
ಅರುಣ್ ಪುಷ್ಪದಂತ
ಪ್ರಶ್ನೆಗಳಿಗೆ ಉತ್ತರಿಸುವಾಗಲೆಲ್ಲಾ
ನನ್ನ ಉತ್ತರಗಳ ಸಾವಾಗಿಬಿಡುತ್ತವೆ
ಉತ್ತರಿಸಲು ತಿಳಿಯದೆಯೋ
ಉತ್ತರಿಸುವ ಕೆಲಸ ನನ್ನದಲ್ಲವೋ

ಉತ್ತರಿಸಿದ ಉತ್ತರಗಳಿಗೆ
ಅರ್ಥಹುಡುಕುವಾಗ
ನನ್ನ ಉತ್ತರಗಳು ಎಣ್ಣೆಯಲ್ಲಿ ಬೆಂದ
ದನದ ಎಲುಬಿನ ತುಕುಡಗಳಾಗಿ ಬಿಡುತ್ತವೆ
ಮೊನ್ನೆತಾನೆ ಮಡಿಕೆಯ ಸಮರಿಗೆ ಅಂಟಿದ
ಪ್ರೆಶ್ನೆಗಳ ಬಿಡಿಸಿಟ್ಟೇ
ಎಲ್ಲವೂ ಬಿಸಿಯ ತಾಪಕೆ
ಬೆವರತೊಡಗಿದೇ ಉತ್ತರ ತಿಳಿಯುತ್ತಿಲ್ಲ!
ಹಾ ನೆನಪಾಯ್ತು ನೆನ್ನೆಯಷ್ಟೇ
ಒಂದಷ್ಟು ಮೌನವು
ಬಿಸಿಯ ಬಿರಿಯಾನಿ ಕುಕ್ಕರ್
ಒಳಗೆ ಮಾತಾಡುತಿತ್ತು
ಉತ್ತರ ಎಂದರೆ ಕಾದ ಕಬ್ಬಿಣ ವಂತೆ
ಒಂದಲ್ಲ ಎರಡಲ್ಲ ಮೂರಾಗಿ
ಕೊನೆಗೆ ಕೊನರಾಗಿ
ಪ್ರೆಶ್ನೆ ಉತ್ತರವಾಗುವುದು
ಕಾದ ಪಾತ್ರೆಯೊಳಗೆ ಕೆಂಡವೋ
ಉತ್ತರವೋ ……





0 Comments