ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಲವೂ ಓಡಿತಲ್ಲ ನನ್ನ ಜೊತೆ…

ನನ್ನ ಓಟ

ಪರೇಶ್ ಸರಾಫ್

ಓಡುತ್ತಲಿರುವೆ ನಾ

ದಾರಿಯರಿವಿಲ್ಲದೆಯೇ, ಸುತ್ತಲಿಷ್ಟು ಜನ

ನನ್ನಂಥವರೇ,

ದಿಕ್ಕಿನರಿವಿಲ್ಲದೆ ಕಕ್ಕಾಬಿಕ್ಕಿ ಕೆಲವರು

ಗುಂಪಿನಲ್ಲಿ ಗೋವಿಂದ ಎನ್ನುವವರು ಮತ್ತಿಷ್ಟು

“ನನ್ನದೇ ದಾರಿ” ಎಂಬ ಮದದಿ ಹಲವರು

ಮಂದೆಯೊಳು ನಾನೊಬ್ಬ

ದಾರಿಯುದ್ದಕೂ ಹೊಲಸು

ಮೂಗ ಮುಚ್ಚಿ ಸಿಡುಕುತ್ತ, ಗೊಣಗುತ್ತ

ಹೋಗುತಿಹೆ, “ಹೊಲಸು ಜಗ,

ಅವಿವೇಕದ ತೊಟ್ಟಿ” ಎಂದು

ಹೊಲಸು ತೆಗೆಯಬೇಕಾದವ

ನಾನೆಂದು ಅರಿಯದೆ,

“ಹೊಲಸಿನೊಳಗೊಬ್ಬ ಹೊಲಸಾದೆ”

ಒಳಗೊಂದು ಹುಸಿ ಕಲ್ಪನೆ

ನಾ ಶ್ರೇಷ್ಠನೆಂದು

ಹೊರಟಿರುವೆ ಸುಖ ಶಾಂತಿಯನರಸಿ

ಎಲ್ಲಿದೆಯದು, ಯಾವ ಊರಿನಲಿ?

ಮುಂದೆ ಸಿಗುವುದೆಂಬ ಆಸೆ

ನೂರೂರು ಕಳೆದರೂ ಆ ಊರ ಸುಳಿವಿಲ್ಲ

ಐಶ್ವರ್ಯದಾಸೆಯಲಿ ಲಕ್ಷಗಟ್ಟಲೆ ಕೂಡಿ

ಆ ದುಡ್ಡಿನಲ್ಲಿ ತಿಂದ ಅನ್ನ ಜೀರ್ಣಿಸಲಿಲ್ಲ

ಮನದಿ ಮೂಡಿತಾಗ ಭಾವನೆ

ಜೀವನ ಜಂಜಾಟವೆಂದು

ಜೀವನ ಸಂಧ್ಯೆ, ದೇಹದಲಿ ನೆರಿಗೆ

ಚೈತನ್ಯ ಮಾಯ, ಇಳಿ ಪ್ರಾಯ

ಕಣ್ಣೆದುರು ಹಾದು ಹೋಗುತಿದೆ ಜೀವನ

“ಎಲ್ಲಿದ್ದೆ ನಾನು? ಎಲ್ಲಿ ಬಂದೆ?”

ಸುಖ ಅಲ್ಲಿದೆಯೆಂದು ಎಲ್ಲ ಓಡಿದರು

ಓಡಿದೆ ನಾನೂ ಅವರ ಜೊತೆ

ನಾನಿದ್ದಲ್ಲೇ ಇತ್ತದು, ಬೆಪ್ಪ ನಾನು

ಓಡಿದೆ ಬೇರೆಲ್ಲೋ

ಈಗ ಪ್ರಶ್ನೆ ಮನದಲಿ

” ಮತ್ತೆ ಹೋಗಬಹುದೇ ತಿರುಗಿ ?”

ಮತ್ತೆ ಉತ್ತರ

“ಕಾಲವೂ ಓಡಿತಲ್ಲ ನನ್ನ ಜೊತೆ!”

‍ಲೇಖಕರು G

9 December, 2012

3 Comments

  1. mmshaik

    nice..

  2. Gopaal Wajapeyi

    ಎಷ್ಟೆಲ್ಲಾ ವಿಸ್ತಾರದ ಹೊಳಹು ನಿಮ್ಮದು…! ಓದಿದವರೆಲ್ಲ ಮೆಚ್ಚಿ ಅಹುದಹುದೆನ್ನುವಂತಿದೆ ನಿಮ್ಮ ಕವನ… !

  3. Prasanna Joshi

    chennagittu….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading