ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಣದಂತ ಜಾಣಕುರುಡು !

-ಕು ಸ ಮಧುಸೂದನ ರಂಗೇನಹಳ್ಳಿ

ನ್ಯಾಯದ ಗಂಟೆ!

ಇಲ್ಲವಾಗಿದೆ ಈಗ ನ್ಯಾಯಕ್ಕಾಗಿ ಗಂಟೆ ಬಾರಿಸಿ

ರಾಜರ ಗಮನ ಸೆಳೆಯುವ ಕಾಲ

ಈಗದೆಲ್ಲ ಪುಸ್ತಕದ ಬದನೆಕಾಯಿ

ರಾಜನಿಗೋ

ಕೇಳಿದರೂ ಕಿವಿ

ಕೇಳದಂತ ಜಾಣಕಿವುಡು

ಕಂಡರೂ ಕಣ್ಣು

ಕಾಣದಂತ ಜಾಣಕುರುಡು !

ಇನ್ನು ಮಂತ್ರಿಗಳದೋ ಊಟದ ಸಮಯ

ಬಡಿಸಿದಷ್ಟೂ ಎಲೆ ತುಂಬುತ್ತಿಲ್ಲ

ಹಸಿವು ಅಡಗಿ

ತೇಗು ಬರುತ್ತಿಲ್ಲ!

ಪ್ರಜೆಗಳದೊ ಯಥಾಪ್ರಕಾರದ ತೂಕಡಿಕೆ

ಗುಂಪಿನ ಮದ್ಯೆ ಕೂತ ಯಾವನೋ

ಸಂತೆಯೊಳು ಬಳ್ಳದಲಿ ಅಳೆದು ಮಾರುತ್ತಿದ್ದ

ಮುತ್ತುರತ್ನಗಳ ಕಥೆ ಹೇಳುತ್ತಿದ್ದಾನೆ ಹರಿಕಥೆಯಂತೆ

ರಾಗಿಯನ್ನೂ ಸೇರಿನಲ್ಲಿಯೂ

ಅಳೆದು ಗೊತ್ತಿರದ ಮೂರ್ಖರದೊ

ಮಾಮೂಲಿ ವರಸೆ

ಆ ಕಾಲವೇ ಚೆನ್ನಾಗಿತ್ತು.

‍ಲೇಖಕರು Admin

21 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading