಿ ನೀಡುವವನು
ಕೆಲವರಿಗೆ ಬೆತ್ತಲಾಗಿ ನಿಲ್ಲಿಸಿ  ಮೈ ಹುಣ್ಣಾಗುವಂತೆ ಹೊಡೆದು
ಉಪವಾಸದಿಂದಲೇ ಸಾಯಿಸುವನು
ಕಾಲ ಲಂಪಟಿಗ
ಹೆಣ್ಣುಗಳನ್ನು  ಎಳವೆಯಲ್ಲಿ ಹಣ್ಣುಮಾಡಿ
ರುಚಿನೋಡುತ್ತಾನೆ
ಸಿಪ್ಪೆಯಂತೆ ಬದುಕಲೆಂದು ಎಸೆದುಬಿಡುತ್ತಾನೆ
ಮನುಷ್ಯ-
ಕಾಲವನ್ನು ಅಸಂಖ್ಯಾತ ಧರ್ಮಗಳಲ್ಲಿ ಬಂಧಿಸಿಟ್ಟು
ಉಸಿರುಗಟ್ಟಿಸಿ
ಶೈತ್ಯಗೊಳಿಸಿ ನಿಶ್ಚಲವಾಗಿಸಿ
ತನ್ನ ಮಕ್ಕಳಿಗೆ ಬಳುವಳಿ ಕೊಟ್ಟು
ಕಾಲಕ್ಕೆ ಸವಾಲು ಹಾಕುತ್ತಾನೆ

‍ಲೇಖಕರು admin

23 June, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading