ನನಗಿನ್ನೂ ನೆನಪಿದೆ. ಲಂಕೇಶ್ ಪತ್ರಿಕೆಯ ಮೊದಲ ಸಂಚಿಕೆ ಬಿಡುಗಡೆಯಾದಾಗ ಬಹುಶಃ ನಾನಿನ್ನೂ ಮೊದಲ ವರ್ಷದ ಎಂಜಿನೀರಿಂಗ್ ವಿದ್ಯಾರ್ಥಿ. ಮೊದಲನೆಯ ಸಂಚಿಕೆಯ ಮುಖಪುಟದ ಲೇಖನ ‘ಬೆಂಡೆಕಾಯಿ ಗೊಜ್ಜು Vs. ಚಿಕನ್ ಪಲಾವ್’ ಅನ್ಸತ್ತೆ. ಅದಕ್ಕೆ ದಪ್ಪ ಬ್ರಶ್ನ ರೇಖೆಗಳನ್ನೊಳಗೊಂಡ ಕಾರ್ಟೂನ್ ಪ್ರಕಟವಾಗಿತ್ತು. ಅದು ಖಂಡಿತವಾಗಿಯೂ (ಅಂದು ಎಲ್ಲರಿಗೂ ಪರಿಚಿತರಾದ) ಬಿ ಜಿ ಗುಜ್ಜಾರಪ್ಪನವರ ಕೈಚಳಕವೇ ಇರಬೇಕು. ಕಾರ್ಟೂನ್ಗಳು ದಪ್ಪ ರೇಖೆಗಳಲ್ಲಿರಬೇಕು, ಅದೇಕೋ ನನಗೆ ಮೊದಲಿನಿಂದಲೂ ಆ ಬಗೆಯ ಕಾರ್ಟೂನ್ಗಳೇ ಇಷ್ಟ. ಆರ್.ಕೆ.ಲಕ್ಷ್ಮಣ್ ಇಷ್ಟವಾದದ್ದು ಹಾಗೆಯೇ. ನಂತರ ರಾಮಮೂರ್ತಿ (ಡೆಕ್ಕನ್ ಹೆರಾಲ್ಡ್) ದಪ್ಪ ರೇಖೆಗಳಲ್ಲಿಯೇ ಬರೆಯುತ್ತಿದ್ದ ಮಿ.ಸಿಟಿಝನ್ ಇಷ್ಟವಾಗುತ್ತಿದ್ದರು. ಅವರು ಪೆನ್ ಬಳಸಿ ಸಣ್ಣ ರೇಖೆಗಳ ಕಾರ್ಟೂನ್ ಬರೆಯುತ್ತಿದ್ದಂತೆ, ನನ್ನ ಇಷ್ಟ ದೂರವಾಯಿತು. ನಂತರದ ದಿನಗಳಲ್ಲಿ ಕಾರ್ಟೂನ್ಗಳನ್ನು ಮತ್ತೆ ಮೆಚ್ಚಿಕೊಳ್ಳುವಂತೆ ಮಾಡಿದವರೇ ಪ್ರೀತಿಯ ಗುಜ್ಜಾರ್. ಪ್ರಜಾವಾಣಿ ಬಳಗದ ಪತ್ರಿಕೆಗಳಿಗೆ ವರ್ಗಾವಣೆಯಾದ ನಂತರ, ಅವರ ಬ್ರಶ್ ಮತ್ತಷ್ಟು ಚುರುಕಾಯಿತು. ಕೊನೆಗೆ ರೈಲ್ವೆ ಟೈಮ್ ಟೇಬಲ್ ಅನ್ನೂ ಮತ್ತೆ ಮತ್ತೆ ತಿರುವಿಹಾಕುವಂಥ ಪುಸ್ತಕವನ್ನಾಗಿ ಮಾಡಿದ ಕೀರ್ತಿ ಗುಜ್ಜಾರ್ ಅವರದು.
ಅವರೊಬ್ಬ ಆತ್ಮೀಯ ಸ್ನೇಹಿತರೆಂದು ಹೇಳಿಕೊಳ್ಳುವುದೇ ನನಗೆ ಹೆಮ್ಮೆ.
– ಹಾಲ್ದೊಡ್ಡೇರಿ ಸುಧೀಂದ್ರ





0 Comments